SSJKT : ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ! ಡಾ. ಶಾಮನೂರು ಶಿವಶಂಕರಪ್ಪ ಟ್ರಸ್ಟ್‌ನಿಂದ ಆರ್ಥಿಕ ನೆರವು

ನೀವು ಕರ್ನಾಟಕದ ನಿವಾಸಿಯಾಗಿದ್ದು, ಓದಿನಲ್ಲಿ ಸಖತ್ ಮುಂದು ಆscore ಮಾಡಿದ್ದೀರಾ? ಆದರೆ ಮುಂದಿನ ಓದಿಗೆ ಹಣಕಾಸಿನ ತೊಂದರೆ ಎದುರಾಗುತ್ತಿದೆಯೇ? ಹಾಗಿದ್ದರೆ ನಿಮಗೊಂದು ಸೂಪರ್ ಗುಡ್ ನ್ಯೂಸ್!

ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಡಾ. ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ (SSJKT) 2026ರ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಪಿಯುಸಿಯಿಂದ ಹಿಡಿದು ಪೋಸ್ಟ್ ಗ್ರ್ಯಾಜುಯೇಷನ್ ವರೆಗಿನ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ನೇರ ಹಣಕಾಸಿನ ನೆರವು ಸಿಗಲಿದೆ.

shamanur shivashankarappa scholarship apply online 2026

ಇದಕ್ಕೆ ಯಾರೆಲ್ಲಾ ಅರ್ಹರು? ಎಷ್ಟು ಅಂಕ ಇರಬೇಕು? ಅರ್ಜಿ ಸಲ್ಲಿಸುವುದು ಹೇಗೆ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ, ಕೊನೆವರೆಗೂ ಓದಿ!

ಯಾವೆಲ್ಲಾ ಕೋರ್ಸ್‌ಗಳಿಗೆ ಈ ಸ್ಕಾಲರ್‌ಶಿಪ್ ಸಿಗುತ್ತೆ?

ಈ ಕೆಳಗಿನ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:

  • ಪಿಯುಸಿ (PUC) & ಡಿಪ್ಲೊಮಾ
  • ವೈದ್ಯಕೀಯ: MBBS, BDS
  • ಇಂಜಿನಿಯರಿಂಗ್ & ಟೆಕ್ನಾಲಜಿ: B.E.
  • ಪದವಿ (Undergraduate): B.Sc., B.Com., B.A., BCA, BBM/BBA
  • ವೃತ್ತಿಪರ ಕೋರ್ಸ್‌ಗಳು: BVSc (ವೆಟರಿನರಿ), B.Pharma., B.Ed., CA (ಚಾರ್ಟರ್ಡ್ ಅಕೌಂಟೆಂಟ್)
  • ಸ್ನಾತಕೋತ್ತರ ಪದವಿ (Postgraduate): M.Sc., M.A., M.Com.ಅರ್ಹತೆಗಳೇನು? (ನಿಮ್ಮ ಅಂಕ ಎಷ್ಟಿರಬೇಕು?)

ವಿದ್ಯಾರ್ಥಿಗಳು ಕಡ್ಡಾಯವಾಗಿ ಕರ್ನಾಟಕದ ನಿವಾಸಿಯಾಗಿರಬೇಕು ಹಾಗೂ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರಬೇಕು. ಕೋರ್ಸ್‌ಗಳಿಗೆ ತಕ್ಕಂತೆ ನಿಗದಿಪಡಿಸಲಾದ ಕಟ್‌-ಆಫ್ ಅಂಕಗಳು ಹೀಗಿವೆ:

ಕೋರ್ಸ್‌ಗಳುಕನಿಷ್ಠ ಅಂಕಗಳು (Cut Off)ಉದಾಹರಣೆ
PUC, MBBS95% ಕ್ಕಿಂತ ಹೆಚ್ಚುPUC ಸೇರಬೇಕಿದ್ದರೆ 10ನೇ ತರಗತಿಯಲ್ಲಿ 95% ಇರಬೇಕು.
Diploma, B.Sc., B.Com., B.E., B.VSc.90% ಕ್ಕಿಂತ ಹೆಚ್ಚುB.E. ಸೇರಬೇಕಿದ್ದರೆ ಪಿಯುಸಿಯಲ್ಲಿ 90% ದಾಟಿರಬೇಕು.
BCA, BBM/BBA, B.A., BDS, B.Pharma, M.Sc., MA, M.Com., B.Ed., C.A.85% ಕ್ಕಿಂತ ಹೆಚ್ಚುBCA ಸೇರಬೇಕಿದ್ದರೆ ಪಿಯುಸಿಯಲ್ಲಿ 85% ದಾಟಿರಬೇಕು.

ಮುಖ್ಯ ಗಮನ: ಕುಟುಂಬದ ವಾರ್ಷಿಕ ಆದಾಯ ₹1,00,000 (ಒಂದು ಲಕ್ಷ ರೂಪಾಯಿ) ಮೀರಿರಬಾರದು.

ಏನೆಲ್ಲಾ ದಾಖಲೆಗಳು ಬೇಕು? (Documents Required)

ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ರೆಡಿ ಮಾಡಿಕೊಳ್ಳಿ:

  1. ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
  2. ಪೋಷಕರ/ಪಾಲಕರ ಸಹಿ.
  3. ಕಾಲೇಜಿನ ಪ್ರಾಂಶುಪಾಲರು (Principal)/HOD/ನಿರ್ದೇಶಕರ ಸಹಿ ಮತ್ತು ಸಂಸ್ಥೆಯ ಅಧಿಕೃತ ಮುದ್ರೆ (Seal).
  4. ವಿದ್ಯಾರ್ಥಿಯ ಬ್ಯಾಂಕ್ ಪಾಸ್‌ಬುಕ್ ನಕಲು (Bank Passbook).

ಅರ್ಜಿ ಸಲ್ಲಿಸುವ ಸುಲಭ ಹಂತಗಳು (How to Apply?)

ಈ ವಿದ್ಯಾರ್ಥಿವೇತನಕ್ಕೆ ಕೇವಲ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಪೋಸ್ಟ್ ಅಥವಾ ಕೊರಿಯರ್ ಮೂಲಕ ಕಳುಹಿಸಿದರೆ ರಿಜೆಕ್ಟ್ ಆಗುತ್ತದೆ!

  • ಹಂತ 1: ಅಧಿಕೃತ ವೆಬ್‌ಸೈಟ್‌ ಲಿಂಕ್ ಕ್ಲಿಕ್ ಮಾಡಿ ‘Apply Now’ ಮೇಲೆ ಒತ್ತಿ.
  • ಹಂತ 2: ‘Register’ ಬಟನ್ ಕ್ಲಿಕ್ ಮಾಡಿ, ಜಿಮೇಲ್/ಮೊಬೈಲ್ ನಂಬರ್ ಬಳಸಿ ಲಾಗಿನ್ ಆಗಿ.
  • ಹಂತ 3: ‘Click here to Apply’ ಆಪ್ಷನ್ ಆರಿಸಿ.
  • ಹಂತ 4: ‘New User’ ಕ್ರಿಯೇಟ್ ಮಾಡಿ ನಿಮ್ಮ ಸಂಪೂರ್ಣ ಮಾಹಿತಿ ಭರ್ತಿ ಮಾಡಿ.
  • ಹಂತ 5: ಆನ್‌ಲೈನ್ ಅರ್ಜಿಯನ್ನು ಪ್ರಿಂಟ್ ತೆಗೆದುಕೊಂಡು, ಅದಕ್ಕೆ ಫೋಟೋ ಹಚ್ಚಿ, ಪೋಷಕರು ಹಾಗೂ ಪ್ರಾಂಶುಪಾಲರ ಸಹಿ ಮತ್ತು ಸೀಲ್ ಹಾಕಿಸಿ.
  • ಹಂತ 6: ಆ ಫಾರ್ಮ್ ಅನ್ನು ಸ್ಕ್ಯಾನ್ ಮಾಡಿ, ಬ್ಯಾಂಕ್ ಪಾಸ್‌ಬುಕ್ ಜೊತೆ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ ಸಬ್ಮಿಟ್ ಕೊಡಿ. (ಎಲ್ಲಾ ಡಾಕ್ಯುಮೆಂಟ್ ಅಪ್‌ಲೋಡ್ ಆದ ಮೇಲಷ್ಟೇ ಸ್ಟೇಟಸ್ ‘Submitted’ ಅಂತ ತೋರಿಸುತ್ತದೆ).

ನೆನಪಿರಲಿ ಈ ಪ್ರಮುಖ ನಿಯಮಗಳು!

  • ಕೊನೆಯ ದಿನಾಂಕ: 15 ಜುಲೈ 2026
  • ಅಸ್ಪಷ್ಟ ದಾಖಲೆಗಳು ಅಥವಾ ಅಪೂರ್ಣ ಅರ್ಜಿಯಿದ್ದರೆ ತಕ್ಷಣ ತಿರಸ್ಕರಿಸಲಾಗುವುದು.
  • ಬ್ಯಾಂಕ್ ಅಕೌಂಟ್ ನಂಬರ್ ತಪ್ಪು ನೀಡಿದರೆ, ಹಣ ಬರದಿದ್ದರೆ ಟ್ರಸ್ಟ್ ಹೊಣೆಯಲ್ಲ.
  • ಯಾವುದೇ ಪ್ರಶ್ನೆಗಳಿದ್ದಲ್ಲಿ drssjkt@gmail.com ಗೆ ಇಮೇಲ್ ಮಾಡಬಹುದು (ಫೋನ್ ಕರೆ ಅಥವಾ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ).

ಸಂಪರ್ಕ ವಿಳಾಸ:

ಎಸ್.ಎಸ್. ಜನಕಲ್ಯಾಣ ಟ್ರಸ್ಟ್,

ಸಿ/ಓ. ಆರ್.ಎಲ್. ಲಾ ಕಾಲೇಜು, ಎ.ವಿ.ಕೆ. ಕಾಲೇಜು ರಸ್ತೆ,

ದಾವಣಗೆರೆ – 577 002.

ಅಧಿಕೃತ ಲಿಂಕ್: https://ssjanakalyantrust.org/ssj/apply.html

Leave a Comment