Subhashita in Kannada | ಸುಭಾಷಿತಗಳು 

Subhashita in Kannada, ಸುಭಾಷಿತಗಳು ಕನ್ನಡ, subhashita galu in Kannada, ಸುಭಾಷಿತ ಮಾತು, subhashita information in Kannada

Subhashita in Kannada

Subhashita in Kannada
Subhashita in Kannada ಸುಭಾಷಿತಗಳು 

ಈ ಲೇಖನಿಯಲ್ಲಿ ಸುಭಾಷಿತದ ಬಗ್ಗೆ ನಿಮಗೆ ಅನುಕೂಲವಾಗುವಂತೆ ಮಾಹಿತಿಯನ್ನು ನೀಡಿದ್ದೇವೆ.

ಸುಭಾಷಿತಗಳು ಎಂದರೇನು?

ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ ಎನ್ನುತ್ತಾರೆ. ಚೆನ್ನಾಗಿ’ ಎಂದರೆ ಕೇಳುವುದಕ್ಕೆ ಇಂಪಾಗಿಯೋ, ಸುಂದರವಾದ ಪದಗಳನ್ನು ಪೋಣಿಸಿರುವುದೋ ಅಥವಾ ಆಕರ್ಷಕವಾಗಿಯೋ ಆಡಿದ್ದು. ಮತ್ತು ಬದುಕನ್ನು ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ.

ಹೀಗಾಗಿಯೇ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯಪ್ರಕಾರವೇ ಅಪಾರವಾಗಿ ಬೆಳೆದಿದೆ.

ಸುಭಾಷಿತಗಳು

 • ಜೀವ ಚಿಕ್ಕದು ಜೀವನ ದೊಡ್ಡದು, ಸಾಯುವವನಿಗೆ ಒಂದೇ ದಾರಿ, ಸಾಧಿಸುವವನಿಗೆ ಸಾವಿರ ದಾರಿ.
 • ಮರದ ಮೇಲೆ ಕುಳಿತ ಹಕ್ಕಿಗೆ ಕೊಂಬೆ ಮುರಿದು ಬೀಳುವ ಭಯವಿರದು. ಅದು ನಂಬಿರುವುದು ತನ್ನ ರೆಕ್ಕೆಗಳನ್ನೇ ಹೊರತು ಕೊಂಬೆಯನ್ನಲ್ಲ.— ಕುವೆಂಪು.
 • ವಿದ್ಯೆಗಿಂತ ಬೇರೆ ಐಶ್ವರ್ಯವಿಲ್ಲ , ನಿರ್ಮಲ ಸ್ವಭಾವಕಿಂತ ಬೇರೆ ತೀರ್ಥ ಸ್ನಾನವಿಲ್ಲ
 • ಹುಲಿಗೆ ಹುಲ್ಲು ತಿನ್ನುವುದನ್ನು ಕಲಿಸಬಹುದು , ಮುರ್ಖನಿಗೆ ನೀತಿಯನ್ನು ಕಲಿಸುವುದು ಕಷ್ಟ ಸಾಧ್ಯ.
 • ನಮ್ಮ ಜೀವನವು ಮಾತನ್ನು ಆವಲಂಬಿಸಿಕೊಂಡಿದೆ; ನಮ್ಮ ಜೀವನ ಮಾತಿಲ್ಲದೆ ನಡೆಯದು. ನಮ್ಮ ಜೀವನದ ಸೊಗಸಿಗೂ, ಸುಖಕ್ಕೂ, ನೋವಿಗೂ ನಾವಾಡುವ ಮಾತು ಕಾರಣವಾಗಿರುತ್ತದೆ.
 • ʼಭೂಮಿಯಲ್ಲಿ ಶ್ರೇಷ್ಠವಸ್ತುಗಳೆಂದರೆ ಕೇವಲ ಮೂರು: ನೀರು, ಅನ್ನ ಮತ್ತು ಒಳ್ಳೆಯ ಮಾತು. ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ‘‘ರತ್ನ ’’ಎಂದು ಕರೆಯುತ್ತಿರುವುದು ವಿಷಾದಕರ.’
 • ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ.
 • ಎಲ್ಲಾ ಇದೆಯಂತ ಮೇರೆಯುವುದಕ್ಕಿಂತ ಮೊದಲು ನಿನ್ನವರು ಯಾರು ಅಂತ ತಿಳಿದುಕೋ.
 • ಒಂಟಿಯಾಗಿರುವುದು ಒಂದು ಅದೃಷ್ಟನೇ ಯಾಕೆಂದರೆ ಜೀವನದ ಮೇಲೆ ಆಸೆನೂ ಇರಲ್ಲ, ಸಾವು ಅಂದರೆ ಭಯನೂ ಇರಲ್ಲ.
 • ಶ್ರೀಮಂತಿಕೆ ಇರೋದು ಹಣ ಇರೋ ತನಕ, ದೀಪ ಉರಿಯುವುದು ಎಣ್ಣೆ ಇರೋತನಕ, ಪ್ರೀತಿ ಇರೋದು ಇಬ್ಬರಲ್ಲಿ ಒಬ್ಬರು ಕೈಕೊಡುವ ತನಕ, ಸ್ನೇಹ ಇರೋದು ಕೊನೆ ಉಸಿರಿರೋ ತನಕ.

Subhashita in Kannada

 • ಬಂಧಿತನಾದ ದೇವರೇ ಮನುಷ್ಯ ; ಬಂಧನದಿಂದ ಬಿಡಿಸಿಕೊಂಡ ಮನುಷ್ಯನೇ ದೇವರು. – ರಾಮಕೃಷ್ಣ ಪರಮಹಂಸ.
 • ಯಾರ ಬಗ್ಗೆ ಆಗಲಿ ತಪ್ಪು ತಿಳಿಯುವ ಮುನ್ನ ಒಮ್ಮೆ ಅವರ ಪರಿಸ್ಥಿತಿಯನ್ನು ಅರಿಯಲು ಪ್ರಯತ್ನಿಸಿ.
 • ಭಕ್ತಿ ಒಳ್ಳೆಯ ಮಾತುಗಳನ್ನಾಡಿಸಿದರೆ ಸಾಲದು.ಅದು ಒಳ್ಳೆಯ ಕೆಲಸಗಳನ್ನು ಮಾಡಿಸಬೇಕು. -ಡಿ.ವಿ.ಜಿ.
 • ಕಲಿಕೆ ವಿಷಯ ಬರೀ ತಿಳುವಳಿಕೆಯ ಮಟ್ಟದಲ್ಲಿ ಉಳಿಯದೆ ಹೆಚ್ಚು ಅರ್ಥಪೂರ್ಣ ಮಾಡಬಲ್ಲ ಮನುಷ್ಯನೊಬ್ಬ ಬೇಕು. ಆತನೇ ಕೋಚ್ ಅಥವಾ ಗುರು. -ಪಿ. ಲಂಕೇಶ್.
 • ಮನಸ್ಸಿನ ಭಾವನೆಗಳಿಗೆ ಪೆಟ್ಟು ಬಿದ್ದಾಗ ಆ ಮನದಲ್ಲಿ ಕೊನೆಗೆ ಉಳಿಯುವುದು ಮೌನ
 • ಸತ್ಯಕ್ಕಾಗಿ ಯಾವುದನ್ನಾದರೂ ತ್ಯಾಗ ಮಾಡಿ. ಆದರೆ ಸತ್ಯವನ್ನು ಮಾತ್ರ ತ್ಯಾಗ ಮಾಡಬೇಡಿ.- ಸ್ವಾಮಿ ವಿವೇಕಾನಂದ.
 • ಮೂರ್ಖನ ಹೃದಯ ಅವನ ನಾಲಿಗೆಯಲ್ಲಿರುತ್ತದೆ , ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ.
 • ಬುಧಿವಂತರಾದವರು ಹಿಂಜರಿಯದೆ ಹತ್ತಿರ ಹೋಗಿ ಆಪ್ತನಾದವನು ಸೇರಬೆಕು.
 • ಗಟ್ಟಿ ಯಾವುದು , ಜಳ್ಳು ಯಾವುದು ಎಂಬುದನ್ನು ತಿಳಿದು ಶಾಶ್ವತವಾದ ಸತ್ಯವನ್ನು ಹುಡುಕುವುದು ನಮ್ಮ ಧರ್ಮವಾಗಬೇಕು. -.ಬಿ.ಎಂ.ಶ್ರೀ.
 • “ತಾನಾಗಿ ಬರುವುದು; ತಾರುಣ್ಯ, ಮುಪ್ಪು, ಜೊತೆಯಲ್ಲೇ ಬರುವುದು; ಪಾಪ, ಪುಣ್ಯ, ತಡೆಯಿಲ್ಲದೆ ಬರುವುದು; ಆಸೆ, ದುಃಖ, ಅನಿವಾರ್ಯವಾಗಿ ಬರುವುದು; ಹಸಿವು, ದಾಹ, ನಾಶಕ್ಕಾಗಿ ಬರುವುದು; ದ್ವೇಷ, ಸಿಟ್ಟು, ಸಮಾನಾಂತರದಲ್ಲಿ ಬರುವುದು; ಹುಟ್ಟು, ಸಾವು”.
 • ತನ್ನ ಎತ್ತರವಾದ ಗುಣದಿಂದ ಮಾತ್ರ ಮನುಷ್ಯ ಎತ್ತರವಾದ ಸ್ಥಾನಕ್ಕೇರಲು ಸಾಧ್ಯ. ಶಿಖರದ ತುದಿಗೆ ಕೂತ ಮಾತ್ರಕ್ಕೆ ಕಾಗೆ ಗರುಡನಾಗಲು ಸಾಧ್ಯವೇ?
 • ಸೋಲು ಎಂಬುದು ಮತ್ತೊಮ್ಮೆ ಹೆಚ್ಚು ಚೈತನ್ಯದಿಂದ ಯತ್ನಿಸಲು ನೀಡಲ್ಪಡುವ ಒಂದು ಅವಕಾಶ.
 • ಪ್ರತಿಭೆ , ಶ್ರಮ ಮತ್ತು ಸ್ವಲ್ಪ ಅದೃಷ್ಟ ಇವುಗಳ ಮಿಶ್ರಣವೇ ಯೆಶಸ್ಸು.
 • ಬರೆದಿಟ್ಟಂತೆ ಜೀವನ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಆದರೆ ಬರೆದಿಡುವಂತಹ ಜೀವನ ಮಾಡಲು ಸಾಧ್ಯವಿದೆ.
 • ಸದ್ಗುಣ ಮತ್ತು ದುರ್ಗುಣಗಳ ವ್ಯತ್ಯಾಸ ತಿಳಿಯದಾದಾಗ ನಮ್ಮ ಬೆಳವಣಿಗೆ ನಿಲ್ಲುತ್ತದೆ. – ಮಹಾತ್ಮಾ ಗಾಂಧಿ.
 • ಮತ್ತೆ ಮತ್ತೆ ಯಾವ ಪುಸ್ತಕ ಓದುತ್ತೇವೆಯೋ ಅದು ಉತ್ತಮವಾದ ಪುಸ್ತಕ. – ಜಾನ್ ರಸ್ಕಿನ್.
 • ದಾರಿ ಇರುವ ಕಡೆ ನಡೆದು ಸಾವಿರಾರು ಜನರಲ್ಲಿ ನೀವೊಬ್ಬ ರಾಗ ದಿರಿ ದಾರಿ ಇಲ್ಲದ ಕಡೆ ನಡೆದು ಹೊಸ ಹಾದಿ ಸೃಷ್ಟಿಸಿ ಸಾವಿರಕ್ಕೊಬ್ಬ ರಾಗಿ.
 • ಅದೃಷ್ಟ ವೆನ್ನುವುದು ಪ್ರಯತ್ನವೆಂಬ ತಾಯಿಗೆ , ಅವಕಾಶವೆಂಬ ತಂದೆಗೆ ಜನಿಸುವ ಮಗು.- ಗುರುನಾನಕ್.
 • ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದು:ಖಿಯೂ ಅಲ್ಲ. – ಗೌತಮ ಬುದ್ಧ

ಸುಭಾಷಿತಗಳು

 • ಇನ್ನೊಬ್ಬರ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ ನಮ್ಮ ಹುಚ್ಚುತನ ನಮಗೆ ಕಾಣಿಸದು. -ಶಿವರಾಮ ಕಾರಂತ.
 • ಸಮಯದ ಆಟಕ್ಕೆ ಕೈಗೊಂಬೆ ನಾವು ಸಮಯ ಸರಿ ಇದ್ದಾಗ ನಾವು ಸರಿ ಇರುವುದಿಲ್ಲ ನಾವು ಸರಿ ಇದ್ದಾಗ ಸಮಯ ತರ ಇರಲ್ಲ ಎಲ್ಲವೂ ಎಲ್ಲವೂ ಸರಿ ಇದ್ದಾಗ ನಾವೇ ಇರಲ್ಲ.
 • ವಿದ್ಯೆಗಿಂತ ಬೇರೆ ಐಶ್ವರ್ಯವಿಲ್ಲ , ನಿರ್ಮಲ ಸ್ವಭಾವಕಿಂತ ಬೇರೆ ತೀರ್ಥ ಸ್ನಾನವಿಲ್ಲ.
 • ಭಾಗ್ಯವಿರಬಹುದು, ಬೇಕಾದವರು ಇರಬಹುದು , ಫಲ ಮಾತ್ರ ಪಡೆದಷ್ಟೇ. – ಎ.ಆರ್.ಕೃಷ್ಣ ಶಾಸ್ತ್ರಿ.
 • ತನ್ನ ಎತ್ತರವಾದ ಗುಣದಿಂದ ಮಾತ್ರ ಮನುಷ್ಯ ಎತ್ತರವಾದ ಸ್ಥಾನಕ್ಕೇರಲು ಸಾಧ್ಯ. ಶಿಖರದ ತುದಿಗೆ ಕೂತ ಮಾತ್ರಕ್ಕೆ ಕಾಗೆ ಗರುಡನಾಗಲು ಸಾಧ್ಯವೇ?
 • ಸಾಯುವುದು ಸುಲಭ, ಬಾಳುವುದು ದೊಡ್ಡ ಹೊಣೆಗಾರಿಕೆ. – ಎಸ್. ವಿ.ರಂಗಣ್ಣ.
 • “ಯಾರನ್ನಾದರೂ ಮರೆಯುವುದಾದರೆ ಮರೆತುಬಿಡಿ, ಆದರೆ! ಯಾರನ್ನು ಮರೆತಿದ್ದೇವೆ ಎಂಬುವುದನ್ನು ನೆನಪಿಟ್ಟುಕೊಳ್ಳಿ”
 • “ನಮ್ಮನ್ನು ಪ್ರೀತಿಸುವವರಿದ್ದಾರೆ” ಎನ್ನುವ ನಂಬಿಕೆಯೇ ಜೀವನದ ಅತ್ಯಂತ ಹೆಚ್ಚಿನ ಸುಖ.—– ವಿಕ್ಟರ್ ಹ್ಯೂಗೊ.
 • ನೀವು ಹುಟ್ಟುವಾಗ ಏನನ್ನೂ ತರುವುದಿಲ್ಲವಾದುದರಿಂದ ನಂತರ ಪಡೆದಿದ್ದೆಲ್ಲ ಲಾಭವೇ.
 • ಸೌಂದರ್ಯ ಅಡಗಿರುವುದು ಹೃದಯದಲ್ಲಿ ಮುಖದಲ್ಲಿ ಅಲ್ಲ.
 • ಮಾತು ವೈರಿಗಳ ಮುಂದೆ ಗತ್ತಿನಂತಿರಬೇಕು, ಹೆದರಿಸುವವರು ಮುಂದೆ ಕತ್ತಿಯಂತಿರಬೇಕು, ಆತ್ಮೀಯರ ಮುಂದೆ ಮುತ್ತಿನಂತೆ ಇರಬೇಕು, ಹಿರಿಯರ ಮುಂದೆ ಹತ್ತಿಯಂತೆ ಇರಬೇಕು.
 • ಮಾತಿಗೆ ಬೆಲೆ ಇಲ್ಲದಿದ್ದಾಗ ಮೌನವೇ ಒಳ್ಳೆಯದು ಮನುಷ್ಯನಿಗೆ ಬೆಲೆ ಇಲ್ಲದಾಗ ದೂರ ಇರುವುದು ಒಳ್ಳೆಯದು.

ಇತರೆ ಪ್ರಬಂಧಗಳು:

Proverbs in Kannada

gadhe mathugalu kannada

ವಿರುದ್ಧಾರ್ಥಕ ಪದಗಳು ಕನ್ನಡ 50

Leave a Comment