ಸಸ್ಯಗಳ ಹೆಸರು ಕನ್ನಡದಲ್ಲಿ | Sasyagala Hesaru in Kannada

10 ಸಸ್ಯಗಳ ಹೆಸರು ಕನ್ನಡದಲ್ಲಿ, Sasyagala Hesaru in Kannada, name of plants in kannada, 5 plants names information in kannada

Sasyagala Hesaru in Kannada

10 ಸಸ್ಯಗಳ ಹೆಸರು
ಸಸ್ಯಗಳ ಹೆಸರು ಕನ್ನಡದಲ್ಲಿ Sasyagala Hesaru in Kannada

ಈ ಲೇಖನಿಯಲ್ಲಿ ಸಸ್ಯಗಳ ಹೆಸರು ಮತ್ತು ವಿವರಗಳನ್ನು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

10 ಸಸ್ಯಗಳ ಹೆಸರು

ಮರಗಳು ಮತ್ತು ಸಸ್ಯಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಅವುಗಳಿಲ್ಲದೆ ಜೀವನವನ್ನು ಕಲ್ಪಿಸಿಕೊಳ್ಳುವುದು ಅರ್ಥಹೀನ. ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಮನೆ ಮತ್ತು ಕಚೇರಿಯಲ್ಲಿ ಒಳಾಂಗಣ ಸಸ್ಯಗಳನ್ನು ಬಹಳ ಉತ್ಸಾಹದಿಂದ ನೆಡುತ್ತಾರೆ. ಒಳಾಂಗಣ ಸಸ್ಯಗಳೊಂದಿಗೆ, ಮನೆ ಮತ್ತು ಕಚೇರಿಯ ವಾತಾವರಣವು ಶುದ್ಧ ಮಾತ್ರವಲ್ಲ, ಹಸಿರು ಮನಸ್ಸಿಗೆ ಶಾಂತಿಯನ್ನು ಕೂಡ ನೀಡುತ್ತದೆ.

ಸನಾತನ ಸಂಸ್ಕೃತಿಯಲ್ಲಿ ಪ್ರಕೃತಿಯನ್ನು ದೇವರೆಂದು ಪೂಜಿಸುತ್ತೇವೆ. ಹಿಂದೂ ಧರ್ಮದಲ್ಲಿ ಸಸ್ಯಗಳನ್ನು ಅತ್ಯಂತ ಭಕ್ತಿಯಿಂದ ಆರಾಧಿಸುವ ಪರಂಪರೆ ನಡೆದು ಬಂದಿದೆ. ಪ್ರಕೃತಿಯಿಂದ ಮಾನವನಿಗೆ ಎಲ್ಲವೂ ಸಿಗುತ್ತದೆ. ಶುದ್ಧವಾದ ಗಾಳಿ, ನೆರಳು ಮತ್ತು ರೋಗಗಳಿಂದ ದೂರವಿಡುವಂಥ ಔಷಧೀಯ ಗುಣಗಳನ್ನು ಹೊಂದಿರುತ್ತವೆ.

ತುಳಸಿ

ತುಳಸಿ

ತುಳಸಿ ಅತ್ಯಂತ ಪವಿತ್ರವಾದ ಸಸ್ಯ. ವಿಷ್ಣುವಿಗೆ ಪ್ರಿಯವಾದ ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿವೆ. ಸಾತ್ವಿಕ ಶಕ್ತಿಯನ್ನು ಹೊಂದಿರುವ ತುಳಸಿಯನ್ನು ಮನೆಯಲ್ಲಿ ಬೆಳೆಸಬೇಕು. ಇದರಿಂದ ನಕಾರಾತ್ಮರ ಶಕ್ತಿಯು ನಾಶಮಾಡುವ ಕ್ಷಮತೆ ತುಳಸಿ ಗಿಡದಲ್ಲಿದೆ. ಅಷ್ಟೇ ಅಲ್ಲದೇ ತುಳಸಿಯನ್ನು ಔಷಧಿಗಳ ರಾಣಿ ಎಂದು ಸಹ ಕರೆಯುತ್ತಾರೆ. ತುಳಸಿಯಲ್ಲಿ ಹೇರಳವಾದ ಔಷಧೀಯ ಗುಣವಿರುವುದಾಗಿ ಸಾಬೀತಾಗಿದ್ದಲ್ಲದೇ, ಇದರ ಎಲೆ ಮತ್ತು ಹೂವು ಅನೇಕ ರೋಗಗಳನ್ನು ಬೇರು ಸಹಿತ ನಾಶಮಾಡುವ ಶಕ್ತಿಯನ್ನು ಹೊಂದಿದೆ.

ದಿನ ಪೂರ್ತಿ ಆಮ್ಲಜನಕವನ್ನು ಪೂರೈಸುವ ಸಸ್ಯಗಳಲ್ಲೊಂದಾದ ತುಳಸಿಯು ಹೆಚ್ಚು ಸಕಾರಾತ್ಮಕ ಶಕ್ತಿಯನ್ನು ನೀಡುವ ಗಿಡವಾಗಿದೆ. ತುಳಸಿಯನ್ನು ಮನೆಯ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದೆಂದು ಹೇಳಲಾಗುತ್ತದೆ.

ಮಲ್ಲಿಗೆ

ಮಲ್ಲಿಗೆ

ಮಲ್ಲಿಗೆ ಬಳ್ಳಿಯನ್ನು ಮನೆಯಲ್ಲಿ ಬೆಳೆಯುವುದು ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಮಲ್ಲಿಗೆ ಹೂವಿನ ಸುಗಂಧ ಮನಸ್ಸಿಗೆ ಆನಂದವನ್ನು ನೀಡುವುದಲ್ಲದೆ, ದೇವರ ಪೂಜೆಗೆ ಬಳಕೆಯಾಗುತ್ತದೆ. ನೆರಳಿನ ಜೊತೆ ಜೊತೆಗೆ ಸೂರ್ಯನ ಬೆಳಕು ನೇರವಾಗಿ ಬೀಳುವಂಥ ಜಾಗದಲ್ಲಿ ಮಲ್ಲಿಗೆ ಗಿಡವನ್ನಿಟ್ಟರೆ ಉತ್ತಮ.

ಪೂರ್ವ ದಿಕ್ಕಿಗೆ ಇಡುವುದು ಉತ್ತಮವೆಂದು ಹೇಳಲಾಗುತ್ತದೆ. ಮಲ್ಲಿಗೆ ಬಳ್ಳಿಯಲ್ಲಿ ಸಹ ಅನೇಕ ಗುಣಕಾರಿ ಅಂಶಗಳಿದ್ದು, ಬೇರೆ ಬೇರೆ ರೋಗಕ್ಕೆ, ಚರ್ಮ ಸಂಬಂಧಿ ಖಾಯಿಲೆಗಳಿಗೆ ಇದರ ಬೇರು, ಎಲೆ ಮತ್ತು ಹೂವನ್ನು ಸಹ ಬಳಕೆ ಮಾಡುತ್ತಾರೆ.  

ನೆಲ್ಲಿ

ನೆಲ್ಲಿ

ನೆಲ್ಲಿಯಲ್ಲಿ ಅನೇಕ ವಿಧಗಳಿವೆ. ನೆಲನೆಲ್ಲಿ, ಬೆಟ್ಟದ ನೆಲ್ಲಿ, ರಾಜ್ ನೆಲ್ಲಿ ಹೀಗೆ ಇತ್ಯಾದಿ ವಿಧಗಳಿವೆ. ನೆಲ್ಲಿಯನ್ನು ಮನೆಯ ಸುತ್ತಮುತ್ತ ಜಾಗವಿದ್ದರೆ ನೆಲ್ಲಿಯನ್ನು ಬೆಳೆಸುವುದು ಉತ್ತಮ. ಇದರಲ್ಲಿ ಅನೇಕ ಔಷಧೀಯ ಗುಣವಿರುವುದಲ್ಲದೇ, ವಾಸ್ತು ಪ್ರಕಾರ ಮನೆಗೆ ಅತ್ಯಂತ ಲಾಭದಾಯಕ ಗಿಡ ಇದಾಗಿದೆ ಎಂದು ಹೇಳಲಾಗುತ್ತದೆ. ನೆಲ್ಲಿ ಗಿಡವನ್ನು ಮನೆಯ ಉತ್ತಮ ಅಥವಾ ಪೂರ್ವ ದಿಕ್ಕಿನಲ್ಲಿ ಇದನ್ನು ಬೆಳೆಸುವುದರಿಂದ ಅನೇಕ ಲಾಭಗಳಿವೆ. ನೆಲ್ಲಿ ಗಿಡವನ್ನು ಮನೆಯಲ್ಲಿ ಬೆಳೆಸುವುದರಿಂದ ಕಷ್ಟಗಳ ನಿವಾರಣೆಯಾಗುವುದಲ್ಲದೇ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಆವರಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕಹಿಬೇವು ಮತ್ತು ನಿಂಬೆ ಗಿಡ ಸಹ ಮನೆಯಲ್ಲಿ ಬೆಳೆಸಬಹುದಾದ ಉತ್ತಮ ಗಿಡಗಳಾಗಿವೆ.

ಮನಿ ಪ್ಲಾಂಟ್

ಮನಿ ಪ್ಲಾಂಟ್

ಮನೆಯ ಒಳಗಡೆ ಸಹ ಇಡಬಹುದಾದ ಸಸ್ಯ ಮನಿಪ್ಲಾಂಟ್. ನೋಡಲು ಆಕರ್ಷಕವಾಗಿರುವ ಈ ಸಸ್ಯದಿಂದ ಅನೇಕ ಪ್ರಯೋಜನವಿದೆ. ಮನಿಪ್ಲಾಂಟ್ ವಾತಾವರಣವನ್ನು ಶುದ್ಧಗೊಳಿಸುವುದಲ್ಲದೇ, ಗಾಳಿಯನ್ನು ಶುದ್ಧಗೊಳಿಸುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿಪ್ಲಾಂಟ್ ಬೆಳೆಸುವುದರಿಂದ ಆರ್ಥಿಕ ಸಂಕಷ್ಟ ನಿವಾರಣೆಯಾಗುತ್ತದೆ.

ಮನಿಪ್ಲಾಂಟ್ ಹಸಿರಾಗಿದ್ದಷ್ಟು ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಮತ್ತು ಇದನ್ನು ಲಕ್ಷ್ಮೀಯ ರೂಪವೆಂದು ಸಹ ಕರೆಯಲಾಗುತ್ತದೆ. ಮನಿಪ್ಲಾಂಟ್‌ ಅನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಜೊತೆಗೆ ಶಮೀ ವೃಕ್ಷ, ಅಲೋವೆರಾದಂತಹ ಸಸ್ಯಗಳು ಮನೆಗೆ ಉತ್ತಮವೆಂದು ಹೇಳಲಾಗಿದೆ.

ಶ್ವೇತಾರ್ಕ

ಶ್ವೇತಾರ್ಕ

ಶ್ವೇತಾರ್ಕ ಎಂದು ಕರೆಯಲ್ಪಡುವ ಬಿಳಿ ಎಕ್ಕದ ಗಿಡವನ್ನು ವಾಸ್ತುವಿನಲ್ಲಿ ಬಹಳ ಶ್ರೇಷ್ಠ ಎಂದು ಗುರುತಿಸಲಾಗಿದೆ. ಈ ಸಸ್ಯವನ್ನು ಮನೆಯ ಬಾಗಿಲು ಅಥವಾ ಗ್ಯಾಲರಿಯಲ್ಲಿ ನೆಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ಸಸ್ಯವನ್ನು ನೆಡುವುದರಿಂದ ಎಂದಿಗೂ ಹಣದ ಕೊರತೆ ಉಂಟಾಗುವುದಿಲ್ಲ ಎಂದು ನಂಬಲಾಗಿದೆ. ಇದನ್ನು ಗಣಪತಿಯ ಪ್ರತೀಕ ಎಂದು ಹೇಳುವುದೂ ಉಂಟು. ನೀವು ಮನೆಯಿಂದ ಹೊರಡುವಾಗ ಈ ಗಿಡಕ್ಕೆ ನಮಸ್ಕರಿಸಿ ಹೋಗುವುದರಿಂದ ನಿಮ್ಮ ಕೆಲಸ ಯಾವುದೇ ಅಡೆತಡೆ ಇಲ್ಲದೆ ಆಗುತ್ತದೆ ಎಂಬುದು ನಂಬಿಕೆ. ಈ ಸಸ್ಯದಿಂದ ಹಾಲು ಹೊರಬರುತ್ತದೆ ಮತ್ತು ಎಂದಿಗೂ ಹಾಲಿನ ಗಿಡಗಳನ್ನು ಮನೆಯೊಳಗೆ ನೆಡಬಾರದು ಎಂಬುದನ್ನು ನೆನಪಿನಲ್ಲಿಡಿ.

ಪುದೀನಾ

ಪುದೀನಾ

ವಿಶ್ವದ ಔಷಧಿಯ ಸಸ್ಯಗಳಲ್ಲಿ ಪುದೀನಾ ಕೂಡ ಒಂದು. ಯಾವುದೇ ವಾತಾವರಣಕ್ಕೂ ಹೊಂದಿಕೊಳ್ಳುವ ಸಸ್ಯವಾಗಿದೆ ಪುದೀನಾ ಮ್ಯಾಂಗನೀಸ್, ವಿಟಮಿನ್ ಎ, ವಿಟಮಿನ್ ಸಿ ಯನ್ನು ಇದು ಒಳಗೊಂಡಿದೆ. ಜಜ್ಜಿದ ಪುದೀನಾ ಎಲೆಗಳನ್ನು ಸ್ನಾಯು ಸೆಳೆತದಂತ ನೋವಿಗೆ ಉಪಶಮನವಾಗಿ ಬಳಸಿಕೊಳ್ಳಬಹುದಾಗಿದೆ. ಇದೊಂದು ಅದ್ವಿತೀಯ ಬಾಯಿ ಸ್ವಚ್ಛಕ ಕೂಡ ಹೌದು. ಹೊಟ್ಟೆ ಉಬ್ಬರ, ಕರುಳಿನ ಸಮಸ್ಯೆಗಳು, ಹೊಟ್ಟೆನೋವಿಗೆ ಇದು ಉತ್ತಮ ಔಷಧಿ ಎಂದೆನಿಸಿದೆ.

ಬೇವು

ಬೇವು

ಔಷಧೀಯ ಗುಣಗಳಿಂದ ಅನಾದಿ ಕಾಲದಿಂದಲೂ ಬೇವು ಮನ್ನಣೆಯನ್ನು ಗಳಸಿಕೊಂಡಿದೆ. ಮರದ ರೂಪದಲ್ಲಿ ಇದನ್ನು ಬೆಳೆಯಲಾಗುತ್ತದೆ. ಅಂತೆಯೇ ಮನೆಯಲ್ಲಿ ಚಟ್ಟಿಯಲ್ಲಿ ಇದನ್ನು ಬೆಳೆಸಿಕೊಳ್ಳಬಹುದಾಗಿದೆ. ದೇಹದ ಹೊರಗೆ ಮತ್ತು ಒಳಗೆ ಕೂಡ ಔಷಧೀಯ ರೂಪದಲ್ಲಿ ಈ ಸಸ್ಯ ಸಹಾಯ ಮಾಡುತ್ತದೆ. ಬೇವನ್ನು ಜಜ್ಜಿ ಸೇವಿಸಿದಲ್ಲಿ ಹೊಟ್ಟೆಯ ಹಲವಾರು ಬೇನೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಹಿರಿಯರಿಗೆ ಮತ್ತು ಕಿರಿಯರಿಗೆ ಇದು ಅತ್ಯಂತ ಉತ್ತಮವಾಗಿದೆ.

ಸಸ್ಯ ಹೆಸರುಗಳ ಪಟ್ಟಿ

  • ವೈಲ್ಡ್ ಫ್ಲವರ್
  • ಥಿಸಲ್
  • ಹೂವು
  • ಮೂಲಿಕೆ
  • ಅಣಬೆ
  • ಕಳೆ
  • ಜರೀಗಿಡ
  • ಕ್ಯಾಟ್ಟೈಲ್
  • ರೀಡ್
  • ಬಿದಿರು
  • ಐವಿ
  • ಪೊದೆಸಸ್ಯ
  • ಪಾಚಿ
  • ಹುಲ್ಲು
  • ತಾಳೆ ಮರ
  • ಪೊದೆ
  • ಜೋಳ
  • ಮರ

ಇತರೆ ಪ್ರಬಂಧಗಳು:

ಮಣ್ಣಿನ ಬಗ್ಗೆ ಪ್ರಬಂಧ

ವಿಶ್ವ ಪರಿಸರ ದಿನಾಚರಣೆ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

Leave a Comment