Karnataka Land Records Online – Bhoomi Aakaraband Pahani Download | ನಿಮ್ಮ ಜಮೀನಿನ ಪಹಣಿ ಮತ್ತು ಆಕಾರಬಂದ್ ಮೊಬೈಲ್‌ನಲ್ಲಿ! ಡೌನ್‌ಲೋಡ್ ಮಾಡುವುದು ಹೇಗೆ?
ನಮಸ್ಕಾರ ಕರ್ನಾಟಕ,
ನಿಮ್ಮ ಜಮೀನಿನ ಅಸಲಿ ವಾರಸುದಾರರು ಯಾರು? ಜಮೀನಿನ ವಿಸ್ತೀರ್ಣ ಎಷ್ಟಿದೆ? ಸರ್ವೆ ನಂಬರ್ ಸರಿಯಾಗಿದೆಯೇ? ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಮುಖ ದಾಖಲೆಗಳೆಂದರೆ ಪಹಣಿ (RTC) ಮತ್ತು ಆಕಾರಬಂದ್. ಹಿಂದೆಲ್ಲಾ ಈ ದಾಖಲೆಗಳಿಗಾಗಿ ತಹಶೀಲ್ದಾರ್ ಕಚೇರಿ ಅಥವಾ ನಾಡಕಚೇರಿಗೆ ಅಲೆದಾಡಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ. ನಿಮ್ಮ ಕೈಯಲ್ಲಿರುವ ಮೊಬೈಲ್ ಮೂಲಕವೇ ಕೇವಲ ಎರಡೇ ನಿಮಿಷದಲ್ಲಿ ಈ ಎಲ್ಲಾ ದಾಖಲೆಗಳನ್ನು ನೀವು ಪಡೆಯಬಹುದು.

ಏನಿದು ‘ಆಕಾರಬಂದ್’?
ಅನೇಕರಿಗೆ ಪಹಣಿ (RTC) ಬಗ್ಗೆ ತಿಳಿದಿರುತ್ತದೆ, ಆದರೆ ‘ಆಕಾರಬಂದ್’ ಬಗ್ಗೆ ಅಷ್ಟಾಗಿ ಗೊತ್ತಿರುವುದಿಲ್ಲ. ಆಕಾರಬಂದ್ ಎನ್ನುವುದು ನಿಮ್ಮ ಜಮೀನಿನ ಮೂಲ ದಾಖಲೆ. ಇದರಲ್ಲಿ ಜಮೀನಿನ ಒಟ್ಟು ವಿಸ್ತೀರ್ಣ, ಖರಾಬು ಜಮೀನು ಎಷ್ಟು, ಜಮೀನಿನ ಮೇಲಿನ ಸಿಸ್ಟ್ (ಕಂದಾಯ) ಎಷ್ಟು ಎಂಬ ಸಂಪೂರ್ಣ ವಿವರವಿರುತ್ತದೆ. ಜಮೀನು ಖರೀದಿ ಮಾಡುವಾಗ ಅಥವಾ ಲೋನ್ ಪಡೆಯುವಾಗ ಇದು ಅತ್ಯಗತ್ಯ.
ಆನ್‌ಲೈನ್‌ನಲ್ಲಿ ಪಹಣಿ ಮತ್ತು ಆಕಾರಬಂದ್ ಪಡೆಯುವುದು ಹೇಗೆ?
ನೀವು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ದಾಖಲೆಗಳನ್ನು ಪಡೆಯಬಹುದು:
- ಭೂಮಿ ವೆಬ್‌ಸೈಟ್‌ಗೆ ಭೇಟಿ ನೀಡಿ: ಮೊದಲು ಕರ್ನಾಟಕ ಸರ್ಕಾರದ ಅಧಿಕೃತ https://bhoomojini.karnataka.gov.in/service39/ ಪೋರ್ಟಲ್‌ಗೆ ಹೋಗಿ.

- ಸೇವೆಗಳನ್ನು ಆಯ್ಕೆ ಮಾಡಿ: ಮುಖಪುಟದಲ್ಲಿ ‘Services’ ವಿಭಾಗದಲ್ಲಿ ‘View RTC and MR’ ಅಥವಾ ‘Aakaraband’ ಮೇಲೆ ಕ್ಲಿಕ್ ಮಾಡಿ.
- ವಿವರಗಳನ್ನು ಭರ್ತಿ ಮಾಡಿ: ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ನಂಬರ್ ಅನ್ನು ನಮೂದಿಸಿ.
- ದಾಖಲೆ ವೀಕ್ಷಿಸಿ: ಎಲ್ಲಾ ವಿವರಗಳನ್ನು ನೀಡಿದ ನಂತರ ‘Fetch Details’ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ದಾಖಲೆ ಪರದೆಯ ಮೇಲೆ ಕಾಣಿಸುತ್ತದೆ.
- ಡೌನ್‌ಲೋಡ್: ನೀವು ಇದನ್ನು ಪಿಡಿಎಫ್ ರೂಪದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಪ್ರಿಂಟ್ ತೆಗೆದುಕೊಳ್ಳಬಹುದು.
ಪ್ರಮುಖ ಲಿಂಕ್‌ಗಳು:
| ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಮಾಹಿತಿಗಾಗಿ | Click Here |
| ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
| ಪಹಣಿ ಮತ್ತು ಆಕಾರಬಂದ್ | Click Here |
ಇದರಿಂದ ಆಗುವ ಪ್ರಯೋಜನಗಳೇನು?
- ವಂಚನೆಗೆ ಬ್ರೇಕ್: ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ.
- ಸಮಯ ಉಳಿತಾಯ: ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ.
- ನಿಖರ ಮಾಹಿತಿ: ಸರ್ಕಾರಿ ದಾಖಲೆಗಳಲ್ಲಿರುವ ಅಸಲಿ ಮಾಹಿತಿಯನ್ನು ನೇರವಾಗಿ ನೀವೇ ನೋಡಬಹುದು.
ನಿಮ್ಮ ಜಮೀನಿನ ದಾಖಲೆಗಳನ್ನು ಇಂದೇ ಪರಿಶೀಲಿಸಿಕೊಳ್ಳಿ ಮತ್ತು ಯಾವುದೇ ಗೊಂದಲಗಳಿದ್ದರೆ ತಕ್ಷಣ ಸರಿಪಡಿಸಿಕೊಳ್ಳಿ. ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ರೈತ ಮಿತ್ರರಿಗೂ ಶೇರ್ ಮಾಡಿ.