ಕನ್ನಡ ಗಾದೆಗಳು ಮತ್ತು ವಿವರಣೆ | Gadegalu in Kannada

ಕನ್ನಡ ಗಾದೆಗಳು ಮತ್ತು ವಿವರಣೆ, gadegalu in kannada, gadegalu in kannada with explanation gade mathu in kannada with explanation in kannada

ಕನ್ನಡ ಗಾದೆಗಳು ಮತ್ತು ವಿವರಣೆ

ಈ ಲೇಖನದಲ್ಲಿ ನೀವು  ಪ್ರಸಿದ್ದ ಗಾದೆ ಮಾತುಗಳಾದ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?,ಹಣಕ್ಕಿಂತ ಗುಣ ಮುಖ್ಯ, ಹಾಸಿಗೆ ಇದ್ದಷ್ಟು ಕಾಲು ಚಾಚು,ತುಂಬಿದ ಕೊಡ ತುಳುಕುವುದಿಲ್ಲ, ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ,ಮಾಡಿದ್ದುಣ್ಣೋ ಮಹಾರಾಯ, ಕಟ್ಟುವುದು ಕಠಿಣ ಕೆಡಹುವುಡದು ಸುಲಭ, ಮಾತೆ ಮೃತ್ಯು – ಮಾತೆ ಮುತ್ತು, ಬೆಕ್ಕಿಗೆ ಆತ ಇಲಿಗೆ ಪ್ರಾಣ ಸಂಕಟ, ಅರಮನೆಗಿಂತಲೂ ನೆರೆಮನೆ ಲೇಸು, ಈ ಎಲ್ಲಾ ಗಾದೆಗಳ ವಿವರಣೆಯನ್ನು ಪಡೆಯುವರಿ

ಕನ್ನಡ ಗಾದೆಗಳು ಮತ್ತು ವಿವರಣೆ
ಕನ್ನಡ ಗಾದೆಗಳು ಮತ್ತು ವಿವರಣೆ

1) “ಹಣಕ್ಕಿಂತ ಗುಣ ಮುಖ್ಯ”

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಈ ಗಾದೆಮಾತುಗಳಾಗವೆ.

‘ ದುಡೇ ದೊಡ್ಡ ಮ ‘ ಹಣವಿಲ್ಲದವನ ಬಾಳು ಹೆಣದ ಹಾಗೆ ‘ , ‘ ಕಾಸಿದ್ರೆ ಕೈಲಾಸ ‘ , ‘ ಮೊದಲಾದ ಹೇಳಿಕೆಗಳು ಹಣದ ಗುಣವನ್ನು ಸಾರಿಹೇಳುತ್ತವೆ . ‘ ಹಣವೇ , ನಿನ್ನಯ ಗುಣವೆಷ್ಟು ವರ್ಣಿಸಲಿ ‘ ಎಂದು ದಾಸರು ಹಾಡಿದ್ದಾರೆ .
 
‘ ಸರ್ವ ಗುಣಾಃ ಕಾಂಚನ ಮಾಶ್ರಯಂತಿ ‘ – ಎಲ್ಲ ಗುಣಗಳೂ ಚಿನ್ನವನೇ ಎಂದರೆ ಹಣವನೇ ಆಶ್ರಯಿಸುತ್ತವೆ ಎಂದು ಸುಭಾಷಿತವು ಹೇಳುತ್ತದೆ . ಹಣವುಳ್ಳವರ ಅವಗುಣಗಳೆಲ್ಲವೂ ಮರೆಯಾಗುತ್ತವೆ . ಹಣವುಳ್ಳ ವ್ಯಕ್ತಿಗೌರವಕ್ಕೆ ಪಾತ್ರನಾಗುತ್ತಾನೆ .
 
ಹಣವಿದ್ದರೆ ಸಕಲ ಸುಖಸೌಲಭ್ಯಗಳನ್ನು ಪಡೆಯಬಹುದೆಂಬ ನಂಬಿಕೆಯೂ ಇದೆ . ಹೀಗೆ ಹಣದ ಗುಣವನ್ನು ವರ್ಣಿಸಲು ಸಾಕಷ್ಟು ಕಾರಣಗಳಿವೆ . ಹಣವಿರುವವರಿಗೆ ಸ್ನೇಹಿತರಿರುತ್ತಾರೆ . ಅವರಿಗೆ ಸಮೀಪ ಬಂಧುಗಳಿರುತ್ತಾರೆ .
 
ಪುಪಂಚದಲ್ಲಿ ಅವರೇ ನಿಜವಾದ ಮನುಷ್ಯರೆನಿಸುತ್ತಾರೆ . ಅವರು ಗೌರವದಿಂದ ಜೀವಿಸುತ್ತಾರೆ . ಹೀಗೆ ಹಣಕ್ಕೆ ವಿಶೇಷವಾದ ಶಕ್ತಿ ಇದೆ . ಆದರೆ ಈ ಗಾದೆಯಲ್ಲಿ ಹಣಕ್ಕಿಂತ ಗುಣವೇ ಶೇ ಹೇಳಲಾಗಿದೆ . ಹಣವು ಹತ್ತು ನಿನ್ನಿಂದ ಮತ್ತೆ ನನ್ನಿಂದ ಎಂದು ಪೇರಿಸುವುದಂತೆ .
 
ಹತ್ತು ರೂಪಾಯಿಗಳನ ಮತ್ತೆ ಹತ್ತು ರೂಪಾಯಿಗಳನ್ನು ಉಳಿಸಿ ಅದರೊಂದಿಗೆ ಕೂಡಿಡುವ ಮನಸ್ಸಾಗುವುದಂತೆ . ಹಾಗೆ ಮನಸ್ಸು ಹುಟ್ಟಿದಾಗ ಹೊಟ್ಟೆ ಬಟ್ಟೆಗಳನ್ನು ಕಟ್ಟಿ , ಜಿಪುಣತನದಿಂದ ಹಣವನ್ನು ಉಳಿಸಲು ತೊಡಗುತ್ತಾನೆ .
 
ಆಗ ಅವನಿಗೆ ಹಣವೇ ಮುಖ್ಯವಾಗಿ ತೋರುತ್ತೆ. ಯಾರೂ ಬೇಕೆನಿಸುವುದಿಲ್ಲ . ಹಣ ಸೇರಿದಂತೆ ಅಹಂಕಾರ ತಲೆಗೇರುತ್ತದೆ . ಹಣವಿಲ್ಲದವರನ್ನು ಬಡವರನ್ನು ತಾತ್ಸಾರದಿಂದ ನೋಡುತ್ತಾನೆ. ತನ್ನನ್ನು ಹೊಗಳುವವರು ಮಾತ್ರ ಅವನಿಗೆ ಗೆಳೆಯರು , ಆಪ್ತರು ಎನಿಸುತ್ತಾರೆ . 
ನೂರುಳ್ಳವನು ಸಾವಿರವನ್ನೂ ಸಾವಿರವುಳ್ಳವನು ಲಕ್ಷವನ್ನೂ ಲಕ್ಷಾಧಿಪನು ರಾಜ್ಯವನ್ನೂ ರಾಜ್ಯವುಳ್ಳವನು ಸ್ವರ್ಗವನ್ನೂ ಒಂದಾದ ಮೇಲೆ ಒಂದರಂತೆ ಬಯಸುತ್ತಲೇ ಇರುತ್ತಾನೆ. ಹಣಕ್ಕೆ ದಾನ, ಭೋಗ , ನಾಶವೆಂಬ ಮೂರು ಗತಿಗಳಿವೆ .
 
ಯಾರು ದಾನ ಮಾಡದೇ , ಅನುಭವಿಸದೇ ಇರುವನೋ , ಅವನ ಹಣಕ್ಕೆ ಮೂರನೆಯ ಗತಿ ಎಂದರೆ ನಾಶವೇ ದಾರಿಯಾಗುತ್ತದೆ . ಹಣವಿದ್ದಾಗ ದೊರೆಯುತ್ತಿದ್ದ ಗೌರವಾದರಗಳು ಹಣ ದೋಂದಿಗೇ ಹೋಗುತ್ತವೆ. ಗುಣವಂತರಲ್ಲಿ ಹಣವಿದ್ದರೆ ಅದು ಪರೋಪಕಾರಕ್ಕಾಗಿಯೇ ವಿನಾ ಸ್ವಾರ್ಥಕ್ಕಾಗಿಯಲ್ಲ.
 
ಅವರಿಗೆ ‘ ದಾನಾಯ ಲಕ್ಷ್ಮೀ- ದಾನ ಮಾಡಲೆಂದೇ ಸಂಪತ್ತು . ಯಾರಿಗೂ ತಿಳಿಯದಂತೆ ದಾನಮಾಡುವುದು, ಉಪಕಾರಮಾಡುವುದು , ಕ್ಷಮಾ ಗುಣ , ಬಡವರಿಗೆ ಕೇಳುವುದಕ್ಕೆ ಮುಂಚೆಯೇ ನೀಡುವುದು , ಒಳ್ಳೆಯದನೇ ಯೋಚಿಸುವುದು ಗುಣವಂತರ ಲಕ್ಷಣಗಳಾಗಿವೆ .
 
ದುರ್ಜನರಲ್ಲಿ ಹಣ ಸೇರಿದಾಗ ದುರ್ಗುಣಗಳೇ ಬೆಳೆಯುತ್ತವೆ . ಸಜ್ಜನರಲ್ಲಿ ಗುಣವಂತರಲ್ಲಿರುವ ಹಣ ಸದ್ವಿನಿಯೋಗ ವಾಗುತ್ತದೆ . ಹಣದಿಂದಾಗಿ ಅವರ ಗುಣಗಳು ಅವಗುಣಗಳಾಗುವುದಿಲ್ಲ. ಆದ್ದರಿಂದ ಹಣಕ್ಕಿಂತ ಗುಣವೇ ಮೇಲು ಎನಿಸುತ್ತದೆ ಎಂಬುದು ಈ ಗಾದೆ ಮಾತಿನ ಸ್ವಾರಸ್ಯವಾಗಿದೆ.

2) “ಹಾಸಿಗೆ ಇದ್ದಷ್ಟು ಕಾಲು ಚಾಚು “

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಈ ಗಾದೆಮಾತುಗಳಾಗವೆ.

ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ‘ಮಿತಿಯನ್ನು ಅರಿತು ಬಾಳು ‘ ಎಂಬ ಉಪದೇಶವನ್ನು ನೀಡುತ್ತದೆ . ” ಆಸೆಯೇ ದುಃಖಕ್ಕೆ ಕಾರಣ ‘ ಎನ್ನುವ ಮಾತೂ ‘ ಆಸೆಯೇ ಪ್ರಗತಿಗೆ ಮೂಲ ‘ ಎನ್ನುವ ಮಾತೂ ನಾವು ಕೇಳಿದ್ದೇವೆ .

ಇವೆರಡು ಪರಸ್ಪರ ವಿರುದ್ಧವಾಗಿ ಕಂಡರೂ , ಈ ಎರಡನ್ನೂ ಹೊಂದಿಸಿ , “ ಆಸೆಯಿರಬೇಕು , ಆಸೆಗೆ ಮಿತಿಯಿರಬೇಕು ” ಎಂದು ಹೇಳಬಹುದು .

ಯಾವುದೇ ಕೆಲಸಕ್ಕೆ ಕೈ ಹಾಕಬೇಕಾದರೂ ನಮ್ಮ ಶಕ್ತಿ ಸಾಮರ್ಥ್ಯ, ಸೌಕರ್ಯಗಳನ್ನು ಗಮನಿಸಬೇಕು . ಶಕ್ತಿ ಮೀರಿ ಕೈ ಚಾಚುವುದಕ್ಕೆ ಹೋದರೆ ಅಥವಾ ಹಾಸಿಗೆಯನ್ನು ಮೀರಿ ಕಾಲು ಚಾಚಿದರೆ ಅಪಾಯ , ತೊಂದರೆ ತಪ್ಪಿದ್ದಲ್ಲ .

ಒಬ್ಬ ಬಡವ ತನ್ನ ಹೊಲ , ಗದ್ದೆ , ಮನೆ , ಎಲ್ಲವನ್ನೂ ಮಾರಿ ಸಂಭ್ರಮದಿಂದ ತನ್ನ ಮಗಳ ಮದುವೆ ಮಾಡಲು ಮದುವೆ ಸಿದ್ಧನಿದ್ದ . ಅವನ ಹಿತೈಷಿಯೊಬ್ಬನು ” ಹೀಗೆಲ್ಲಾ ಮಾಡಬೇಡ , ಇದ್ದ ಬದ್ದುದನ್ನೆಲ್ಲಾ ಮಾರಿ , ಮದುವೆ ಮಾಡಬೇಡ  ನಿನ್ನ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನೆ ಖರ್ಚುಮಾಡು , ಶಕ್ತಿಮೀರಿ ಖರ್ಚುಬೇಡ ; ಹಾಸಿಗೆ ಇದ್ದಷ್ಟು ಕಾಲು ಚಾಚು ‘ ಎಂದು ಹಿತನುಡಿದನು .

ಹಾಗೆಯೇ ನಡೆದ ಬಡವ ಮುಂದೆ ಜೀವನದಲ್ಲಿ ಕಷ್ಟಪಡಲಿಲ್ಲ  ಆದ್ದರಿಂದ ಯಾರೇ ಆಗಲಿ ಅವರ ಶಕ್ತಿ ಎಷ್ಟಿದೆಯೋ ಅಷ್ಟು ಮಾತ್ರ ಮಾಡಬೇಕು ಎಂಬುದು ಈ ಗಾದೆಮಾತಿನ ಸಾರಾಂಶವಾಗಿದೆ ಈ ಮಾತು ಪ್ರತಿಯೊಬ್ಬರಿಗು  ಅನ್ವಯಿಸುತ್ತದೆ.

3) “ತುಂಬಿದ ಕೊಡ ತುಳುಕುವುದಿಲ್ಲ”

ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆಗಳು ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು ಈ ಗಾದೆಮಾತುಗಳಾಗವೆ.

ತುಂಬಿದ ಕೊಡ ತುಳುಕುವುದಿಲ್ಲ ಇದು ಒಂದು ಅರ್ಥಪೂರ್ಣವಾದ ನೀತಿಬೋಧಕವಾದ ಗಾದೆಯಾಗಿದೆ . ಈ ಗಾದೆಯ ಮಾತಿನ ಅರ್ಥ ಎಷ್ಟು ಸತ್ಯವೋ ಇದರಿಂದ ಹೊರಡುವ ಲಕ್ಷಾರ್ಥವೂ ಅಷ್ಟೇ ಮನೋಜ್ಞವಾಗಿದೆ .
 
ಒಂದು ಕೊಡದಲ್ಲಿ ತುಂಬ ನೀರನ್ನು ತುಂಬಿ ಅನಂತರ ಅದನ್ನು ತೆಗೆದುಕೊಂಡು ಹೋದರೆ ನೀರಿನ ಸ್ವಲ್ಪ ಭಾಗವೂ ಅಲುಗಾಟದಿಂದ ತುಳುಕುವುದಿಲ್ಲ – ಚೆಲ್ಲುವುದಿಲ್ಲ . ಇದರ ಬದಲು ಕೊಡ ಪೂರ್ತಿ ತುಂಬುವ ಮುನ್ನ ಕೊಡವನ್ನು ಒಯ್ದರೆ ಅಲುಗಾಟದಿಂದ ಕಲುಕಿ ನೀರು ತುಳುಕುತ್ತದೆ .
 
ಈ ಅಲುಗಾಟ ದಿಂದ – ತುಳುಕಾಟದಿಂದ ಹೊರಡುವ ಶಬ್ದವೇ ಟೊಳ್ಳಾಗಿದ್ದು , ನೀರು ತುಂಬಿಲ್ಲ ‘ ಸೂಚಿಸುತ್ತಿರುತ್ತದೆ . ಹಾಗೆಯೇ ನಿಜವಾದ ವಿದ್ಯಾವಂತನಾದವನು , ನೀತಿಯನ್ನು ಚೆನ್ನಾಗಿ ಮನದಟ್ಟು ಮಾಡಿಕೊಂಡ ಪ್ರಾಜ್ಞವಂತನು  ಮಾತನಾಡುವುದಿಲ್ಲ , ‘ ಕಚ್ಚುವ ನಾಯಿ ಬೊಗಳುವುದಿಲ್ಲ ‘ ಎಂಬಂತೆ ತುಂಬಾ ವಿದ್ಯಾವಂತ ಗಂಭೀರವಾಗಿರುತ್ತಾರೆ .
 
ಹೀಗೆಂದಾಕ್ಷಣ  ಗಂಬೀರವಾಗಿರುವವರೆಲ್ಲ ವಿದ್ಯಾವಂತರೆಂದು ತೀರ್ಮಾನಿಸಬೇಕಾಗಿಲ್ಲ, ಆದರೆ ಅಲ್ಪವಿದ್ಯಾವಂತನಾದವನು ಮಾತ್ರ ತನಗೆ ಎಲ್ಲವೂ ತಿಳಿದಿದೆ ಎಂದು ತೋರ್ಪಡಿಸಿಕೊಳ್ಳಲು ಯತ್ನಿಸುತ್ತಾ ಹೆಚ್ಚು ಹೆಚ್ಚು ಅನಾವಶ್ಯಕವಾಗಿ ಮಾತನಾಡಿ ತನ್ನ  ಟೊಳ್ಳುತನವನ್ನು ಪ್ರದರ್ಷಿಸಿಕೊಳ್ಳುತ್ತಾನೆ. ಹೀಗೆ ಬಾಳುವುದು ಸರಿಯಲ್ಲ ಎನ್ನುವುದು ಏ ಗಾದೆಯ ಸಾರಾಂಶವಾಗಿದೆ.
 

4) “ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ”

 
             ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.
 
ಉಪ್ಪಿಲ್ಲದಿದ್ದರೆ ಯಾವುದೇ ಊಟವು ರುಚಿಸದು. ಉಪ್ಪು ಎಲ್ಲ ಪಾಕ ವೈವಿಧ್ಯಗಳಿಗೂ ಪ್ರಧಾನ. ಅದೇ ರೀತಿ ತಾಯಿಯು ಕೂಡ. ಉಪ್ಪಿಲ್ಲದಿದ್ದರೆ ಊಟ ಹೇಗೆ ರುಚಿಸುವುದಿಲ್ಲವೋ. ಅದೇ ರೀತಿ ತಾಯಿ ಇರದಿದ್ದರೆ ಜೀವನವೇ ಅಂಧಕಾರವಾಗಿರುವುದು.
 
ತಾಯಿ ನಮ್ಮನ್ನು ಕತ್ತಲಿನಿಂದ ಬೆಳಕಿನೆಡೆಗೆ ನಡೆಸುವ ಗುರುವಿಧಮತೆ, ಅಡುಗೆಗೆ ಬಳಸುವ ಸಾಸಿವೆ, ಜೀರಿಗೆ, ಮೆಂತ್ಯ, ಕೊತ್ತಂಬರಿ, ಮೆಣಸಿನ ಕಾಯಿ ಇತ್ಯಾದಿ ವಸ್ತುಗಳು ಬೇರೆ ಬೇರೆ ರುಚಿಯನ್ನು ಕೊಡುವದಿಲ್ಲ.
 
ಹಾಗೆಯೇ ಮನೆಯಲ್ಲಿ ತಂದೆ, ಅಣ್ಣ, ಅಕ್ಕ, ತಂಗಿ, ಮಾವ, ಅತ್ತೆ ಮುಂತಾಗಿ ನಾನಾ ರೀತಿಯ ಬಂಧುಗಳಿದ್ದರೂ ತಾಯಿಯಷ್ಟು ಮಿಗಿಲಾದ ಬಂಧುಗಳಿಲ್ಲ.
 
ಆದ್ದರಿಂದಲೇ ಜಾನಪದ ತ್ರಿಪದಿಯಲ್ಲಿ ಗರತಿ “ಯಾರು ಆದರೂ ಹೆತ್ತ ತಾಯಂತೆ ಅದಾರೋ ಸಾವಿರ ಸೌದೆ ಒಲೆಯಲ್ಲಿ ಉರಿದರೋ ದೀವಿಗೆಯಂತೆ ಬೆಳಕುಂಟೆ”ಎಂದು ತಾಯಿ ಹೊಗಳಿದ್ದಾರೆ.
 
ಹೆತ್ತತಾಯಿ ದೇವರು ನಮಗೆ ನೀಡಿರುವ ಅಮೂಲ್ಯ ಆಸ್ತಿ. ಆ ಆಸ್ತಿಯನ್ನು ಜೋಪಾನವಾಗಿ ಕಾಪಾಡಬೇಕಾದದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಇಂತಹ ಕಷ್ಟ ಬಂದರು ಇತರ ಬಂಧುಗಳು ನಮ್ಮಿಂದ ದೂರವಾದರೂ ನಮ್ಮನ್ನು ಅವಳು ಕೈಬಿಡಳು. ಆದ್ದರಿಂದ “ತಾಯಿಗಿಂತ ಬಂಧುವಿಲ್ಲ” ಎಂಬ ಮಾತು ಈ ಗಾದೆ ಮಾತಿನ ಸಾರಾಂಶವಾಗಿದೆ.
 

5) “ಮಾಡಿದ್ದುಣ್ಣೋ ಮಹಾರಾಯ”

 
            ಗಾದೆಗಳು ವೇದಗಳಿಗೆ ಸಮ, ಗಾದೆಗಳು ಹಿರಿಯರ ಅನುಭವದ ಮಾತುಗಳಾಗಿವೆ. ಮಾಡಿದ್ದುಣ್ಣೋ ಮಾರಾಯ ಇದು ಒಂದು ಜನಪ್ರಿಯ ಗಾದೆ ಮಾತಾಗಿದ್ದು; ನಾವು ಮಾಡಿದ ಕೆಲಸದ ಪ್ರತಿಫಲ ಒಳಿತಾಗಲಿ ಕೆಡುಕಾಗಲಿ ನಾವೇ ಅನುಭವಿಸಬೇಕು ಎಂಬುದನ್ನು ತಿಳಿಸುತ್ತದೆ.
 
ವ್ಯಕ್ತಿ ತಾನು ಮಾಡಿದ ಕರ್ಮಗಳ ಫಲವನ್ನು ತಾನೇ ಅನುಭವಿಸಬೇಕು. ಬೇರೆ ಯಾರೂ ಅದರ ಫಲಗಳನ್ನು ಅನುಭವಿಸಲಾರರು ಎಂಬುದನ್ನು ಹೇಳುತ್ತದೆ.
 
ಒಳ್ಳೆಯ ಕರ್ಮಗಳನ್ನು ಮಾಡಿದವರಿಗೆ ಒಳ್ಳೆಯ ಫಲಗಳು, ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಕೆಟ್ಟ ಫಲಗಳು ಉಂಟಾಗುವುದು ಖಚಿತ ಎಂಬುದನ್ನು ಇಲ್ಲಿ ಕಾಣಬಹುದಾಗಿದೆ.
 
ಆದ್ದರಿಂದ ನಾವು ಯಾವುದೇ ಕೆಲಸ ಮಾಡಬೇಕಾದರೂ ಅದರಿಂದಾಗುವ ಪರಿಣಾಮವೇನೆಂದು ಯೋಚನೆ ಮಾಡಬೇಕು. ಕೃತ್ಯ ಮಾಡಿದ ಮೇಲೆ ಪಶ್ಚಾತ್ತಾಪ ಪಟ್ಟರೆ ಏನೂ ಪ್ರಯೋಜನವಿಲ್ಲ.
 
ತಾನು ಮಾಡಿದ ಕರ್ಮಗಳ ಫಲವನ್ನು ತಾನು ಅನುಭವಿಸಿಯೇ ತೀರಬೇಕು.
 
ಬೆಳೆಯ ಕಾಳನ್ನು ಬಿತ್ತಿದರೆ ಬೆಳೆ ಬೆಳೆಯುವುದಲ್ಲದೆ ಕಳೆ ಬೀಜ ಬಿತ್ತಿದರೆ ಬೆಳೆ ಬೆಳೆಯುವುದೇ?  ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ತನ್ನ ಸ್ವಾರ್ಥವನ್ನು ಮರೆತು ಸಮಾಜಮುಖಿಯಾಗಿ; ಎಲ್ಲರಿಗೂ ಉಪಯೋಗವಾಗುವಂತಹ ಕೆಲಸಗಳನ್ನು ಮಾಡಬೇಕು.
 
ಅದನ್ನು ಬಿಟ್ಟು ತನ್ನ ಸ್ವಾರ್ಥಕ್ಕಾಗಿ ಕೆಟ್ಟ ಮಾರ್ಗವನ್ನು ಅನುಸರಿಸಿದರೆ ಅದರ ಪರಿಣಾಮವೂ ಕೆಟ್ಟದ್ದೇ ಆಗುತ್ತದೆ. ಇದರಿಂದ ಯಾರೂ ತಪ್ಪಿಸಿಕೊಳ್ಳಲಾರರು ಎಂಬುದನ್ನು ಈ ಗಾದೆ ಮಾತಿನ ಸ್ವಾರಸ್ಯವಾಗಿದೆ.
 

6) “ಕಟ್ಟುವುದು ಕಠಿಣ ಕೆಡಹುವುಡದು ಸುಲಭ”

 
 ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ
 
  ಕಟ್ಟುವುದು ಕಠಿಣ ಕೆಡಹುವುಡದು ಸುಲಭ. ಯಾವುದೇ ಕೆಲಸವನ್ನು ಸರಿಯಾಗಿ ಮಾಡಬೇಕಾದರೆ ಕಷ್ಟಪಡಬೇಕು. ಆದರೆ ಹಾಳು ಮಾಡಲು ಕಷ್ಟಪಡಬೇಕಾಗಿಯೂ ಇಲ್ಲ. “ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ” ಎಂಬ ಈ ಗಾದೆಯು ಇದೆ ಅರ್ಥವನ್ನು ಕೊಡುತ್ತದೆ.
 
ಒಬ್ಬ ಕುಂಬಾರ ಮಡಕೆಗಳನ್ನು ಮಾಡಲು ಮಣ್ಣು ತಂದು ಅರಳನ್ನು ಬೇರ್ಪಡಿಸಿ ಮಣ್ಣನ್ನು ಹದಮಾಡಿ ಕಷ್ಟಪಟ್ಟು ಮಡಿಕೆಯನ್ನು ಮಾಡುತ್ತಾನೆ.
 
ಆದರೆ ಆ ಮಡಿಕೆಯನ್ನು ಒಡೆಯಲು ಒಂದು ದೊಣ್ಣೆ ಪೆಟ್ಟು ಸಾಕು.
 
ಯಾವುದೇ ಒಂದು ಹಾಲು ಮಾಡುವುದು ಸುಲಭ ಪ್ರಾಚೀನ ಭಾರತೀಯರು ಕಠಿಣ ಶ್ರಮವಹಿಸಿ ಭಾರತದ ಪ್ರಾಚೀನ ವಾಸ್ತು ಶಿಲ್ಪಗಳನ್ನು ನಿರ್ಮಿಸಿದರು.
 
ಆದರೆ ವಿದೇಶಿಯರು ಒಂದು ಕ್ಷಣ ಮಾತ್ರದಲ್ಲಿ ವಾಸ್ತು ಶಿಲ್ಪಗಳನ್ನು ಕೆಡವಿ ಹಾಕಿದರು.
 
ಹಾಗೆಯೇ ಮನುಷ್ಯ ತನ್ನ ಉತ್ತಮವಾದ ಜೀವನದ ಭವಿಷ್ಯವನ್ನು ನಿರ್ಮಿಸಲು ಜೀವನವೆಲ್ಲ ಕಷ್ಟಪಡಬೇಕು.
 
ಆದರೆ ವ್ಯಕ್ತಿತ್ವ ಹಾಳು ಮಾಡಿಕೊಳ್ಳುವುದಕ್ಕೆ ಒಂದರಗಳಿಗೆ ಸಾಕು. ಒಂದು ಕೊಡ ಹಾಲು ಕೆಡಲು ತೊಟ್ಟು ಹುಳಿ ಸಾಕಲ್ಲವೇ? ಆದ್ದರಿಂದ ಮಾನವ ತನ್ನ ಘಟನೆಯನ್ನರಿತು ಕಾರ್ಯನಿರ್ವಹಿಸಬೇಕು ಎಂಬುದನ್ನು ಪ್ರಸ್ತುತ ಗಾದೆಯು ಸಾರಾಂಶವಾದೆ.
 

ಕನ್ನಡ ಗಾದೆಗಳು ಮತ್ತು ವಿವರಣೆ

7) “ಮಾತೆ ಮೃತ್ಯು – ಮಾತೆ ಮುತ್ತು”

 
             ಗಾದೆ ವೇದಕ್ಕೆ ಸಮಾನ. ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.
 
ಈ ಗಾದೆಯು ನಿಮ್ಮ ಮಾತಿನ ಮಹತ್ವವನ್ನು ತಿಳಿಸುತ್ತದೆ. ಮಾತು ನಮ್ಮ ವ್ಯಕ್ತಿತ್ವದ ಕನ್ನಡಿಯಾಗಿದೆ. ನಮ್ಮ ಬೇಕು ಅಭಿಪ್ರಾಯಗಳನ್ನು ಬೇರೆಯವರಿಗೆ ಮಾತುಗಳ ಮೂಲಕ ತಿಳಿಸುತ್ತೇವೆ. ಹಾಗೇ ಅವರಿಂದ ತಿಳಿಯುತ್ತೇವೆ. “ಮಾತು ಬಲ್ಲವ ಮಾಣಿಕ್ಯ ತಂಡ. ಮಾತರಿಯಾದವ ಜಗಳ ತಂದ “.
 
ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು. ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಗಾದೆ ಮಾತುಗಳು ಕೂಡ ಮಾತಿನ ಮಹತ್ವವನ್ನು ತಿಳಿಸುತ್ತದೆ. ಅಂತೆಯೇ ಬಸವಣ್ಣನವರು “
 
ನುಡಿದರೆ ಮುತ್ತಿನ ಹಾರದಂತಿರಬೇಕುಲಿಂಗಮೆಚ್ಚಿ ಅಹುದಹುದೆನಬೇಕು ಎಂದು ಹೇಳಿದ್ದಾರೆ
ಮಾತು ಹಿತಮಿತವಾಗಿ ಕೇಳುಗರಿಗೆ ಮಧುರವಾಗಿ ಮುತ್ತಿನಂತಿರಬೇಕು ನಯವಾದ ವಿನಯ ಪೂರ್ವಿಕವಾದ ಮಾತು ಕೇಳುಗರಿಗೆ ಸಂತೋಷವನ್ನುಂಟು ಮಾಡುತ್ತದೆ. ಹಾಗೆ ಜಗಳಕ್ಕೆ ಕಾರಣವಾಗಬಹುದು.
 
ಕಠೋರವಾದ ಮಾತುಗಳು ಇತರರಿಗೆ ನೋವನ್ನು ತರಬಲ್ಲವು. ಆದ್ದರಿಂದ ಮಾತು ಮುತ್ತಿನಂತಿರಬೇಕು. ಒಳ್ಳೆಯ ಮಾತು ಸ್ನೇಹ ಸಂಬಂಧವನ್ನು ಬೆಳೆಸಿದರೆ ಕೆಟ್ಟಮಾತು ಒಡಕ್ಕನ್ನು ಹುಟ್ಟುಹಾಕುತ್ತದೆ.
 
ಅದಕ್ಕಾಗಿಯೇ ಸರ್ವಜ್ಞ ಕವಿಯು “ಮಾತಿನಿಂ ನಗೆನುಡಿಯು ಮಾತಿನಿಂ ನಗೆನುಡಿಯು ಮಾತಿನಿಂ ಹಗೆ ಹತಿಯು ಮಾತಿನಿಂ ಸರ್ಪಸಂಪದವು ಲೋಕಕ್ಕೆ ಮಾತೆ ಮಾಣಿಕ್ಯವು” ಎಂದಿದ್ದಾನೆ.
 
ಆದುದರಿಂದ ಮಾತು ಮೃದುವಾಗಿದ್ದರೆ ಮುತ್ತಿನಂತ ಮಾತು ಎಂದು ಮಾತು ಒರಟಾಗಿದ್ದರೆ ಮೃತ್ಯುವನ್ನು ತರಬಲ್ಲದು ಎಂದು ಎಚ್ಚರಿಕೆಯಿಂದ ಮಾತನಾಡಬೇಕು ಎಂಬದು ಈ ಗಾದೆ ಮಾತಿನ ಸಾರಾಂಶವಾಗಿದೆ.
 

8) “ಬೆಕ್ಕಿಗೆ ಆತ ಇಲಿಗೆ ಪ್ರಾಣ ಸಂಕಟ”

 
ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ವಾಮಾನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ.
 
ಬಲಿಶಾಲಿಗಳು ಶ್ರೀಮಂತರ ಹುಡುಕಾಟ ದುರ್ಬಲರಿಗೆ, ಕೆಳವರ್ಗದವರಿಗೆ ಬಡವರಿಗೆ ಸಂಕಟವನ್ನು ಉಂಟುಮಾಡುತ್ತದೆ ಎಂಬ ಅರ್ಥವನ್ನು ಈ ಗಾದೆ ನೀಡುತ್ತದೆ.
 
ಇಲ್ಲಿ ಬೆಕ್ಕು ಹಾಗು ಇಲಿ ಎಂಬ ಪ್ರಾಣಿಗಳ ಹೆಸರನ್ನು ಬಳಸಿದ್ದರು, ಇವುಗಳ ಹಾಗೆ ವರ್ತಿಸುವ ಮನುಷ್ಯರಿಗೆ ಅನ್ವಯಿಸುತ್ತದೆ.
 
ಬೆಕ್ಕು ಇಲಿಯನ್ನು ಬೇಟೆಯಾಡಿದ ತಕ್ಷಣ ತಿನ್ನದೆ ಅದಕ್ಕೆ ಹಿಂಸೆ ಕೊಟ್ಟು ಚೆಲ್ಲಾಟವಾಡುತ್ತದೆ. ಅದೇ ರೀತಿಯಲ್ಲಿ ಕೆಲವು ಮನುಷ್ಯರಿಗೆ ಇದೆ ಬುದ್ದಿ ಇರುತ್ತದೆ.
 
ಇವರು ಇತರರು ಕಷ್ಟಪಡುವುದನ್ನು ಕಂಡು ಸಂತೋಷಪಡುತ್ತಾರೆ.
 
ತಮಗೆ ಆಗದವರಿಗೆ ಏನಾದರೂ ಆಪತ್ಹು ಸಂಭವಿಸಿದರೆ ಅದನ್ನು ಕಂಡು ಹಾಲು ಕುಡಿದಷ್ಟು ಸಾಚ್ತೋಷವಾಗುತ್ತದೆ. ಹೀಗೆ ಅನೇಕರು ಇತರರಿಗೆ ಕಷ್ಟಕೊಟ್ಟು ಚೆಲ್ಲಾಟವಾಡುತ್ತಾರೆ ಎಂಬುದು ಈ ಗಾದೆ ಮಾತಿನ ಸ್ವಾರಸ್ಯವಾಗಿದೆ.
 

9) “ಅರಮನೆಗಿಂತಲೂ ನೆರೆಮನೆ ಲೇಸು”

 
ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ಚಿಕ್ಕದಾಗಿದ್ದರು ದೊಡ್ಡ ದೊಡ್ಡ ಅರ್ಥಗಳನ್ನು ನೀಡುತ್ತವೆ.
 
ಇಲ್ಲಿ ಅರಮನೆ ಎಂದಿರುವುದು ಹಣ ಅಂತಸ್ತು ಅಧಿಕಾರ ಎಂದು ಮರೆದಾಡುವ ಶ್ರೀಮಂತಜನರ ಮನೆ ಎಂದರ್ಥ.
 
ಬಡವರನ್ನು ಇವರು ತಮ್ಮ ನೆರೆಮನೆಯವರಾಗಿ ನೋಡಲು ಇಷ್ಟಪಡುವುದಿಲ್ಲ. ಬಡವರಿಗೆ ಕಷ್ಟ, ಚಿಂತೆ ನೋವುಗಳ ಅನುಭವವಿರುವುದರಿಂದ ಕಷ್ಟದಲ್ಲಿರುವ ನೆರೆಮನೆಯವರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾರೆ.
 
ಆದ್ದರಿಂದ ಸರ್ವಜ್ಞ ಕವಿ “ಹಂಗಿನ ಅರಮನೆಗಿಂತ ವಿಂಗಡದ ಗುಡಿ ಲೇಸು” ಎಂದಿದ್ದಾನೆ. ಹಂಗಿಸಿ ಬಡವರನ್ನು ತಮ್ಮ ದಾಸ್ಯಡ್ಲ್ಲಿರಿಸಿಕೊಳ್ಳುತ್ತಾರೆ. ಅವರ ಮೇಲೆ ದಬ್ಬಾಳಿಕೆ ಮಾಡುತ್ತಾರೆ.
 
ಆದರೆ ನೆರೆಮನೆಯು ಸ್ನೇಹ ಸೌಹಾರ್ದದ ಸಂಕೇತವಾಗಿದೆ. “ಬಡವರಲ್ಲಿ ಊಟ” ಎನ್ನುವ ಮಾತು ಇದೆ  ಎಂಬುದು ಈ ಗಾದೆ ಮಾತಿನ ಸ್ವಾರಸ್ಯವಾಗಿದೆ.
 

10) “ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ?”

ಗಾದೆ ವೇದಕ್ಕೆ ಸಮಾನ, ಗಾದೆ ಸುಳ್ಳಾದರು ವೇದ ಸುಳ್ಳಾಗುವುದಿಲ್ಲ. ಗಾದೆ ಹಿರಿಯರು ಹೇಳಿದ ಅನುಭವದ ನುಡಿಮಟ್ಟುಗಳು. ಗಾದೆಗಳು ಆಕಾರದಲ್ಲಿ ಚಿಕ್ಕದಾಗಿದ್ದರು ದೊಡ್ಡ ದೊಡ್ಡ ಅರ್ಥಗಳನ್ನು ನೀಡುತ್ತವೆ.
 
 ಅಂಗೈಯಲ್ಲಿರುವ ಹುಣ್ಣು ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆಯೇ ಇರುತ್ತದೆ . ಅದನ್ನು ನೋಡಲು ಕನ್ನಡಿಯ ಹಿಂಭಾಗದಲೇನಾದರೂ ಹುಣ್ಣುಗಳಾದರೆ ಬಳಸಿ ಪ್ರತಿಬಿಂಬದ ಮೂಲಕ ನೋಡಬ್ಬಲ ದೇಹದ ಆದರೆ ಕಣ್ಣಿಗೆ ಕಾಣುವ ಭಾಗಗಳನ್ನು ಗಮನಿಸಲು ಕನ್ನಡಿ ಬೇಡ .
 
ಅಂತೆಯೇ ಕೆಲವು ಸತ್ಯಸಂಗತಿಗಳು , ಕಣ್ಣಿಗೆ ಕಾಣುವಂತೆಯೇ ಇರುತ್ತವೆ . ಮುಚ್ಚಿಡಲು ತಪ್ಪನ್ನೂ ಅಪರಾಧವನೇ ಅಪರಾಧಗಳು ಹೇಳಿ ಅವನ್ನು ಮಾಡಿದ ಮಾಚಲು ಪುಯತ್ನಿಸಿ ಹಲವು ಕಾರಣಗಳನ್ನು ಹೇಳಿ ಸಾಧಿಸಿದರೂ ಸತ್ಯ ಮರೆಯಾಗುವುದಿಲ್ಲ .
 
ಕಣ್ಣಿಗೆ ಕಂಡೇ ಕಾಣುತ್ತದೆ . ಸುಳ್ಳು ಸುಳೇ ಸತ್ಯ ಸತ್ಯವೇ . ಕೆಲವು ಸಲ ಅರಿವಿಗೆ ಬಾರದೆ ತಪ್ಪುಗಳಾಗಬಹುದು . ಆಗ ಬೇರೆಯವರಿಂದ ಅವು ಗಮನಕ್ಕೆ ಬರಬಹುದು . ಅನೇಕ ಬಾರಿ ಗೊತ್ತಿದ್ರೂ ತಪ್ಪು ಮಾಡಿದಾಗ ಅದನ್ನು ಬೇರೆ ಯಾರೂ ತೋರಿಸುವ ಅಗತ್ಯವಿರುವುದಿಲ್ಲ .
 
ತಾನು ಮಾಡುತ್ತಿರುವುದು ತಪ್ಪು ಎಂದು ಮಾಡಿದವನಿಗೇ ತಿಳಿದಿರುತ್ತದೆ . ಗೊತ್ತಿದ್ದೂ ಮಾಡಿದ ತಪ್ಪುಗಳನ್ನು ತೋರಿಸಲು ಬೇರೆ ಯಾರೂ ಬೇಕಾಗುವುದಿಲ್ಲ. ಎಂಬುದು ಈ ಗಾದೆ ಮಾತಿನ ಸ್ವಾರಸ್ಯವಾಗಿದೆ. ಇದನ್ನೇ “ ಅಂಗೈ ಹುಣ್ಣಿಗೆ ಕನ್ನಡಿಯಾಕೆ ? ‘ ಎನ್ನುವ ಗಾದೆಯಲ್ಲಿ ಹೇಳಲಾಗಿದೆ.
 
 
ಕನ್ನಡ ಗಾದೆಗಳು ಮತ್ತು ವಿವರಣೆ

ಇತರ ವಿಷಯಗಳು

ಗಾದೆ ಮಾತುಗಳು

ಪರಿಸರ ಸಂರಕ್ಷಣೆ ಪ್ರಬಂಧ

ಇನ್ನು ಹೆಚ್ಚಿನ ವಿಷಯಗಳನ್ನು ನೀವು  ತಿಳಿಯಲು ಕೆಳಗಡೆ ನಮ್ಮ ಆಪ್ ಲಿಂಕನ್ನು ಕೊಟ್ಟಿದ್ದೇವೆ ನೀವು ಡೌನ್ಲೋಡ್ ಮಾಡಿ  ಹೆಚ್ಚಿನ ಮಾಹಿತಿಯನ್ನು  ಕನ್ನಡದಲ್ಲಿ ಪಡೆಯಬಹುದಾಗಿದೆ Asakthi App

ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಪ್ರತಿ ದಿನ ಹೊಸ  ವಿಷಯಗಳನ್ನು ಕಲಿಯಿರಿ ಟೆಲಿಗ್ರಾಮ್ ಗೆ ಜಾಯಿನ್ ಆಗಿ 

ಈ  ಕನ್ನಡ ಗಾದೆಗಳು ಮತ್ತು ವಿವರಣೆ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇವೆ,ಕನ್ನಡ ಗಾದೆಗಳು ಮತ್ತು ವಿವರಣೆಯನ್ನು  ಬರೆಯುವ ಸಣ್ಣ ಪ್ರಯತ್ನ ಇದಾಗಿದ್ದು ನಿಮ್ಮ ಸಲಹೆ ಸೂಚನೆಗಳೇನಾದರು ಇದ್ದರೆ ದಯವಿಟ್ಟು Comment box ನಲ್ಲಿ comment  ಮಾಡುವುದರ ಮೂಲಕ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ

 

Leave a Comment