ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ | rashtriya bhavaikyate prabandha in kannada

ಕನ್ನಡದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ, Rashtriya Bhavaikyate Prabandha in Kannada, Rashtriya Bhavaikyate Essay in Kannada

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ ಬರೆಯಿರಿ

rashtriya bhavaikyate prabandha in kannada

ಈ ಲೇಖನಿಯಲ್ಲಿ ರಾಷ್ಟೀಯ ಭಾವೈಕ್ಯತೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ. ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ.

rashtriya bhavaikyate prabandha in kannada

ಪೀಠಿಕೆ:

ಭಾರತವು ಒಂದು ಜಾತ್ಯತೀತ ರಾಷ್ಟ್ರವಾಗಿದೆ. ನಮ್ಮ ದೇಶವು ಪ್ರಜಾಪ್ರಭುತ್ವದ ತಳಹದಿಯ ಮೇಲೆ ರೂಪುಗೊಂಡಿದೆ. ನಮ್ಮ ದೇಶ ಜಾತಿ, ಧರ್ಮ, ಮತ, ಪ್ರಾದೇಶಿಕಗಳ ಭೇದಭಾವವನ್ನು ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸುವುದು.

ರಾಷ್ಟ್ರೀಯ ಭಾವೈಕ್ಯತೆ ಮಹತ್ವ:

ರಾಷ್ಟ್ರ ಮತ್ತು ರಾಷ್ಟ್ರೀಯತೆಯ ಹಿನ್ನಲೆಯಲ್ಲಿ ಭಾರತ ದೇಶದ ಅಖಂಡತೆಯ ಪರಿಕಲ್ಪನೆಯನ್ನು ನಾವೆಲ್ಲಾ ಭಾರತೀಯರು ಎಂಬ ಪರಿಭಾಷೆಯೊಂದಿಗೆ ಅದರ ಮಹತ್ವವನ್ನು ಹೆಚ್ಚಿಸೋಣ. ರಾಷ್ಟ್ರೀಯ ಭಾವೈಕ್ಯತೆಯ ಪರಧಿಯಲ್ಲಿ ವಿವಿಧ ಜಾತಿ, ಧರ್ಮ, ಪ್ರಾದೇಶಿಕತೆ, ಭಾಷೆಗಳನ್ನು ಭಾಷೆಗಳನ್ನು ಒಳಗೊಂಡಂತೆ ಶಕ್ತಿಯುತವಾದ ಐಕ್ಯತೆಯನ್ನು ಕಟ್ಟುಕೊಳ್ಳುವುದು.ಭಾರತ ದೇಶವು ತನ್ನೊಳಗಿನ ಭೌಗೋಳಿಕ, ಸಾಮಾಜಿಕ,ಭಾಷೆ, ಸಂಪ್ರದಾಯ, ರಾಜಕಾರಣ,ಧರ್ಮ, ಜನಾಂಗ, ಶಿಕ್ಷಣ, ಸಂಸ್ಕತಿಯನ್ನು ಹೊಂದಿದೆ. ಭಾರತ ವಿಶಾಲವಾದ ಭೂಖಂಡವುಗಳನ್ನೂಳಗೊಂಡ ದೇಶವಾಗಿದೆ. ಈ ದೇಶದಲ್ಲಿ ಹಲಾವರು ಕಾರಣಗಳಿಂದ ಆಚಾರ-ವಿಚಾರ, ಭಾಷೆ, ಆಹಾರ, ಉಡುಪು-ತೊಡಪು ಎಲ್ಲದರಲ್ಲಿಯೂ ವಿವಿಧತೆ ಕಾಣಬಹುದು.

ಭಾರತ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿದೆ.ಇಲ್ಲಿ ಯಾರೂ ಮೇಲಲ್ಲ ಯಾರೂ ಕೀಳಲ್ಲ. ಭಾರತದ ಸಂವಿಧಾನದಲ್ಲಿ ಮತೀಯ ಭೇದಭಾವಕ್ಕೆ ಆಕಾಶವಿಲ್ಲ.ಬಡವ ಶ್ರೀಮಂತ ಎಲ್ಲರೂ ಸಮಾನರಾಗಿ ಬಾಳಬೇಕು.

ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದು:

ರಾಷ್ಟ್ರಗೀತೆಯನ್ನು ಹಾಡುವುದು ರಾಷ್ಟ್ರದ ಭೌಗೋಳಿಕ ಐಕ್ಯತೆಗೆ ಕಾರಣವಾಗಿದೆ.ಧರ್ಮ-ಧರ್ಮಗಳ ನಡುವೆ ಭೇದಭಾವವನ್ನು ತೋರಿಸದಂತೆ ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸುವುದು ಒಂದು ಮುಖ್ಯವಾದ ಕಾರಣವಾಗಿದೆ.ನಾವೆಲ್ಲರೂ ಭಾರತಮಾತೆಯ ಮಕ್ಕಳು ಎಂಬ ಭಾವ ಮೂಡಿದಾಗ ಜಾತಿ, ಮತ, ಧರ್ಮ, ಭಾಷೆಗಳ ಭೇದಭಾವಕ್ಕೆ ಅವಕಾಶ ಇರುವುದಿಲ್ಲ.

ಜಾತಿಯ ಹೆಸರಿನಲ್ಲಿ ಮೇಲುಕೀಳು ಭಾವವನ್ನು ಮೂಡಿಸುವುದು,ಭಾಷೆಯಿಂದ ಜನರನ್ನು ವರ್ಗೀಕರಿಸುವುದು ಮೊದಲಾದ ಕಾರಣಗಳಿಂದ ಅಸಹಿಷ್ಣುತೆ ಮನೋಭಾವ ಮೂಡುತ್ತದೆ.ಆದರೆ ನಾವು ಇವುಗಳನ್ನು ಹೋಗಲಾಡಿಸಲು ಕಂಕಣಬದ್ಧರಾಗಬೇಕು. ರಾಷ್ಟ್ರೀಯ ಹಬ್ಬಗಳ ಅಚರಣೆಗಳ ಮೂಲಕ ಜನರನ್ನು ಜಾಗೃತಗೊಳಸಬೇಕು.

ರಾಷ್ಟ್ರೀಯ ಭಾವೈಕ್ಯತೆಗೆ ಭಂಗ ತರುವಂತಹ ದುಷ್ಟಶಕ್ತಿಗಳನ್ನು ಗುರಿತಿಸಿ, ಅವರ ವಿರುದ್ದ ಕಾನೂನು ರೀತಿಯ ಕ್ರಮಕೈಗೊಂಡು ಶಿಕ್ಷೆಯನ್ನು ನೀಡಬೇಕು. ರಾಷ್ಟ್ರೀಯ ಭಾವೈಕ್ಯತೆ ಕಾಪಾಡುವುದು ಹಾಗೆ ಬೆಳೆಸುವುದು.

ರಾಷ್ಟ್ರೀಯ ಭಾವೈಕ್ಯತೆಯ ಅವಶ್ಯಕತೆ:

*ನಮ್ಮ ದೇಶದಲ್ಲಿ ಹೆಚ್ಚಾಗಿ ಪ್ರಾದೇಶಿಕ ಅಸಮತೋಲನವನ್ನು ಕಾಣುತ್ತೇವೆ, ಅದನ್ನುನಿವಾರಣೆ ಮಾಡಬೇಕು.ಇದರಿಂದ ರಾಷ್ಟ್ರೀಯ ಭಾವೈಕತೆ ಹೆಚ್ಚಾಗುತ್ತದೆ.

*ನಾವು ಮೊದಲನೇದಾಗಿ ರಾಜ್ಯ ರಾಜ್ಯಗಳ ಸೌಹಾರ್ಧ ಸಹಕಾರ ಬೆಳವಣಿಗೆಯಾಗುವುದು.

*ಸರ್ವಧರ್ಮ ಸಮನ್ವಯತೆ ಉಂಟಾಗುತ್ತದೆ.

*ಪ್ರಾಂತೀಯತೆಯನ್ನು ಹೋಗಲಾಡಿಸಲು ರಾಷ್ಟೀಯ ಭಾವೈಕ್ಯತೆ ಅವಶ್ಯಕವಾಗಿದೆ.

*ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಲು

*ಕಲೆ,ಸಾಹಿತ್ಯ,ಸಂಸ್ಕೃತಿಯ ಬೆಳವಣೆಗೆ

*ದೇಶದ ಆರ್ಥಿಕ ಅಭಿವೃದ್ದಗಾಗಿ

ಉಪಸಂಹಾರ:

ನೆಹರೂ ಅವರು ಹೇಳುವಂತೆ ಇದನ್ನು “ಇಟ್ಟಿಗೆ ಗಾರೆಗಳಿಂದ ಕಟ್ಟಲಾಗದು ಮಕ್ಕಳ ಮನದಾಳದಲ್ಲಿ ಬಿತ್ತಿ ಬೆಳೆಸಬೇಕಾಗಿದೆ”. ರಾಷ್ಟ್ರೀಯ ಹಬ್ಬಗಳ ಆಚರಣೆಗಳ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಬೆಳೆಯಲು ಸಹಾಯವಾಗುತ್ತದೆ. ಈ ಮೂಲಕ ರಾಷ್ಟ್ರೀಯ ಭಾವೈಕ್ಯತೆ ಬೆಳೆಸಲು ಸಾಧ್ಯ.

FAQ

ರಾಷ್ಟ್ರೀಯ ಭಾವೈಕ್ಯತೆ ಎಂದರೇನು ?

ನಮ್ಮ ದೇಶ ಜಾತಿ, ಧರ್ಮ, ಮತ, ಪ್ರಾದೇಶಿಕಗಳ ಭೇದಭಾವವನ್ನು ಬಿಟ್ಟು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸುವುದು.

ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆ ?

ಅಕ್ಟೋಬರ್‌ ೩೧.

ಇತರೆ ಪ್ರಬಂಧಗಳು:

ಭಾರತೀಯ ಸಂಸ್ಕೃತಿ ಬಗ್ಗೆ ಪ್ರಬಂಧ

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ

ಗಣರಾಜ್ಯೋತ್ಸವ ಭಾಷಣ ಕನ್ನಡ

ನನ್ನ ಕನಸಿನ ಭಾರತ ಪ್ರಬಂಧ

Leave a Comment