ಗ್ಯಾಸ್ ಸಬ್ಸಿಡಿ ಪಡೆಯುವವರ ಗಮನಕ್ಕೆ! ಜೂನ್ 30ರೊಳಗೆ e-KYC ಕಡ್ಡಾಯ?

ನಿಮ್ಮ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಹಣ ಬರುವುದು ನಿಂತು ಹೋಗಬಹುದೇ? ಇದು ನಿಜವೇ? ಲಕ್ಷಾಂತರ ಜನರಲ್ಲಿ ಇಂತಹ ಆತಂಕ ಮೂಡಿದೆ. ಗ್ಯಾಸ್ e-KYC ಎಂದರೇನು? ಇದನ್ನು ಏಕೆ ಮಾಡಬೇಕು? ಹೇಗೆ ಮಾಡಬಹುದು? ಇತ್ಯಾದಿ ಪ್ರಶ್ನೆಗಳು ಹೆಚ್ಚಾಗಿವೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ಯಾಸ್ ಸಬ್ಸಿಡಿ ಪಡೆಯುತ್ತಿರುವವರಿಗೆ e-KYC ಪ್ರಕ್ರಿಯೆ ಕಡ್ಡಾಯ ಮಾಡಲಾಗಿದೆ ಎಂಬ ವದಂತಿಗಳು ಇತ್ತೀಚೆಗೆ ಹರಿದಾಡುತ್ತಿವೆ. ಇದರಿಂದಾಗಿ ಅನೇಕ ಗ್ರಾಹಕರು ಈ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ಆದರೆ, ಈ ಬಗ್ಗೆ ಗಾಬರಿಯಾಗುವ ಅಗತ್ಯವಿಲ್ಲ. ಸರ್ಕಾರದ ನಿಯಮದಂತೆ, ಇ-ಕೆವೈಸಿ ಮಾಡಿಸಿಕೊಳ್ಳುವುದು ಅಗತ್ಯವಾದರೂ, ಇದಕ್ಕೆ ಯಾವುದೇ ನಿಗದಿತ ಕೊನೆಯ ದಿನಾಂಕ ಇರುವುದಿಲ್ಲ. ಅಂದರೆ, ಜೂನ್ 30ರೊಳಗೆ ಇ-ಕೆವೈಸಿ ಮಾಡಿಸಿಕೊಳ್ಳಲೇಬೇಕು ಎಂಬುದು ಕಡ್ಡಾಯವಲ್ಲ. ಆದರೆ, ಇದನ್ನು ಮಾಡಿಸಿಕೊಳ್ಳುವುದು ನಿಮ್ಮದೇ ಒಳಿತಿಗಾಗಿ ಎಂಬುದು ಸತ್ಯ.

e-KYC ಎಂದರೇನು?

e-KYC ಎಂದರೆ ‘Know Your Customer’ ಅಥವಾ ಗ್ರಾಹಕರ ಗುರುತು ಪರಿಶೀಲನೆ ಪ್ರಕ್ರಿಯೆ. ಈ ವ್ಯವಸ್ಥೆಯಲ್ಲಿ ಗ್ರಾಹಕರ ಆಧಾರ್ ವಿವರ, ಮೊಬೈಲ್ ಸಂಖ್ಯೆ ಹಾಗೂ ವೈಯಕ್ತಿಕ ಮಾಹಿತಿಯನ್ನು ಡಿಜಿಟಲ್ ಮೂಲಕ ದೃಢೀಕರಿಸಲಾಗುತ್ತದೆ. ಬಯೋಮೆಟ್ರಿಕ್ ಪರಿಶೀಲನೆ, OTP ಅಥವಾ ಫೇಸ್ ಆಥೆಂಟಿಕೇಶನ್ ಮೂಲಕ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಇದನ್ನು ಏಕೆ ಮಾಡಬೇಕು?

  • ನಕಲಿ ಸಂಪರ್ಕಗಳನ್ನು ತಡೆಯಲು: ಕೆಲವು ಕಡೆಗಳಲ್ಲಿ ಒಂದೇ ವ್ಯಕ್ತಿಯ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಗ್ಯಾಸ್ ಸಂಪರ್ಕಗಳು ಇರುವ ಪ್ರಕರಣಗಳು ಪತ್ತೆಯಾಗಿವೆ. e-KYC ಮೂಲಕ ಇಂತಹ ನಕಲಿ ಸಂಪರ್ಕಗಳನ್ನು ಪತ್ತೆಹಚ್ಚಿ ರದ್ದುಪಡಿಸಬಹುದು.
  • ಸಬ್ಸಿಡಿ ಪಡೆಯಲು: ನಿಮ್ಮ ಆಧಾರ್ ಮತ್ತು ಗ್ಯಾಸ್ ಸಂಪರ್ಕ ವಿವರಗಳನ್ನು e-KYC ಮೂಲಕ ಲಿಂಕ್ ಮಾಡುವುದರಿಂದ ನೀವು ಸಬ್ಸಿಡಿ ಪಡೆಯುವಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
  • ಸಬ್ಸಿಡಿ ಹಣವನ್ನು ನೈಜ ಗ್ರಾಹಕರಿಗೆ ತಲುಪಿಸಲು: ಸರ್ಕಾರದ ಮುಖ್ಯ ಉದ್ದೇಶ ನೈಜ ಗ್ರಾಹಕರಿಗೆ ಮಾತ್ರ ಸಬ್ಸಿಡಿ ತಲುಪಿಸುವುದಾಗಿದೆ. e-KYC ಮೂಲಕ ಈ ಉದ್ದೇಶವನ್ನು ಸಾಧಿಸಬಹುದು.

e-KYC ಮಾಡಿಸಿಕೊಳ್ಳುವುದು ಹೇಗೆ?

  1. ಗ್ಯಾಸ್ ಏಜೆನ್ಸಿ ಮೂಲಕ: ಇದು ಅತ್ಯಂತ ಸರಳ ವಿಧಾನವಾಗಿದೆ. ನಿಮ್ಮ ಗ್ಯಾಸ್ ಏಜೆನ್ಸಿಗೆ ಭೇಟಿ ನೀಡಿ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪುಸ್ತಕವನ್ನು ಕೊಂಡೊಯ್ಯಿ. ಅಲ್ಲಿ ಬಯೋಮೆಟ್ರಿಕ್ ಮೂಲಕ ಪರಿಶೀಲನೆ ಮಾಡಿಸಿ e-KYC ಪ್ರಕ್ರಿಯೆ ಪೂರ್ಣಗೊಳಿಸಿ. ಕೆಲವೇ ನಿಮಿಷಗಳಲ್ಲಿ ಈ ಪ್ರಕ್ರಿಯೆ ಮುಗಿಯುತ್ತದೆ.
  2. ಮೊಬೈಲ್ ಮೂಲಕ: ಈ ಪ್ರಕ್ರಿಯೆಯನ್ನು ಸಮಯಕ್ಕೆ ಪೂರ್ಣಗೊಳಿಸಿದರೆ ಭವಿಷ್ಯದಲ್ಲಿ ಸಬ್ಸಿಡಿ ಪಡೆಯಲು ಯಾವುದೇ ತೊಂದರೆ ಎದುರಾಗುವುದಿಲ್ಲ. ನಿಮ್ಮ ಸಂಬಂಧಿತ ಗ್ಯಾಸ್ ಕಂಪನಿಯ ಅಧಿಕೃತ ಆಪ್ ಡೌನ್‌ಲೋಡ್ ಮಾಡಿ ಮತ್ತು ಲಾಗಿನ್ ಆಗಿ. ನಂತರ ‘Re-eKYC’ ಆಯ್ಕೆಯನ್ನು ಆರಿಸಿ ಮತ್ತು OTP ಅಥವಾ Face Authentication ಮೂಲಕ ಪರಿಶೀಲನೆ ಪೂರ್ಣಗೊಳಿಸಿ. ಇದರಿಂದ ಏಜೆನ್ಸಿಗೆ ಭೇಟಿ ನೀಡುವ ಅಗತ್ಯವಿಲ್ಲ.
  3. ನಿಮ್ಮ e-KYC ಸ್ಟೇಟಸ್ ಚೆಕ್ ಮಾಡುವುದು ಹೇಗೆ? ನೀವು ಈಗಾಗಲೇ e-KYC ಮಾಡಿಸಿದ್ದರೆ, ಅದನ್ನು ನೀವು ಗ್ಯಾಸ್ ಸೇವೆಗಳ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡುವ ಮೂಲಕ ಪರಿಶೀಲಿಸಬಹುದು. LPG ID ನಮೂದಿಸಿ ಮತ್ತು ಲಾಗಿನ್ ಆಗಿ. ನಂತರ ‘KYC Status’ ಪರಿಶೀಲಿಸಿ. ಒಮ್ಮೆ e-KYC ಪೂರ್ಣಗೊಂಡಿದ್ದರೆ ಮತ್ತೆ ಮಾಡುವ ಅಗತ್ಯ ಇರುವುದಿಲ್ಲ.

ಇದನ್ನು ಇನ್ನು ಕೊನೆಯ ದಿನದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ನಿಮ್ಮ ಗ್ಯಾಸ್ ಸಂಪರ್ಕದ ಮಾಹಿತಿ ಪರಿಶೀಲಿಸಿಕೊಳ್ಳುವುದು ಉತ್ತಮ. ಕೊನೆಯ ಕ್ಷಣದಲ್ಲಿ ಏಜೆನ್ಸಿಗಳಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಪ್ರಕ್ರಿಯೆ ಪೂರ್ಣಗೊಳಿಸುವುದು ಅನುಕೂಲಕರ. ಇದರಿಂದ ಆಧಾರ್, ಮೊಬೈಲ್ ಸಂಖ್ಯೆ ಮತ್ತು ಗ್ಯಾಸ್ ಸಂಪರ್ಕದ ವಿವರಗಳು ಸರಿಯಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

Leave a Comment