Swaragalu in Kannada, ಕನ್ನಡದ ಸ್ವರಗಳು, kannada swaragalu with pictures, kannada swaragalu information in kannada, kannada swaragalu types swaragalu endarenu in kannada swaragalu vyanjanagalu swaragalu vyanjanagalu in kannada
Swaragalu in Kannada | ಕನ್ನಡ ಸ್ವರಗಳು

ಈ ಲೇಖನಿಯಲ್ಲಿ ಕನ್ನಡ ಸ್ವರಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ ಇದರ ಅನುಕೂಲ ಪಡೆದುಕೊಳ್ಳಿ.
ಸ್ವರಗಳು ಎಂದರೇನು?
ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಸ್ವರಗಳು ಎಂದು ಕರೆಯುತ್ತಾರೆ.
ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ ಕನ್ನಡ ವರ್ಣಮಾಲೆಯಲ್ಲಿ ಒಟ್ಟು 49 ಅಕ್ಷರಗಳಿವೆ .
ಆ ವರ್ಣಮಾಲೆಯಲ್ಲಿ ಮೂರು ವಿಧಗಳಿವೆ…
೧.ಸ್ವರಗಳು
೨.ವ್ಯಂಜನಗಳು
೩.ಯೋಗವಾಹಗಳು
ಕನ್ನಡದಲ್ಲಿ ಒಟ್ಟು 13 ಸ್ವರಗಳಿವೆ.
ಈ ಸ್ವರಗಳನ್ನು ಮತ್ತೆ ಮೂರು ವಿಧಗಳಾಗಿ ವಿಂಗಡಿಸಲಾಗುತ್ತದೆ
೧. ಹೃಸ್ವ ಸ್ವರಗಳ
೨ ದೀರ್ಘ ಸ್ವರಗಳು
೩. ಪ್ಲುತ ಸ್ವರಗಳು
೧. ಹೃಸ್ವ ಸ್ವರಗಳು: ಒಂದೇ ಮಾತ್ರೆ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹೃಸ್ವ ಸ್ವರಗಳು ಎಂದು ಕರೆಯಲಾಗುತ್ತದೆ .
ಉದಾ : ಅ ಇ ಉ ಋ ಎ ಒ
೨. ದೀರ್ಘ ಸ್ವರಗಳು : ಎರಡು ಮಾತ್ರೆ ಕಾಲದಲ್ಲಿ ಉಚ್ಛರಿಸಲ್ಪಡುವ ಸ್ವರಗಳಿಗೆ ದೀರ್ಘ ಸ್ವರಗಳು ಎನ್ನಲಾಗುತ್ತದೆ .
ಇವುಗಳನ್ನು ಉಚ್ಚರಿಸಲು ದೀರ್ಘ ಉಸಿರು ಉಸಿರು ಬೇಕಾಗುತ್ತದೆ .
ಧೀರ್ಘಸ್ವರ ಎರಡು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಧೀರ್ಘಸ್ವರಗಳು ಎಂದು ಕರೆಯುತ್ತೇವೆ .
ಕನ್ನಡದಲ್ಲಿ ಏಳು ಧೀರ್ಘಸ್ವರಗಳಿವೆ
ಉದಾ : ಆ ಈ ಊ ಏ ಐ ಓ ಔ .
೩.ಪ್ಲುತ ಸ್ವರಗಳು : ಮೂರು ಮಾತ್ರೆಯ ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರವನ್ನು ಪುತಾಕ್ಷರ ಎಂದು ಅಥವಾ ದೀರ್ಘ ಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರಕ್ಕೆ ಪುತಾಕ್ಷರ ಎಂದು ಕರೆಯುತ್ತೇವೆ,
ಇಲ್ಲಿ ದೀರ್ಘ ಸ್ವರಗಳನ್ನು ಎಳೆದು ಉಚ್ಚರಿಸಲಾಗುತ್ತದೆ
ಉದಾ : ತಮ್ಮಾ SS , ಗೆಳೆಯಾ SSS.
ಇತರೆ ಪ್ರಬಂಧಗಳು