Talidavanu Baliyanu Gade in Kannada | ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ 

Talidavanu Baliyanu Gade in Kannada, ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ, talidavanu baliyanu gade mathu vistarane in kannada

Talidavanu Baliyanu Gade in Kannada

Talidavanu Baliyanu Gade in Kannada
Talidavanu Baliyanu Gade in Kannada ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ 

ಈ ಲೇಖನಿಯಲ್ಲಿ ನಿಮಗೆ ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆಯನ್ನು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.

ತಾಳಿದವನು ಬಾಳಿಯಾನು

ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ತಾಳಿದವನು ಬಾಳಿಯಾನು ಎಂಬುವುದು ಒಂದು ಅರ್ಥಪೂರ್ಣವಾದ ಗಾದೆಮಾತು. ಜೀವನದಲ್ಲಿ ತಾಳ್ಮೆ ಎಂಬುವುದು ಬಹಳ ಮುಖ್ಯ.

ದುಡುಕು, ಕೋಪ, ಆತುರ ಮುಂತಾದವು ಅನರ್ಥಸಾಧನಗಳು. ಜೀವನದಲ್ಲಿ ಏಳು ಬೀಳುಗಳು, ಕಷ್ಟ ಕಾರ್ಪಣ್ಯ, ಸುಖ ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ, ಎಂತಹ ಸಂದರ್ಭದಲ್ಲಿಯೂ ವಿವೇಕವನ್ನು ಕಳೆದುಕೊಳ್ಳಬಾರದು ತಾಳ್ಮೆಯಿಂದಿರಬೇಕು. ಜೀವನದಲ್ಲಿ ತಾಳ್ಮೆಯು ಅತಿ ಮುಖ್ಯವಾದುದು.

ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಎರಡನ್ನು ಸಮಾನಭಾವದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಇದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗುತ್ತದೆ. 

ಬೀಜ ಮೊಳಕೆಯೊಡೆದ ಕೂಡಲೇ ಅದು ಪಸಲು ಬಿಡಬೇಕು ಎಂದರೆ ಸಾಧ್ಯವಿಲ್ಲ. ಅದಕ್ಕೆ ಇಂತಿಷ್ಟು ಸಮಯ ಬೇಕಾಗುತ್ತದೆ. ಹಾಗೆಯೇ ಸಂಗೀತ, ನೃತ್ಯ, ಕರಾಟೆ, ಆಟೋಟ ತರಬೇತಿಗಳಿಗೆ ಸೇರಿದ ತಕ್ಷಣ ಬಹುಮಾನ, ಹಣ, ಹೆಸರು ಬರಬೇಕೆಂದರೆ ಅದು ಅಸಾಧ್ಯ. ಅದಕ್ಕೂ ಪ್ರಯತ್ನ ಹಾಗೂ ಸಮಯ ಬೇಕಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ತಾಳ್ಮೆ ಅತ್ಯಗತ್ಯ.

ತಾಳ್ಮೆಗಿಂತ ಮುಖ್ಯವಾದ ಗುಣ ಬೆರಾವುದೂ ಇಲ್ಲ. ತಾಳ್ಮೆ ಇದ್ದರೆ ನಾವೆೇನ ದರೂ ಸಾಧಿಸಬಹುದು.ಬಾಳೊಂದು ದೋಣಿ. ತಾಳ್ಮೆಯೇ ಅದನ್ನು ಸರಿಯಾದ ಪಥದಲ್ಲಿ ಕರೆದುಕೊಂಡು ಹೋಗುವ ಶಕ್ತಿ. ತಾಳ್ಮೆ ನಮ್ಮ ಶಕ್ತಿಯಾಗಿದ್ದರೆ ನಾವು ಯಾವ ಯುಧ್ಧವನ್ನು ಗೆಲ್ಲಬಹುದು. ನಾವು ಗೆಲುವನ್ನು ಸಾಧಿಸಬೆಕಾದಾರೆ ತಾಳ್ಮೆಯನ್ನು ಬೆಳೆಸಿಕೊಳ್ಳುವುದು ಅತ್ಯಗತ್ಯ.

 ನಾವು ಬಹಳಷ್ಟು ಕೆಲಸಗಳನ್ನು ಆತುರಾತುರವಾಗಿ ಮಾಡಿಬಿಡುತ್ತೇವೆ. ಸರಿಯಾದ ಫಲ ಸಿಗದೇ ಇದ್ದಾಗ ಇನ್ನಾರನ್ನೋ ದೂರುತ್ತೇವೆ. ಮಾಡುವ ಕೆಲಸ ಸಣ್ಣದೇ ಇರಲಿ, ದೊಡ್ಡದೇ ಆಗಿರಲಿ, ಸಹನೆಯಿಂದ ವಿವೇಚನೆಯೊಂದಿಗೆ ಮಾಡಿದರೆ ಅದರ ಫಲ ನಿಜಕ್ಕೂ ಅತ್ಯುತ್ತಮವಾಗಿರುತ್ತದೆ. 

ಮಾನವರ ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ ಎಕೆಂದರೆ ನಾವು ದುಡುಕಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ನಮ್ಮ ಜೀವ, ಜೀವನದ ಭವಿಷ್ಯವಿರುತ್ತದೆ. ಅತುರದಲ್ಲಿ ತೆಗೆದುಕೊಂಡ ನಿರ್ಧಾರ ನಿಮ್ಮ ಜೀವನವನಕ್ಕೆ ದೊಡ್ಡ ಪೆಟ್ಟಾಗುತ್ತದೆ. ಹಾಗಾಗಿ ನಾವು ಆಲೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಬೇಕು. ಬಹು ಮುಖ್ಯವಾಗಿ ತಾಳ್ಮೆಬೇಕು.

ಇತರೆ ಪ್ರಬಂಧಗಳು:

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು, ಅರ್ಥ ವಿವರಣೆ

ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ

ಆರೋಗ್ಯವೇ ಭಾಗ್ಯ ಗಾದೆ ಮಾತಿನ ವಿಸ್ತರಣೆ

ಸೋಲು ಗೆಲುವಿನ ಸೋಪಾನ ಗಾದೆ ಮಾತು ವಿವರಣೆ

ಕನ್ನಡ ಗಾದೆಗಳು ಮತ್ತು ವಿವರಣೆ

ಗಾದೆ ಮಾತುಗಳು ಕನ್ನಡದಲ್ಲಿ

Leave a Comment