Vyanjanagalu in Kannada, ಕನ್ನಡದಲ್ಲಿ ವ್ಯಂಜನಗಳು, Vyanjanagalu Types in Kannada, Consonants in Kannada, Kannada Varnamale
Vyanjanagalu in Kannada

ಈ ಲೇಖನಿಯಲ್ಲಿ ಸ್ನೇಹಿತರೇ ವ್ಯಂಜನಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ.
ವ್ಯಂಜನಗಳು
ಸ್ವರಗಳ ಸಹಾಯದಿಂದ ಮಾತ್ರ ಉಚ್ಚಾರಮಾಡಲಾಗುವ ಅಕ್ಷರಗಳನ್ನು ಸ್ವರಾಕ್ಷರಗಳು ಎನ್ನುತೇವೆ.
ಎರಡು ಭಾಗಗಳು:
- ವರ್ಗೀಯ ವ್ಯಂಜನಗಳು 25
- ಅವರ್ಗೀಯ ವ್ಯಂಜನಗಳು 9
ವರ್ಗೀಯ ವ್ಯಂಜನಗಳು 25
ಕ್ | ಖ್ | ಗ್ | ಘ್ | ಙ್ |
ಚ್ | ಛ್ | ಜ್ | ಝ್ | ಞ್ |
ಟ್ | ಠ್ | ಡ್ | ಢ್ | ಣ್ |
ತ್ | ಥ್ | ದ | ಧ್ | ನ್ |
ಪ್ | ಫ್ | ಬ್ | ಭ್ | ಮ್ |
ಅವರ್ಗೀಯ ವ್ಯಂಜನಗಳು 9
ಯ್ | ರ್ | ಲ್ | ವ್ | ಶ್ | ಷ್ | ಸ್ | ಹ್ | ಳ್ |
೧. ವರ್ಗೀಯ ವ್ಯಂಜನಗಳು
ವರ್ಗಗಳಾಗಿ ವಿಂಗಡಿಸಬಹುದಾದ ವ್ಯಂಜನಗಳ ಗುಂಪನ್ನು ವರ್ಗೀಯ ವ್ಯಂಜನ ಎನ್ನಬಹುದು. ಇವು 25 ವರ್ಣಗಳಾಗಿವೆ. ಒಂದೊಂದು ಗುಂಪಿನಲ್ಲಿಯೂ ಐದೈದು ವ್ಯಂಜನಗಳಿರುತ್ತವೆ.
(ಕ ವರ್ಗ)=ಕ ಖ ಗ ಘ ಙ
(ಚ ವರ್ಗ)=ಚ ಛ ಜ ಝ ಞ
(ಟ ವರ್ಗ)=ಟ ಠ ಡ ಢ ಣ
(ತ ವರ್ಗ)=ತ ಥ ದ ಧ ನ
(ಪ ವರ್ಗ)=ಪ ಫ ಬ ಭ ಮ
ವರ್ಗೀಯ ವ್ಯಂಜನಗಳಲ್ಲಿ 3 ವಿಧಗಳಿವೆ
- ಅಲ್ಪಪ್ರಾಣ –10
- ಮಹಾಪ್ರಾಣ-10
- ಅನುನಾಸಿಕ-05
ಅಲ್ಪಪ್ರಾಣ :-
ಪ್ರತಿ ವರ್ಗದಲ್ಲಿನ 1 ಮತ್ತು 3 ನೇ ವರ್ಗಗಳು ಕಡಿಮೆ ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಅಲ್ಪಪ್ರಾಣ ಎನ್ನುವರು. ಕ ಚ ಟ ತ ಪ ಗ ಜ ಡ ದ ಪ
ಮಹಾಪ್ರಾಣ:-
ಪ್ರತಿ ವರ್ಗದಲ್ಲಿನ 2 ಮತ್ತು 4 ನೇ ವರ್ಗಗಳು ಹೆಚ್ಚು ಉಸಿರಿನಿಂದ ಉಚ್ಚರಿಸುವ ವ್ಯಂಜನಾಕ್ಷರಗಳಿಗೆ ಮಹಾಪ್ರಾಣ ಎನ್ನುವರು. ಖ ಛ ಠ ಥ ಫ ಘ ಝ ಢ ಧ ಫ
ಅನುನಾಸಿಕಗಳು:-
ಮೂಗಿನ ಸಹಾಯದಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಅನುನಾಸಿಕಗಳು ಎನ್ನುವರು. ಙ ಞ ಣ ನ ಮ
ಅವರ್ಗೀಯ ವ್ಯಂಜನಗಳು
ಅವರ್ಗೀಯ ವ್ಯಂಜನಗಳು ಅಕ್ಷರೋತ್ಪತ್ತಿಯ ದೃಷ್ಟಿಯಿಂದ ಒಂದೇ ಕಡೆ ಸೇರದ ಅಕ್ಷರಗಳು ಅವರ್ಗೀಯ ವ್ಯಂಜನಗಳು ಎನ್ನುವರು.ಯ್, ರ್, ಲ್, ವ್, ಶ್, ಷ್, ಸ್, ಹ್, ಳ್
ಇತರೆ ವಿಷಯಗಳು: