ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ, Vanyajeevi Gala Samrakshana Prabandha in Kannada, Vanyajeevi Gala Samrakshana Essay in Kannada

ವನ್ಯಜೀವಿ ಸಂರಕ್ಷಣೆ ಬಗ್ಗೆ ಪ್ರಬಂಧ:

ಈ ಲೇಖನಿಯ ಮೂಲಕ ವನ್ಯಜೀವಿಗಳ ಸಂರಕ್ಷಣೆಯನ್ನು ಮಾಡುವುದು ಹೇಗೆ ಎಂದು ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ ಹಾಗೂ ಉಚಿತವಾಗಿ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಎಲ್ಲರಿಗೂ ಸಹಾಯವಾಗುವಂತೆ ನೀಡಿದ್ದೇವೆ.

ಪೀಠಿಕೆ:

ವನ್ಯಜೀವಿಗಳು ಎಲ್ಲಾ ರೀತಿಯ ಪರಿಸರದಲ್ಲೂ ಕಂಡು ಬರುತ್ತವೆ.ಮರುಭೂಮಿ,ಮಳೆಕಾಡು,ಬಯಲು ಪ್ರದೇಶ ಹಾಗೂ ಸಂಪೂರ್ಣ ಅಭಿವೃದ್ಧಿ ಹೊಂದಿದ ನಗರ ಪ್ರದೇಶಗಳಲ್ಲೂ ವನ್ಯಜೀವಿ ಪ್ರಭೇದಗಳನ್ನು ಕಾಣಬಹುದು.ಪ್ರಪಂಚದಾದ್ಯಂತ ವನ್ಯಜೀವಿ ಸಂಕುಲದ ಮೇಲೆ ಮಾನವನ ಚಟುವಟಕೆಗಳು ಪ್ರಭಾವ ಬೀರಿವೆ.

ವನ್ಯಜೀವಿ ಸಂರಕ್ಷಣೆ:

ದೇಶದಲ್ಲೇ ಅತೀ ಹೆಚ್ಚು ಹುಲಿಗಳ ಹೊಂದಿದ ರಾಜ್ಯ ಕರ್ನಾಟಕ. ಅತೀ ಹೆಚ್ಚು ಆನೆಗಳನ್ನು ಪೋಷಿಸುತ್ತಿರುವ ರಾಜ್ಯ ಸಹ ನಮ್ಮದು. ನದಿ ತೊರೆಗಳು,ಕಾಡು, ಪರ್ವತಗಳ ಜೂತೆಗೆ ಸುಂದರ ಗಿರಿಕಂದರಗಳ ಬೀಡು ನಮ್ಮ ನಾಡು. ಈ ಹಿನ್ನಲೆಯಲ್ಲಿ ಕಾಡಂಚಿನ ಗ್ರಾಮಗಳ ಜನರಲ್ಲಿ ವನ್ಯಜೀವಿಗಳ ಜತೆ ಸಹಬಾಳ್ವೆ ನಡೆಸುವ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚಾಗಿದೆ. ಇದರ ಫಲವಾಗಿ ಪರಿಸರ ಮತ್ತು ವನ್ಯಜೀವಿ ಪ್ರವಾಸೋದ್ಯಮ ಸಹ ಹೆಚ್ಚೆಚ್ಚು ಜನರನ್ನು ಆಕರ್ಷಿಸತೊಡಗಿದೆ. ವನ್ಯ ಜೀವಿಗಳ ರಕ್ಷಣೆ ಕಾನೂನು ಕ್ರಮಗಳನ್ನು ಜಾರಿಗೆ ತಂದಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2017ರ ವರ್ಷವನ್ನುʼ ವನ್ಯಜೀವಿಗಳ ʼ ಎಂಬ ಘೋಷಣೆ ಮಾಡಿದೆ. ಈ ಇಡೀ ವರ್ಷ ವನ್ಯಜೀವಿಗಳ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸುವ ಹಾಗೂ ಸಂರಕ್ಷಣೆಯನ್ನು ಪ್ರೋತ್ಸಾಹಿಸುವ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅರಣ್ಯ ಸಂರಕ್ಷಣೆಯಲ್ಲಿ ಸದಾ ಮುಂಚೂಣಿಯಲ್ಲಿದ್ದು ಕೆಲಸ ಮಾಡುವ ಅರಣ್ಯ ಇಲಾಖೆಯಗಳು ವನ್ಯ ಜೀವಿಗಳನ್ನು ಯಾರು ಬೇಟೆಯಾದಂತೆ ಅದರ ರಕ್ಷಣೆ ಮಾಡುವುದು. ಬೇಟೆ ಅಡದಂತೆ ಕಠಿಣ ಕ್ರಮ ಕೈಗೂಳ್ಳುವುದು.ಅರಣ್ಯದ ಮರಗಳನ್ನು ಕಡಿಯದಂತೆ ಕಾನೂನು ಕ್ರಮ ಕೈಗೂಳ್ಳುವುದು.ವನ್ಯ ಜೀವಿ ಸಂರಕ್ಷಣ ಬಗ್ಗೆ ಪುಸ್ತಕದ ಮೂಲಕ ಮಾಹಿತಿ ನೀಡುವುದು.ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುವುದು. ಪ್ರಾಣಿ ಸಂಗ್ರಾಹಲಯಗಳನ್ನು ಕಡಿಮೆ ಮಾಡಬೇಕು ಪ್ರಾಣಿಗಳು ಸ್ವಾತಂತ್ರವಾಗಿ ಇರುವಂತೆ ಜನಜಾಗೃತೆ ಮೂಡಿಸುವುದು. ಕಾಡಿಗೆ ಜನರು ಹೋಗುವುದನ್ನು ನಿರ್ಬಂಧ ಮಾಡುವುದು.ಪ್ರಾಣಿಗಳ ರಕ್ಷಣೆ ಬಗ್ಗೆ ಕಾನೂನು ಸಾರಿಯಾದ ಕ್ರಮ ಕೈಗೊಳ್ಳುವುದು.

ವನ್ಯಜೀವಿಗಳ ಮಹತ್ವ:

ವನ್ಯ ಜೀವಿ ದಿನ ಮಾರ್ಚ 3 ರಂದು ವನ್ಯಜೀವಿ ದಿನವೆಂದು ಕರೆಯುತ್ತಾರೆ. ಪ್ರಕೃತಿಯು ಪ್ರತಿದಿನ ಮನುಷ್ಯನಿಂದ ದೊಡ್ಡ ಮತ್ತು ಋಣ್ಮಾಕ ಪ್ರಭಾವವನ್ನು ಅನುಭವಿಸುತ್ತದೆ. ಇದರ ಫಲಿತಾಂಶವೇ ಪ್ರಾಣಿ ಮತ್ತು ಸಸ್ಯ ಪ್ರಭೇದಗಳನ್ನು ಸಂಪೂರ್ಣ ಅಳಸುವುದು. ಅದರೆ ವನ್ಯ ಜೀವಿಗಳು ಕಾಡಿನಲ್ಲಿ ಇರುವುದರಿಂದ ಕಾಡಿನ ನಾಶ ಕಡಿಮೆ ಅಗುತ್ತದೆ. ಪರಿಸರ ಸಂರಕ್ಷಣೆ ಅಗುತ್ತದೆ. ವನ್ಯ ಜೀವಿಗಳು ವಾಸವಿರುವ ಕಾಡುಗಳು ಸಮೃದ್ದಿಯಿಂದ ಬೆಳೆಯುತ್ತದೆ. ವನ್ಯ ಜೀವಿಗಳ ವಾಸವಾಗುವುದು ಬೃಹತ್‌ ಕಾಡುಗಳಲ್ಲಿ, ಕಾಡು ರಕ್ಷಣೆಗೆ ವನ್ಯಜೀವಿಗಳು ಬಹಳ ಮಹತ್ವದ ಪಾತ್ರವಹಿಸಿದೆ.

ವನ್ಯ ಜೀವಿಗಳು ಕರ್ನಾಟಕ ರಾಜ್ಯವು ಸಂರಕ್ಷಿಸಬೇಕಾದ ಮತ್ತು ನಿರ್ವಹಿಸಬೇಕಾದ ಅಪಾರ ಮತ್ತು ಅಮೂಲ್ಯವಾದ ವನ್ಯ ಜೀವಿಗಳನ್ನು ಹೊಂದಿದೆ.ಕರ್ನಾಟಕವು ಸುಂದರವಾದ ಕಾಡುಗಳಿಂದ ಸಮೃದ್ಧವಾಗಿದೆ. ಅಲ್ಲಿ ಅಪರೂಪದ ಪ್ರಾಣಿಗಳನ್ನು ಕಾಣಬಹುದು. ಹಲಾವಾರು ವಿಧದ ಪಕ್ಷಿಗಳನ್ನು ನಾವು ಕಾಣಬಹುದು. ಹಾಗೆ ವಿವಿಧ ರೀತಿಯ ಸಸ್ಯಗಳನ್ನು ಕಾಣಬಹುದು. ವನ್ಯ ಜೀವಿಗಳನ್ನು ಹಿಡಿದು ತಂದು ಅವುಗಳಿಗೆ ಮಾನುಷ್ಯರ ಚಟುವಟಿಕೆಗಳನ್ನು ಕಲಿಸುವುದು ಇದರಿಂದ ಅರ್ಥಿಕ ಲಾಭಗಳು ಹೆಚ್ಚಾಗುತ್ತದೆ. ವನ್ಯ ಜೀವಿ ಸ್ಥಳಗಳನ್ನು ನಿರ್ಮಿಸಿದ್ದಾರೆ. ಪರಿಸರದಲ್ಲೆ ವನ್ಯ ಜೀವಿಗಳ ಸುಂದರ ಜೀವನ ರೂಪುಗೊಳ್ಳುತ್ತದೆ.

ವನ್ಯ ಜೀವಿಗಳ ಸಮಸ್ಯೆ:

ಮನುಷ್ಯನಿಂದಲೇ ಪ್ರಾಣಿಗಳಿಗೆ ಸಮಸ್ಯೆಗಳು ಹೆಚ್ಚಾಗುತ್ತಿದೆ. ಪ್ರತಿ ವರ್ಷ ಹಲವಾರು ಪ್ರಾಣಿಗಳನ್ನು ಕಳೆದುಕೊಳ್ಳುತ್ತೆವೆ. ಪ್ರಕೃತಿ ಅಂದರೆ ಪರಿಸರ, ಈ ಪರಿಸರದಲ್ಲಿ ಪ್ರಾಣಿ ಮತ್ತು ಪಕ್ಷಿಗಳು ಅದರ ಸುಂದರ ಜೀವನ ನೆಡೆಸಲು ಪ್ರಾಣಿಗಳಿಗೆ ಮಾನವ ಸಮೂಹವೇ ಬಿಡುತ್ತಿಲ್ಲ. ಮನುಷ್ಯರು ಸ್ವಾರ್ಥಿಗಳು ಅವರ ಅನುಕುಲಕ್ಕೆ ಪ್ರಾಣಿಗಳನ್ನು ಹಿಡಿದು ಹಿಂಸೆ ನೀಡುತ್ತಾರೆ. ಇದರಿಂದ ಪ್ರಾಣಿ ಮತ್ತು ಸಸ್ಯಗಳು ಸಂಪೂರ್ಣ ಅಳಿಸಿ ಹೋಗುತ್ತದೆ.

ಕಾಡಿನ ಪ್ರಾಣಿಗಳು ಹಲವಾರು ತೊಂದರೆ ಅನುಭವಿಸಬೇಕಾಗುತ್ತದೆ. ಮನುಷ್ಯರ ಅತೀಯಾದ ಬೇಟೆಯಿಂದ ಕಾಡು ಪ್ರಾಣಿಗಳು ನಾಶವಾಗುತ್ತಿದೆ. ಪ್ರಾಣಿಗಳು ಕಾಡಿನಿಂದ ನಾಡಿನ ಕಡೆ ಮುಖ ಮಾಡಿದೆ. ಪ್ರಾಣಿ ಹಿಂಸೆಗಳು ಹೆಚ್ಚಾಗಿವೆ. ಅಭಿವೃದ್ದಿ ಹೆಚ್ಚಿಸಲು ಕಾಡುಗಳ ನಾಶವಾಗುತ್ತ ಹೋಗಿದೆ. ಇತರೆ ಕಾಣಗಳಿಂದ ವನ್ಯ ಜೀವಿಗಳು ಸಮಸ್ಯೆ ಎದಿರಿಸುತ್ತಿದೆ.

ವನ್ಯ ಜೀವಿಗಳ ಪರಿಹಾರ ಕ್ರಮಗಳು:

೧. ಕರ್ನಾಟಕ ರಾಜ್ಯದಲ್ಲಿ ಕಾಡು ಮತ್ತು ವನ್ಯ ಜೀವಿಗಳನ್ನು ಸಂರಕ್ಷಿಸಲು ಕಾನೂನು ಕ್ರಮಗಳನ್ನು ಕೈಗೊಂಡಿದೆ.

೨. ವನ್ಯ ಜೀವಿಗಳಿಗಾಗಿ ಧಾಮಗಳನ್ನು ಮಾಡುವುದು ಹಾಗೆ ಪರಿಸ್ಥಿತಿಗಳನ್ನು ಸುಧಾರಿಸಲು ಕ್ರಮಗಳನ್ನು ಸಹ ತೆಗೆದುಕೊಂಡು ಕಾಡುಗಳ ಸುಂದರ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು. ಸರ್ಕಾರಗಳ ಮೇಲೆ ವಿಶ್ವ ವನ್ಯಜೀವಿ ದಿನ ಪ್ರಭಾವ ಬೀರಿದೆ.

೩.ಪ್ರಾಣಿಗಳನ್ನು ಬೇಟೆ ಮಾಡುವವರಿಗೆ ಕಾನೂನು ಕ್ರಮ ಕೈಗೊಳ್ಳುವುದು.

೪.ಭವಿಷ್ಯದ ಪೀಳಿಗೆಗಾಗಿ ವನ್ಯ ಜೀವಿಯನ್ನು ಸಂರಕ್ಷಿಸಲು ಅನೇಕ ಪ್ರಾಣಿ ಸಂಗ್ರಹಾಲಯಗಳು,ಅಭಯಾರಣ್ಯಗಳು, ಸಂರಕ್ಷಣಾಲಯಗಳು ಕಾಳಜಿ ವಹಿಸುತ್ತಿವೆ…….ಇತರೆ ಕ್ರಮಗಳು

ಉಪಸಂಹಾರ:

ಈ ಮೂಲಕ ತಿಳಿಯುವುದು ಎನೆಂದರೆ ವನ್ಯಜೀವಿಗಳ ರಕ್ಷಣೆಯ ಜೂತೆಗೆ ಮನುಷ್ಯನ ಅರ್ಥಿಕ ಅಭಿವೃದ್ದಿಗಾಗಿ ವನ್ಯಜೀವಿಗಳನ್ನು ಹಿಂಸೆ ಮಾಡುತ್ತಾರೆ ಎಂದು ತಿಳಿಯುತ್ತದೆ. ಪ್ರಾಣಿ-ಪಕ್ಷಿಗಳನ್ನು ರಕ್ಷಣೆ ಮಾಡುವುದರಿಂದ ಪರಿಸರ ರಕ್ಷಣೆಯಾಗುತ್ತದೆ. ಇದರ ಬಗ್ಗೆ ಅರಿವು ಮೂಡಿಸುವುದು ಎಲ್ಲರಿಗೂ ಬಹಳ ಮುಖ್ಯ.

FAQ

ವನ್ಯಜೀವಿಗಳ ಸಂರಕ್ಷಣೆ ಎಂದರೇನು ?

ಬೇಟೆ ಅಡದಂತೆ ಕಠಿಣ ಕ್ರಮ ಕೈಗೂಳ್ಳುವುದು.ಅರಣ್ಯದ ಮರಗಳನ್ನು ಕಡಿಯದಂತೆ ಕಾನೂನು ಕ್ರಮ ಕೈಗೂಳ್ಳುವುದು.ವನ್ಯ ಜೀವಿ ಸಂರಕ್ಷಣ ಬಗ್ಗೆ ಪುಸ್ತಕದ ಮೂಲಕ ಮಾಹಿತಿ ನೀಡುವುದು.ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆ ಮಾಡುವುದು.

ವನ್ಯಜೀವಿ ಸಂರಕ್ಷಣಾ ದಿನ ಯಾವಾಗ ?

ಮಾರ್ಚ 3 ರಂದು.

ವನ್ಯಜೀವಿ ಎಂದರೇನು ?

ಅರಣ್ಯಗಳಲ್ಲಿ ವಾಸ ಮಾಡುವ ಪ್ರಾಣಿಗಳನ್ನು ವನ್ಯಜೀವಿ ಎನ್ನುವರು.

ಇತರೆ ಪ್ರಬಂಧಗಳು

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

ಕನ್ನಡ ಗಾದೆಗಳು ಮತ್ತು ವಿವರಣೆ

ಸ್ವತಂತ್ರ ಭಾರತದ ಸಾಧನೆಗಳು

Leave a Comment