ಎತ್ತಿನಹೊಳೆ ಯೋಜನೆ ಮಾಹಿತಿ | Yettinahole Project in Kannada

ಎತ್ತಿನಹೊಳೆ ಯೋಜನೆ ಮಾಹಿತಿ, Yettinahole Project in Kannada, yettinahole project details in kannada, yettinahole yojane information in kannada

Yettinahole Project in Kannada

 Yettinahole Project in Kannada
ಎತ್ತಿನಹೊಳೆ ಯೋಜನೆ ಮಾಹಿತಿ Yettinahole Project in Kannada

ಈ ಲೇಖನಿಯಲ್ಲಿ ಎತ್ತಿನಹೊಳೆ ಯೋಜನೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.

ಎತ್ತಿನಹೊಳೆ ಯೋಜನೆ ಮಾಹಿತಿ

ಎತ್ತಿನ ಹೊಳೆ ತಿರುವು ಯೋಜನೆಗೆ ನಡು ಅರಣ್ಯದಲ್ಲಿರುವ ಹೊಂಗಡ ಹಳ್ಳ, ಎತ್ತಿನ ಹೊಳೆ, ಕಾಡುಮನೆ ಹೊಳೆ, ಕೇರಿಹೊಳೆಗಳಿಗೆ ಒಟ್ಟು ಎಂಟು ಜಾಗಗಳಲ್ಲಿ ಒಡ್ಡುಗಳನ್ನು ನಿರ್ಮಿಸಲಾಗಿದೆ. ಅಲ್ಲಿಂದ ವಿದ್ಯುತ್ ಚಾಲಿತ ಬೃಹದಾಕಾರದ ಮೋಟರ್‌ಗಳನ್ನು ಅಳವಡಿಸಿ ದೊಡ್ಡಗಾತ್ರದ ಪೈಪ್‌ಗಳ ಮೂಲಕ ನೀರೆತ್ತಿ ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯಲ್ಲಿ ನಿರ್ಮಿಸುವ ವಿಶಾಲವಾದ ವಿತರಣಾ ತೊಟ್ಟಿಗೆ ಬಿಡಲಾಗುವುದು. ಈ ಕಾರ್ಯಕ್ಕೆ ಬೃಹದಾಕಾರದ ಪೈಪ್ ಅಳವಡಿಸಲು ಹಾಗೂ ವಿದ್ಯುತ್ ಸರಬರಾಜಿಗೆ ಅರಣ್ಯದೊಳಗೆ 120 ಅಡಿ ಅಗಲದ ಜಾಗವನ್ನು ತೆರವುಗೊಳಿಸಲಾಗುವುದು. ಇದಕ್ಕೆ ಕನಿಷ್ಠ 60 ಕಿ. ಮೀ ವ್ಯಾಪ್ತಿಯಷ್ಟು ಅರಣ್ಯ ನಾಶ ಮಾಡಿ ಆ ಪ್ರದೇಶವನ್ನು ಸಮಗೊಳಿಸಿ ಭೂಮಿಯ ಒಳಭಾಗದಲ್ಲಿ ಕೊಳವೆಗಳನ್ನು ಹೂಳಲಾಗುವುದು. ಇದರಿಂದ 400 ಎಕರೆಗೂ ಮೀರಿದ ಅರಣ್ಯ ನಾಶವಾಗುವ ಸಾಧ್ಯತೆ ಇದೆ.

ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೂಕು, ತಿಗಳನಹಳ್ಳಿ, ಗ್ಯಾರೇಹಳ್ಳಿ, ಮಲಗೊಂಡನಹಳ್ಳಿ, ಕಂಟಲಗೆರೆ, ಬ್ಯಾಡರಹಳ್ಳಿ, ಜೆ ಸಿ ಪುರ, ಬೈರಗಾನಹಳ್ಳಿ, ತೆರಬೇನಹಳ್ಳಿ, ನಡುವನಹಳ್ಳಿ, ಗೋಡೆಕೆರೆ, ಹಾಲುಗೋಣ ಗ್ರಾಮಗಳ ಕಲಂ ೧೮ ರಂತೆ ಅನುಮೋದನೆಯಾಗಿರುವ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಅಧಿಸೂಚನೆ ವರದಿ

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ, ತಿಪಟೂರು ತಾಲ್ಲೂಕು, ಕೊನೇಹಳ್ಳಿ, ಬಿದರೆಗುಡಿ ಕಾವಲ್, ನಾಗತಿಹಳ್ಳಿ, ಮಾರುಗೊಂಡನಹಳ್ಳಿ, ಬೊಮ್ಮಲಾಪುರ, ತಿಮ್ಮಲಾಪುರ, ಗೆದ್ಲೇಹಳ್ಳಿ, ಅಣ್ಣಾಪುರ, ರಾಮಶೆಟ್ಟಿಹಳ್ಳಿ, ಬೆನ್ನಾಯಕನಹಳ್ಳಿ, ಬೊಮ್ಮೇನಹಳ್ಳಿ, ಕರಡಿ, ನ್ಯಾಕೇನಹಳ್ಳಿ, ಭೈರಾಪುರ, ಮಲ್ಲೇನಹಳ್ಳಿ, ಮದ್ಲೆಹಳ್ಳಿ, ಅರಳಗುಪ್ಪೆ, ಸಿದ್ದನಹಳ್ಳಿ, ಜಕ್ಕನಹಳ್ಳಿ ಗ್ರಾಮಗಳ ಕಲಂ ೧೮ ರಂತೆ ಅನುಮೋದನೆಯಾದ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಅಧಿಸೂಚನೆ

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ, ತುಮಕೂರು ತಾಲ್ಲೂಕು, ಬೆಳ್ಳಾವಿ ಹೋಬಳಿ, ಕುರಿಕೆಂಪನಹಳ್ಳಿ ಗ್ರಾಮದ ಕಲಂ ೧೯(೧) ರ ಅಧಿಸೂಚನೆ

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕು, ಚನ್ನರಾಯನ ದುರ್ಗ ಹೋಬಳಿ, ಬುಕ್ಕಾಪಟ್ಟಣ, ಹನುಮಂತಪುರ, ಬಳೆವೀರನಹಳ್ಳಿ, ಜಂಪೇನಹಳ್ಳಿ, ಮಲ್ಲೇಶಪುರ, ಮತ್ತು ಕಸಬಾ ಹೋಬಳಿ ಕೊರಟಗೆರೆ, ಮುದಳಪನ್ನೇ, ಹಾಗು ಕೊಳಲ ಹೋಬಳಿ ತಿಮ್ಮಸಂದ್ರ, ಕಾಟೇನಹಳ್ಳಿ, ಉಪವಾಸಪುರ, ಯಲಮರಹಳ್ಳಿ ಗ್ರಾಮಗಳ ಕಲಂ ೧೧(೧) ಅಧಿಸೂಚನೆ

ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕು, ಕೊಳಲ ಹೋಬಳಿ, ವಡೇರಹಳ್ಳಿ ಮತ್ತು ಕಾಟೇನಹಳ್ಳಿ ಗ್ರಾಮಗಳು ಕಲಂ 11(1) ಅಧಿಸೂಚನೆಗಳು

ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕು, ಕೊಳಲ ಹೋಬಳಿ, ರಾಯಪುರ, ಚಿನ್ನಹಳ್ಳಿ ಮತ್ತು ಲಕ್ಕಯ್ಯನಪಾಳ್ಯ ಗ್ರಾಮಗಳು ಕಲಂ 11(1)ಅಧಿಸೂಚನೆಗಳು

ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕು, ಕೊಳಲ ಹೋಬಳಿ, ರಂಗಾಪುರ, ಕಾಲುವೆಹಳ್ಳಿ ಮತ್ತು ಕರೆಕಲ್ಲಹಳ್ಳಿ ಗ್ರಾಮಗಳ ಕಲಂ 11(1) ಅಧಿಸೂಚನೆಗಳು

ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕು, ಮೆಡಿಗೇಶಿ ಹೋಬಳಿ, ಮಿಡಿಗೇಶಿ, ನಲ್ಲೇಕಾಮನಹಳ್ಳಿ, ಬೇಡತ್ತೂರು, ಬಿದರೆಕೆರೆ, ಬಿದರೆಕೆರೆ ಕಾವಲ್ ಮತ್ತು ಕ್ಯಾತಗೊಂಡನಹಳ್ಳಿ ಗ್ರಾಮಗಳು ಕಲಂ 11(1)ಅಧಿಸೂಚನೆಗಳು

ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕು, ಕೊಳಲ ಹೋಬಳಿ, ಮರುಗೊಂಡನಗುಣಿ, ಬೇಡರ ಅಗ್ರಹಾರ ಮತ್ತು ವಜ್ಜನಕುರಿಕೆ ಗ್ರಾಮಗಳು ಕಲಂ 11(1) ಅಧಿಸೂಚನೆಗಳು

ಎತ್ತಿನಹೊಳೆ ಯೋಜನೆ ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕು, ಕೊಳಲ ಹೋಬಳಿ, ಕೊಳಲ ಮತ್ತು ಪುರದಹಳ್ಳಿ ಗ್ರಾಮಗಳು ಕಲಂ 11(1) ಅಧಿಸೂಚನೆಗಳು

ಎತ್ತಿನಹೊಳೆ ಯೋಜನೆಯನ್ನು 2023ಕ್ಕೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಆದರೆ ಯೋಜನೆ ಸಾಗುತ್ತಿರುವ ರೀತಿಯನ್ನು ಗಮನಿಸಿದರೆ ಇನ್ನು ಮೂರು ವರ್ಷದಲ್ಲಿ ಯೋಜನೆ ಪೂರ್ಣ ಗೊಳ್ಳುವುದು ಹಗಲುಗನಸು ಎಂಬುದು ಸ್ಪಷ್ಟವಾಗುತ್ತದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೈರಗೊಂಡ್ಲುವಿನಲ್ಲಿ ಜಲಾಶಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಭೂಸ್ವಾಧೀನ ಪ್ರಕ್ರಿಯೆಯೇ ಆರಂಭವಾಗಿಲ್ಲ. ಅದಕ್ಕಿಂತ ಹೆಚ್ಚಾಗಿ ಭೂಸ್ವಾಧೀನಕ್ಕಾಗಿ ರೈತರ ಮನವೊಲಿಕೆ ಕೆಲಸ ಕೂಡ ಯಶಸ್ವಿಯಾಗಿಲ್ಲ. ಹೀಗಿರುವಾಗ ಮೂರು ವರ್ಷಕ್ಕೆ ಯೋಜನೆ ಪೂರ್ಣಗೊಂಡು ಬರಪೀಡಿತ ಜಿಲ್ಲೆಗಳ ಬಾಯಾರಿಕೆ ದೂರವಾಗುತ್ತದೆ ಎಂಬುದು ಕಲ್ಪನೆಗೂ ನಿಲುಕದ್ದು. ಪಶ್ವಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಹಾಗೂ ಹೊಂಗಡಹಳ್ಳಗಳಿಂದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜತೆಗೆ ಮಾರ್ಗದಲ್ಲಿ ಬರುವ ತುಮಕೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಮಹತ್ವದ ಯೋಜನೆ ಎತ್ತಿನಹೊಳೆ. 

ಯೋಜನೆಯ ಮೂಲ ಉದ್ದೇಶ

ನೇತ್ರಾವತಿ ಹಾಗೂ ಕುಮಾರಧಾರ ನದಿಗಳಿಗೆ ನೀರೊದಗಿಸುವ ಐದು ಹಳ್ಳಗಳ ನೀರನ್ನು ಬಯಲುನಾಡಿನ ಕಡೆಗೆ ಹರಿಯಿಸುವ ಯೋಜನೆ ಇದು. ನೇತ್ರಾವತಿ, ಕುಮಾರಧಾರಾ ತಿರುವು ಯೋಜನೆ ಇದಲ್ಲ. ಏಕೆಂದರೆ ವಾರ್ಷಿಕ ಸರಾಸರಿ ನೇತ್ರಾವತಿಯಲ್ಲಿ 548 ಟಿಎಂಸಿ ಅಡಿ ಹಾಗೂ ಕುಮಾರಧಾರಾದಲ್ಲಿ 220 ಟಿಎಂಸಿ ಅಡಿ ನೀರಿನ ಹರಿವು ಇದೆ. ಈ ಪೈಕಿ ಎತ್ತಿನ ಹೊಳೆಗೆ ಬಳಕೆಯಾಗುತ್ತಿರುವುದು 24.01 ಟಿಎಂಸಿ ಅಡಿ ಮಾತ್ರ. ಅಂದರೆ 768 ಟಿಎಂಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಎತ್ತಿನಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹಳ್ಳ, ಕೇರಿಹೊಳೆ, ಕಾಡುಮನೆ ಹೊಳೆ–1,2 ಹಾಗೂ ಎತ್ತಿನ ಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುತ್ತದೆ. ಜಲಾನಯನ ಪ್ರದೇಶದಲ್ಲಿ ಲಭ್ಯವಾಗುವ 34.26 ಟಿಎಂಸಿ ಅಡಿ ನೀರಿನ ಪೈಕಿ 24.01 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತದೆ.

ಹೊಳೆಗಳ ಹರಿವಿನ ಮಧ್ಯೆ ಕಿರು ಕಟ್ಟೆ ಕಟ್ಟಿ ಸುಮಾರು 940 ಅಡಿ ಎತ್ತರಕ್ಕೆ ಪಂಪ್‌ ಮಾಡಿ ನೀರು ಹರಿಸಲಾಗು ತ್ತದೆ. ಸಕಲೇಶಪುರ ತಾಲ್ಲೂಕಿನಿಂದ ಕೋಲಾರದ ಶ್ರೀನಿವಾಸಪುರದವರೆಗೆ ನಾನಾ ಹಂತಗಳಲ್ಲಿ ಯೋಜನೆ ಅನುಷ್ಠಾನ ವಾಗಬೇಕು. 260 ಕಿ.ಮೀ ಉದ್ದ ತೆರೆದ ಕಾಲುವೆ ಹಾಗೂ ಪೈಪ್‌ಲೈನ್ ಮೂಲಕ ನೀರು ಹರಿಯುತ್ತದೆ. ಕಾಲುವೆಯ ಮಾರ್ಗದುದ್ದಕ್ಕೂ ಬರುವ ತಾಲ್ಲೂಕುಗಳ ಕೆರೆ ತುಂಬಿಸುವುದು ಯೋಜನೆಯ ರೂಪುರೇಷೆ.

ಒಮ್ಮೆ ಏತನೀರಾವರಿ ಮೂಲಕ ನೀರೆತ್ತಿ ನಾಲೆಗೆ ಹರಿಸಿದರೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನಲ್ಲಿ ನಿರ್ಮಾಣವಾಗಲಿರುವ ಬೈರಗೊಂಡ್ಲು ಜಲಾಶಯದವರೆಗೆ ನೀರು ಗುರುತ್ವಾಕರ್ಷಣೆ ಬಲದ ಮೇಲೆ ಹರಿಯಲಿದೆ. ಕುಂದಣ ಎಂಬಲ್ಲಿ 70–80 ಮೀಟರ್ ನೀರನ್ನು ಮತ್ತೆ ಪಂಪ್‌ ಮೂಲಕ ಮೇಲೆತ್ತಿ ಚಿಕ್ಕಬಳ್ಳಾಪುರ–ಕೋಲಾರ ಜಿಲ್ಲೆಗೆ ಹರಿಸಲಾಗುತ್ತದೆ. ಬೈರಗೊಂಡ್ಲುವಿನವರೆಗೆ ಕಾಮಗಾರಿ ಅಂತಿಮಗೊಂಡಿದ್ದು, ಜಲಾಶಯ ಕಾಮಗಾರಿ ಗುತ್ತಿಗೆ ನೀಡಬೇಕಿದೆ. ಕೋಲಾರ–ಚಿಕ್ಕಬಳ್ಳಾಪುರ ನಾಲೆ ಮತ್ತು ಫೀಡರ್ ಕಾಲುವೆಗಳ ಅಂದಾಜು ಪ್ರಕ್ರಿಯೆ ಸದ್ಯ ನಡೆಯುತ್ತಿದೆ.

ಇತರೆ ಪ್ರಬಂಧಗಳು:

ಗಂಗಾ ಕಲ್ಯಾಣ ಯೋಜನೆ ಮಾಹಿತಿ

ಸುಕನ್ಯಾ ಸಮೃದ್ಧಿ ಯೋಜನೆ ಮಾಹಿತಿ 

ಬಸವ ವಸತಿ ಯೋಜನೆ ಮಾಹಿತಿ 2022

Leave a Comment