ಹಲೋ ಸ್ನೇಹಿತರೇ ಪ್ರತೀ ಕುಟುಂಬದಲ್ಲಿ ಸಮಸ್ಯೆಯನ್ನು ತರುವಂತಹ ಒಂದು ವಿಷಯ ಅಂದರೆ ಆಸ್ತಿ ಪಾಲು ಮಾಡುವುದು. ಆಸ್ತಿಯ ವಿಷಯ ಬಂದಾಗ ಒಡಹುಟ್ಟಿದವರ ಮಧ್ಯ ಜಗಳ ಆಗಿರುವುದನ್ನ ನೀವು ಸಹ ನೋಡಿರುತ್ತೀರಾ. ಆದರೆ ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಒಂದು ಮಹತ್ವದ ನಿರ್ಧಾರವನ್ನು ಘೋಷಿಸಿದೆ. ಆ ನಿರ್ಧಾರದಲ್ಲಿ ಯಾರ ಆಸ್ತಿ ಯಾರಿಗೆ ಯಾವಾಗಿ ಹೋಗುತ್ತೆ ಮತ್ತು ಗಂಡು ಮಕ್ಕಳಿಲ್ಲದೆ ಹೆಣ್ಣು ಮಕ್ಕಳು ಮಾತ್ರ ಇದ್ದರೆ ಆಸ್ತಿ ಯಾರ ಪಾಲಾಗುತ್ತೆ ಎಂಬ ಎಲ್ಲಾ ಮಾಹಿತಿಯನ್ನು ತಿಳಿಯಲು ನಮ್ಮ ಈ ಲೇಖನವನ್ನು ಸ್ವಲ್ಪನೂ ಮಿಸ್ ಮಾಡದೆ ಕೊನೆಯವರೆಗೂ ಓದಿ.

ಕೂರ್ಟ್ ತೀರ್ಪನ್ನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಈ ನಿರ್ಧಾರವನ್ನು ನೀಡಿದೆ. ಒಂದು ವೇಳೆ ಒಬ್ಬ ವ್ಯಕ್ತಿ ತನ್ನ ಆಸ್ತಿ ಯಾರಿಗೆ ಸೇರಬೇಕೆಂದು ವಿಲ್ ಬರೆಯದೆ ಹೋದರೆ ಅದರಲ್ಲಿ ಆತನ ಮಗಳಿಗೆ ಆಸ್ತಿಯ ಹಕ್ಕು ಸಂಪೂರ್ಣವಾಗಿ ಇರುತ್ತೆ ಎಂದು ತಿಳಿಸಿದೆ. ಮರಣ ಹೊಂದಿದ ವ್ಯಕ್ತಿಯ ಸಹೋದರನ ಮಕ್ಕಳಿಗಿಂತ ಆ ವ್ಯಕ್ತಿಯ ಸ್ವಂತ ಮಗಳಿಗೆ ಆಸ್ತಿಯ ಹಕ್ಕು ಇರುತ್ತದೆ ಎಂದು ತಿಳಿಸಲಾಗಿದೆ. ತಮಿಳುನಾಡಿನಲ್ಲಿ ನಡೆದಿರುವ ಘಟನೆಯಲ್ಲಿ ವ್ಯಕ್ತಿಯು 1949 ಮರಣ ಹೊಂದಿದ್ದರು. ಈ ಸಮಯದಲ್ಲಿ ಅವರು ತಮ್ಮ ಆಸ್ತಿ ಯಾರಿಗೆ ಸಿಗಬೇಕು ಅಂತ ಪ್ರಮಾಣ ಪತ್ರದಲ್ಲಿ ಬರೆದಿರಲಿಲ್ಲ. ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವ ಕಾರಣ ಆ ವ್ಯಕ್ತಿಯ ಸಹೋದರನ ಗಂಡು ಮಕ್ಕಳಿಗೆ ಆ ಸಂದರ್ಭದಲ್ಲಿ ಆಸ್ತಿಯನ್ನು ಕೊಡಬೇಕು ಎಂದು ನ್ಯಾಯಾಲಯ ತೀರ್ಮಾನವನ್ನು ಮಾಡಿತ್ತು. ಆದರೆ ಆ ವ್ಯಕ್ತಿಯ ಮಗಳಿಗೂ ಸಹ ಆಸ್ತಿಯಲ್ಲಿ ಪಾಲು ಸಿಗಬೇಕು ಅವಳಿಗೂ ಕೂಡ ಪ್ರಾಥಮಿಕ ಹಕ್ಕು ಇದೆ ಅಂತ ಸುಪ್ರೀಮ್ ಕೋರ್ಟ್ ನಿರ್ಣಯ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ನಿಯಮವನ್ನು ಜಾರಿಮಾಡಿದೆ. ಎಂದು ತಿಳಿದು ಬಂದಿದೆ.
ಒಬ್ಬ ವ್ಯಕ್ತಿ ಕೇವಲ ಹೆಣ್ಣು ಮಗಳನ್ನು ಮಾತ್ರ ಹೊಂದಿದ್ದರೆ ಆ ವ್ಯಕ್ತಿಯ ಆಸ್ತಿ ಪಾಲುದಾರಿಕೆಯಲ್ಲಿ ಕಾನೂನಿನ ಪ್ರಕಾರ ಮಗಳಿಗೆ ಸಂಪೂರ್ಣವಾದ ಅಧಿಕಾರವನ್ನು ಹೊಂದಬಹುದಾಗಿದೆ ಎಂದು ತಿಳಿದು ಬಂದಿದೆ. ಈ ತೀರ್ಪು ಖಂಡಿತವಾಗಿ ಮುಂದಿನ ದಿನಗಳಲ್ಲಿ ಆಸ್ತಿಯನ್ನು ಪಾಲು ಮಾಡುವಾಗ ಸಾಕಷ್ಟು ಪರಿಣಾಮವನ್ನು ಬೀರಬಹುದು ಎಂದು ಆಲೋಚಿಸಲಾಗಿದೆ. ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿಯಲೇಬೇಕಾದ ವಿಷಯವಾಗಿದೆ