Sign Up

Sign Up to our social questions and Answers Engine to ask questions, answer people’s questions, and connect with other people.

Sign In

Login to our social questions & Answers Engine to ask questions answer people’s questions & connect with other people.

Forgot Password

Lost your password? Please enter your email address. You will receive a link and will create a new password via email.

You must login to ask question.

Please briefly explain why you feel this question should be reported.

Please briefly explain why you feel this answer should be reported.

Please briefly explain why you feel this user should be reported.

ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ

ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ ಸಾಧನೆಗಳು, Srinivasa Ramanujan Jeevitha Charitra in kannada, srinivasa ramanujan information in kannada

ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ:

ಈ ಲೇಖನಿಯಲ್ಲಿ ರಾಮಾನುಜನ್‌ ರವರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಅನುಕೂಲವಾಗುವಂತೆ ಒದಗಿಸಿದ್ದೇವೆ.

ಜೀವನ:

ಶ್ರೀ ನಿವಾಸ ರಾಮಾನುಜನ ಅಯ್ಯಂಗಾರ್‌ ರಾಮಾನುಜನ್ (ಡಿಸಂಬರ್‌ ೨೨, ೧೮೮೭-ಏಪ್ರಿಲ್‌ ೨೬, ೧೯೨೦) ವಿಶ್ವದ ಶ್ರೇಷ್ಠ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನ್ಯಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವʼ ಅಪೂರ್ವ ಸಾಮರ್ಥವಿತ್ತು.

ಬಾಲ್ಯ:

ಈ ಮಹಾನ್‌ ಮೇಧಾವಿ ಶ್ರೀ ನಿವಾಸ ಅಯ್ಯಂಗಾರ್‌ ರಾಮಾನುಜನ್‌ ಅಯ್ಯಂಗಾರ್‌ ಅಥವಾ ಜನಪ್ರಿಯವಾಗಿ ಶ್ರೀನಿವಾಸ ರಾಮಾನುಜನ್‌ ಎಂದು ಹೆಸರುವಾಸಿಯಾದ ಇವರು ೧೮೮೭ ಡಿಸೆಂಬರ್‌ ೨೨ರಂದು ತಮಿಳುನಾಡಿನ ಈರೋಡಿನಲ್ಲಿದ್ದ ತಮ್ಮ ತಾತನ ಮನೆಯಲ್ಲಿ ಜನ್ಮ ತಳೆದರು. ರಾಮಾನುಜನ್‌ ತಂದೆ ಬಟ್ಟೆ ಅಂಗಡಿಯಲ್ಲಿ ಒಬ್ಬ ಗುಮಾಸ್ತರಾಗಿದ್ದರು. ತಾಯಿ ಅಪಾರ ದೈವ ಶ್ರದ್ಧಾಭಕ್ತಿಗಳಿದ್ದ ಮಹಿಳೆ

ಬಾಲ್ಯದಿಂದಲೆ ರಾಮಾನುಜನ್ನರು ಶಾಂತ ಮತ್ತು ಆಲೋಚನಾಸಕ್ತ ಸ್ವಭಾವದವರಾಗಿದ್ದರು. ತನ್ನ ತಾಯಿಯಿಂದ ದೇವರನಾಮ ಮತ್ತು ಭಕ್ತಿಗೀತೆಗಳನ್ನೂ ಕಲಿತ ಅವರು ಅಧ್ಯಾತ್ಮಿಕ ವಿಚಾರಗಳನ್ನು ಆಸಕ್ತಿ ತೆಳೆದರು. ಐದನೆಯ ವಯಸ್ಸಿಗೆ ಶಾಲೆಗೆ ಸೇರಿದ ಅವರಿಗೆ ಪ್ರತಿಯೊಂದರಲ್ಲೂ ಕಲಿಕೆಯ ಕುತೂಹಲವಿತ್ತು.

ವೇದ, ಉಷನಿಷತ್ತು, ತಿರುಕ್ಕುರಳ್‌ ಮೊದಲಾದ ಶಾಸ್ತ್ರಗ್ರಂಥಗಳಿಂದ ಋಕ್ಕು ಮತ್ತು ಶ್ಲೋಕಗಳನ್ನು, ಹಾಗೆಯೇ ಸಂತರ ಮತ್ತು ಜ್ಞಾನಿಗಳ ನುಡಿಗಳನ್ನು ತಮಿಳು ಕೃತಿಗಳಿಂದ ನಿರರ್ಗಳವಾಗಿ ಹೇಳಬಲ್ಲವರಾಗಿದ್ದರು.

ತಮ್ಮ ಐದನೆಯ ವಯಸ್ಸಿನಲ್ಲಿ ಕುಂಭಕೋಣಂನ ತಮಿಳು ಮಾಧ್ಯಮಶಾಲೆಗೆ ಸೇರಿದ ಅವರಿಗೆ ಗಣಿತ ನೆಚ್ಚಿನ ವಿಷಯವಾಗಿತ್ತು.

ರಾಮಾನುಜನ್‌ರವರ ಗಣಿತದ ಸಾಧನೆ:

ಸದಾ ಗಣಿತದ ಸೂತ್ರಗಳ ಬಗ್ಗೆಯೇ ಯೋಚಿಸುತ್ತಿದ್ದ ಅವರ ಬಳಿ ಕಾಗದದ ಗುಡ್ಡೆಯೇ ಬೀಳುತ್ತಿತ್ತಂತೆ. ರಸ್ತೆಯಲ್ಲಿ ಬಿದ್ದಿದ್ದ ಕಾಗದದ ತುಂಡಿನ ಮೇಲೂ ಗಣಿತದ ಸೂತ್ರಗಳನ್ನು ಬರೆಯುತ್ತಿದ್ದರಂತೆ.

ಮಗನಿಗೆ ಗಣಿತದ ಹೊರತಾಗಿ ಬೇರೆ ಎಲ್ಲ ವಿಷಯದಲ್ಲೂ ನಿರಾಸಕ್ತಿ ಇರುವುದನ್ನು ಕಂಡ ಹೆತ್ತವರು ಅವರಿಗೆ ಮದುವೆಯನ್ನು ಮಾಡುವ ನಿರ್ಧಾರ ಮಾಡಿ, ಸಣ್ಣ ವಯಸ್ಸಿನಲ್ಲೇ ಜಾನಕಿಯಮ್ಮಾಳ್ ರೊಂದಿಗೆ ವಿವಾಹವನ್ನೂ ಮಾಡಿಬಿಟ್ಟರು. ಹೀಗಾದರೂ ಮಗ ವಾಸ್ತವ ಪ್ರಪಂಚದಲ್ಲಿ ಜೀವಿಸಬಹುದೆನ್ನುವ ದೂರದ ಆಸೆ ಅವರಿಗೆ, ಮದುವೆಯಾಗುತ್ತಿದ್ದಂತೆ ಹೆತ್ತವರಿಗೆ ಹೊರೆಯಾಗಬಾರದೆಂದು ನಿರ್ಧರಿಸಿದ ರಾಮಾನುಜನ್ನರು ಮದ್ರಾಸಿನಲ್ಲಿ ಅಕೌಂಟೆಂಟ್‌ ಜನರಲ್‌ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡರು.

ರಾಮಾನುಜನ್ನರು ಎರಡೇ ತಿಂಗಳಿಗೆ ಕೆಲಸ ಕಳೆದುಕೊಂಡಾಗ ಜೀವನೋಪಾಯಕ್ಕೆ ಮನೆಪಾಠ ಮಾಡುತ್ತಿದ್ದರು. ಅರೆಹೊಟ್ಟೆ,ಬಹುಕಾಲದ ಅನಾರೋಗ್ಯ ಎರಡೂ ಅವರನ್ನು ಬಾಧಿಸುತ್ತಿತ್ತು. ಎಲ್ಲದರ ನಡುವೆಯೂ ಗಣಿತದ ಕುರಿತಾದ ಅಲೋಚನೆಯನ್ನು ದಾಖಲಿಸುವ ಕೆಲಸವನ್ನು ಮಾತ್ರ ನಿಲ್ಲಿಸಲಿಲ್ಲ.

೧೯೯೦ ರಲ್ಲಿ ದಿವಾನ್‌ ಬಹದ್ದೂರರ ಬಳಿ ತಿಂಗಳಗೆ ೨೫ರೂಗಳ ಮಾಸಿಕ ಧನಸಹಾಯವನ್ನು ಪಡೆದು ಗಣಿತದ ಸಂಶೋಧನೆಯನ್ನು ಮುಂದುವರಿಸಿಕೊಂಡು ಹೋದರು.

ಕೆಲವೇ ತಿಂಗಳಲ್ಲಿ ಹೊಸ ಕೆಲಸವನ್ನು ಗಳಿಸಿ, ಮದ್ರಾಸಿನ ಟ್ರಸ್ಟ್‌ ಒಂದರಲ್ಲಿ ಗುಮಾಸ್ತರಾಗಿ ದುಡಿಯಲು ಆರಂಭಿಸಿದರು. ಒಮ್ಮೆ ಹಿರಿಯರಾಗಿದ್ದ ಪ್ರೊ.ಶೇಷು ಅಯ್ಯರ್ ರವರು, ಟ್ರನಿಟಿ ಕಾಲೇಜಿನ ಫೆಲೋ ಆಗಿದ್ದ ಜಿ.ಹೆಚ್.ಹಾರ್ಡಿ ಮತ್ತು ಕೇಂಬ್ರಿಡ್ಜ್‌ ಗಣಿತ ಉಪನ್ಯಾಸಕರಾಗಿದ್ದ ಕ್ಯಾಲೆ ಅವರಿಗೆ ತಮ್ಮ ಗಣಿತದ ಶೋಧನೆಗಳನ್ನು ತಿಳಿಸಬೇಕೆಂದು ರಾಮಾನುಜನ್‌ ರನ್ನು ಒತ್ತಾಯಿಸಿದರು ಆಗ ರಾಮಾನುಜನ್‌ ತಮ್ಮ ಮೊದಲ ಪತ್ರವನ್ನು ಬರೆದು, ಆ ಪತ್ರದಲ್ಲಿ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು.

ಗಣಿತ ಕ್ಷೇತ್ರಕ್ಕೆ ರಾಮಾನುಜನ್‌ ನೀಡಿದ ಅಸಾಧಾರಣ ಕೊಡುಗೆಯನ್ನು ಸ್ಮರಿಸಲೆಂದೇ ಅವರ ಜನ್ಮದಿನವಾದ ಡಿಸೆಂಬರ್‌ ೨೨ನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸಲಾಗುತ್ತಿದೆ.

ಸಾಧನೆ:

ಪ್ರಖ್ಯಾತ ವಿಜ್ಞಾನಿ ಜಿ.ಎಚ್.ಹಾರ್ಡಿ ಮತ್ತು ಕ್ಯಾಲೆ ಅವರುಗಳು ರಾಮಾನುಜನ್ ರ ಸೂತ್ರಗಳಿಂದ ಪ್ರಭಾವಿತರಾಗಿ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವಂತೆ ಅಹ್ವಾನಿಸಿದರು. ರಾಮಾನುಜನ್ ತಮ್ಮ ಮೊದಲ ಪತ್ರವನ್ನು ಬರೆದು ಆ ಪತ್ರದಲ್ಲಿ ನೂರಕ್ಕೂ ಹೆಚ್ಚು ಪ್ರಮೇಯಗಳನ್ನು ವಿವರಿಸಿದ್ದರು.

ಮರಣ:

ಸಸ್ಯಹಾರಿಯಾಗಿದ್ದ ರಾಮಾನುಜನ್‌ ರಿಗೆ ಇಂಗ್ಲೆಂಡಿನಲ್ಲಿ ಊಟದ ಸಮಸ್ಯೆ ಕಾಡಿತು. ಅಪೌಷ್ಟಿಕತೆ ತುತ್ತಾದರು. ಎಲ್ಲದರ ಪರಿಣಾಮದಿಂದ ದೇಹ ದಿನೇ ದಿನೇ ಕ್ಷೀಣಿಸುತ್ತಾ ಬಂತು. ಏಪ್ರಿಲ್‌ ೨೬ರ ೧೯೨೦ರಂದು ತೀವ್ರವಾದ ಕ್ಷಯರೋಗದಿಂದ ಜಗತ್ತಿನ ಮಹಾನ್‌ ಗಣಿತಜ್ಞ ಸಾವನ್ನಪ್ಪಿದಾಗ ಅವರ ವಯಸ್ಸು ಕೇವಲ ೩೨ ಮಾತ್ರ

ರಾಮಾನುಜನ್ನರ ಸ್ಮರಣ ಶಕ್ತಿ, ಸಹನೆ, ಸಾಧನೆಗಳು ಏನನ್ನಾದರೂ ಸಾಧಿಸಬೇಕೆಂಬ ಹಂಬಲವಿರುವ ಯುವಕರಿಗೆ ನಿರಂತರ ಸ್ಫೂರ್ತಿಯನ್ನು ನೀಡುವಂಥದ್ದಾದರೆ, ಉಳಿದವರಿಗೆ ಅವರೊಂದು ಸ್ಮೃತಿ ದಿವಸವಷ್ಟೇ.

ಇತರೆ ಪ್ರಬಂಧಗಳು:

ಬುದ್ಧನ ಜೀವನ ಚರಿತ್ರೆ ಕನ್ನಡ

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

Related Posts

Leave a comment