ಸೋಲು ಗೆಲುವಿನ ಸೋಪಾನ ಗಾದೆಮಾತು, Sole Geluvina Sopana Gade Mathu in Kannada, Sole Geluvina Sopana Proverbs in Kannada

ಸೋಲು ಗೆಲುವಿನ ಸೋಪಾನ ಗಾದೆ ಮಾತು ವಿವರಣೆ

ಸೋಲು ಗೆಲುವಿನ ಸೋಪಾನ ಗಾದೆಮಾತು ವಿವರಣೆ

ಸ್ನೇಹಿತರೇ ಈ ಲೇಖನಿಯಲ್ಲಿ ನಿಮಗೆ ಅನುಕೂಲವಾಗುವಂತೆ ಸೋಲು ಗೆಲುವಿನ ಸೋಪಾನ ಎಂಬ ಗಾದೆಯ ಸಂಪೂರ್ಣವಾದ ವಿಷಯದ ಮಾಹಿತಿ ನೀಡಿದ್ದೇವೆ.

ಗಾದೆಗಳು ಹಿರಿಯರು ತಮ್ಮ ಜೀವನಾನುಭವದಿಂದ ಕಟ್ಟಿರುವ ನುಡ್ಡಿಗಟ್ಟುಗಳು. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬುವುದು ನಿಮಗೂ ತಿಳಿದಿದೆ.

ಗಾದೆಗಳು ಹಿರಿಯರ ಅನುಭವದ ನುಡಿಮುತ್ತುಗಳಾಗಿವೆ. ವ್ಯಕ್ತಿ ಸೋಲಿನಿಂದಾಗಿ ಧೃತಿಗೆಡಬಾರದು, ಬದಲಾಗಿ ಛಲದಿಂದ ಹೋರಾಡಬೇಕು. ಯಾವುದೇ ಕೆಲಸವನ್ನು ಮಾಡಲು ಹೊರಟಾಗ ನಮ್ಮ ಲೋಪ-ದೋಷಗಳಿಂದ ಸೋಲು ಉಂಟಾಗಬಹುದು. ನಮ್ಮ ಸೋಲಿಗೆ ಕಾರಣಗಳನ್ನು ಹುಡುಕಬೇಕು. ಬದುಕು ಬಹಳ ಸ್ಪರ್ಧಾತ್ಮಕವಾದದ್ದು, ಇಲ್ಲಿ ಗೆಲ್ಲಲು ಸಾಕಷ್ಟು ಜನ ಪ್ರತಿನಿತ್ಯ ಹೋರಾಡುತ್ತಲೇ ಇರುತ್ತಾರೆ. ಆದರೆ ಗೆಲುವು ಸತತ ಪ್ರಯತ್ನ ಮತ್ತು ಪ್ರಾಮಾಣಿಕವಾದ ಹೋರಾಟದಿಂದ ಗೆಲುವನ್ನು ಪಡೆಯಬಹುದು. ಒಂದು ಸೋಲು ನಿಮಗೆ ಸಾಕಷ್ಟು ನೋವನ್ನು ಕೊಡಬಹುದು, ಆದರೆ ಅದೇ ಅಂತಿಮವಲ್ಲ , ಗೆಲುವು ಸಿಗುವವರೆಗೂ ಛಲ ಬಿಡದೆ ಮುನ್ನುಗ್ಗಿ ಆಗ ಗೆಲುವು ನಮ್ಮ ಪಾಲಿಗೆ ಸೋಪಾನವಾಗುತ್ತದೆ.

ಜೀವನದಲ್ಲಿ ಉನ್ನತ ಗುರಿಯ ಬೆನ್ನೇರಿ ಹೊರಟಾಗ ಏಳುಬೀಳುಗಳನ್ನು ಅನುಭವಿಸುವುದು ಸಹಜ. ಉನ್ನತ ಮಟ್ಟದಲ್ಲಿರುವವರ ಜೀವನವನ್ನು ವಿಶ್ಲೇಷಿಸಿದರೆ ಬೀಳುಗಳನ್ನು ಕಾಣದೆ ತಮ್ಮ ಗುರಿಯನ್ನು ತಲುಪಿದಂತಹ ಉದಾಹರಣೆಗಳು ತೀರ ವಿರಳ. ಸಾಧನೆಯ ಹಾದಿಯಲ್ಲಿ ಕಷ್ಟಗಳನ್ನು ಎದುರಿಸಿದಾಗಲೇ ನಾವು ಮುಂದೆ ಬರುವ ಅನಿಶ್ಚಿತ ಸಂದರ್ಭಗಳನ್ನು ಧೈರ್ಯವಾಗಿ ಎದುರಿಸಲು ಸಾಧ್ಯ.

ಜೀವನದಲ್ಲಿ ಸವಾಲುಗಳನ್ನೇ ಎದುರಿಸದೆ ಅತಿ ವೇಗವಾಗಿ ಗೆಲುವನ್ನು ಕಂಡಾಗ ಕೆಲವೊಮ್ಮೆ ನಮಗೆ ಎದುರಾಗುವ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ನಮ್ಮ ಚಿಂತನೆ ಹಾಗೂ ದೃಷ್ಟಿಕೋನಗಳು ಪಕ್ವವಾಗುವುದಿಲ್ಲ. ಆದುದರಿಂದ, ಹಿರಿಯರು ಸೋಲೇ ಗೆಲುವಿನ ಸೋಪಾನ ಎಂದು ಆನಾದಿ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ . ಅದಕ್ಕೇ ನಾವು ಸೋತು ಗೆಲ್ಲುವುದನ್ನು ಕಲಿಯಬೇಕು.

ನಿಮ್ಮ ಜೀವನದಲ್ಲಿ ಬರೋ ಸೋಲನ್ನು ನೀವು ಚೆನ್ನಾಗಿ ನಿಭಾಯಿಸಿದ್ರೆ ನಿಮ್ಮ ಮಕ್ಕಳು ಅದನ್ನು ನೋಡಿ ಅವ್ರ ಜೀವನದಲ್ಲಿ ಬರೋ ಸೋಲನ್ನು ಚೆನ್ನಾಗಿ ನಿಭಾಯಿಸ್ತಾರೆ.

ಇತರೆ ವಿಷಯಗಳು

50 ಒಗಟುಗಳು ಮತ್ತು ಉತ್ತರಗಳು

ಕನ್ನಡ ಗಾದೆಗಳು ಮತ್ತು ವಿವರಣೆ

By asakthi

Leave a Reply

Your email address will not be published. Required fields are marked *