ನಾಲಿಗೆ ನುಲಿಗಳು | Tongue Twisters in Kannada

ನಾಲಿಗೆ ನುಲಿಗಳು, Tongue Twisters in Kannada, naalige nuligalu in kannada, ನಾಲಿಗೆ ನುಲಿಗಳು ಕನ್ನಡದಲ್ಲಿ, 30 tongue twisters in kannada

ನಾಲಿಗೆ ನುಲಿಗಳು

Tongue Twisters in Kannada
ನಾಲಿಗೆ ನುಲಿಗಳು Tongue Twisters in Kannada

ಈ ಲೇಖನಿಯಲ್ಲಿ ನಾಲಿಗೆ ನುಲಿಗಳು ಇವು ಕಠಿಣವಾದ ಪದಗಳು ಹಾಗೂ ಮೋಜಿನ ಆಟಕ್ಕೆ ಉತ್ತಮವಾಗಿದೆ ನಿಮಗೆ ಅನುಕೂಲವಾಗುವಂತೆ ನಾವು ನೀಡಿದ್ದೇವೆ. ನೀವು ಇದರ ಅನುಕೂಲವನ್ನು ಪಡೆದುಕೊಳ್ಳಿ.

30+Tongue Twisters in Kannada

1. ಸಂಪಂಗಪ್ಪನ ಮಗ ಮರಿಸಂಪಂಗಪ್ಪ. ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ.

2. ಕಾಗೆ ಪುಕ್ಕ, ಗುಬ್ಬಿ ಪುಕ್ಕ. 

3. ಕಪ್ಪು ಕುಂಕುಮ ಕೆಂಪು ಕುಂಕುಮ.

4. ಕುರುಡು ಕುದುರೆಗೆ ಹುರಿದ ಹುರಿಗಡಲೆ.

5. ತೆರಿಕೆರೆ ಯರಿ ಮಲೆ ಮೂರು ಕರಿ ಕುರಿಮರಿ ಮೇಯುತ್ತಿತ್ತು.

6. ಆಲದಮರದ ಬುಡ ತಳಿರೊಡೆದೆರೆಡೆಲೆಯಾಯ್ತು.

7. ರೈಲು ಲಾರಿ, ಲಾರಿ ರೈಲು.

8. ಅಲ್ಲ ಬೆಲ್ಲ ಕೋಳಿ ಬಾಯಲ್ಲಿ ಹಲ್ಲಿಲ್ಲ.

9. ಹುಡುಗಿ ಕೆಡಿಸಿದಳೆ ಎಳೆ ಹುಡುಗನ ತಲೆ.

10. ಜಂಬಾಗಿ ತೂಕಪ್ಪ ತುಂಬಿದ ತುಪ್ಪದ ತುಂಬಿಗಿ ತಂದಾನ.

11. ಎರಡೆರಡೆಮ್ಮೆ ಮರದಡಿ ನಿಂತು ಕರದಾದ ಹುಲ್ಲು ಕರಕರ ತಿಂದ್ವು.

12. ಕೆಸ್ತೂರು ರಸ್ತ್ರೇಲಿ ಕಸ್ತೂರಿರಂಗರಾಯ್ರು ಪಿಸ್ತೂಲ್‌ ಏಟ್ತಿಂದು ಸುಸ್ತಾಗಿಸತ್ತಬಿದ್ದ್ರೂ.

13. ತೆಂಕಣ ತೋಟದ ತೆಂಗಿನ ಮರದಲಿ ಮೇಲೇಳೋಲೆ ಕೆಲಗೇಳೋಲೆ.

14. ಮೈಸೂರಿನ ಮುದುಕ, ಮುದುಕನ ಹೆಂಡತಿ, ಹೆಂಡತಿಯ ತಮ್ಮ, ತಮ್ಮನ ಮಗಳು, ಮಗಳ ನಾಯಿ ನಾಯಿಯ ಬಾಲ ಬೆಂಗಳೂರಿಗೆ ಬಂದಿತು.

15. ಅವಳರಳಳೆದ ಕೊಳಗದಲಿ ಇವಳರಳಳೆದಳು.

16. ಕುಂಟರಣೆ ಕುರುಡರಣೆ ಕೊಡದೊಳಗೆ ಎರಡರಣೆ ಉರುಡಿ ಪರಡಿ ತಿಂಬರಣೆ.

17. ಕೆಂಪು ಲೋರಿ ಕಪ್ಪು ಲೋರಿ.

18. ಲೋರಿ ರಾಲಿ.

19. ಅನು ಸಿರಿಮನೆ ಅಪ್ಪ ಸುಬ್ಬು ಸಿರಿಮನೆ ಸುಬ್ಬು ಸಿರಿಮನೆ ಹೆಂಡ್ತಿ ಪುಷ್ಪ ಸಿರಿಮನೆ.

20. ಕಲುಷಿತವಲ್ಲದ ಕಷಾಯವು ವಿಷವೆಂದೆನಿಸಿದರೂ ವಿಷಮಶೀತ ಜ್ವರಕ್ಕೆ ಕಷಾಯವಾಗಿದೆ.

21. ಎತ್ತೆರಡೆ ಮ್ಮೆ ಡಾಮೆರ ಡಾಡೆರಡು ಆಡಿನ ಮರಿಯೆರಡು.

22. ಅರಳಿಮರದಡರಿನೆಡೆಯಲ್ಲೆರಡೆರಡರಣೆಗಳುರುಳಾಡುತ್ತಿವೆ.

23. ರೆಡ್‌ ಲಾರಿ ಬ್ಲೂ ಲಾರಿ.

24. ಅಕ್ಕಪಕ್ಕ ಸಿಕ್ಕಿನಕ್ಕ ಹಕ್ಕಿಪುಕ್ಕ ಹೆಗ್ಗಿಮುಕ್ಕ ರಾಗಿನಕ್ಕು ಕಿಕ್ಕಿರಿದ ಟಕರಕ ಟಕಟ…..ಪಕ್ಕ ತಲೆ ಚಿಕ್ಕ ತಲೆ ಪಕ್ಕದಲೆ ಸುತ್ತುತಲೆ ಕಗ್ಗತ್ತಲೆ ಮೂಡುತಲೆ ಕೊಕ್ಕರೆದ ಕುಕ್ಕುಟ….

25. ಅರಗಿಣಿ ಮರಿ ಗಿಡ ಮರಗಳ ಮರೆಯಲಿ ಕರಿಗರಿಗೆದರಿಸಿ ಚಿಲಿಪಿಲಿಯುಲಿಯಿತು.

26. ಬಸಮ್ಮನ ಹೊಸಮನೆಯಲಿ ಬಿಸಿಬಿಸಿ ಗಸೆಗಸೆ ಪಾಯಸದ ಸುವಾಸನೆ.

27. ಕಡಲ ಒಡಲ ಮಡಿಲ ಗುಡಿಲ ಬಡಿದ ಸಿಡಿಲ ಕಿಡಿಯನು.

28. ಪಂಕಜಳ ಮನೆಯ ಪಕ್ಕ ಅಂಬುಜಳ ಮನೆ ಅಂಬುಜಳ ಮನೆಯ ಪಕ್ಕ ಪಂಕಜಳ ಮನೆ.

29. ಬಂಕಾಪುರದ ಕೆಂಪು ಕುಂಕುಮ, ಕೆಂಪಾಪುರದ ಕಪ್ಪು ಕುಂಕುಮ.

30. ಉತ್ತುತ್ತೆ ಮತ್ತೆ ಮತ್ತೆ ನಾಪತ್ತೆ, ಅತ್ತೆಯಿಂದ ಉತ್ತುತ್ತೆ ಪತ್ತೆ.

31. ನೀರಲ್ಲಿ ಬಿದ್ದ ನಿಂಬೆಕಾಯಿ ನೆಲ್ಕೂಳಿ ಬಂದು ನಿಮ್ಮಿಯ ಕೈ ಸೇರಿ ನಿಂಬೆಯು ನೀರಲಿ ನೆನೆದಂತೆ.

ಇತರೆ ಪ್ರಬಂಧಗಳು:

ಕನ್ನಡ ಗಾದೆಗಳು ಮತ್ತು ವಿವರಣೆ 

Subhashita in Kannada 

gadhe mathugalu kannada

Leave a Comment