Kotak Kanya Scholarship 2026-27 | ಕೋಟಕ್ ಕನ್ಯಾ ಸ್ಕಾಲರ್‌ಶಿಪ್

12ನೇ ತರಗತಿ ಮುಗಿಸಿ ಡಾಕ್ಟರ್, ಇಂಜಿನಿಯರ್ ಅಥವಾ ವಕೀಲರಾಗಬೇಕೆಂಬ ದೊಡ್ಡ ಕನಸು ಹೊತ್ತಿರುವ ಪ್ರತಿಭಾವಂತ ಹೆಣ್ಣುಮಕ್ಕಳಿಗೆ ಆರ್ಥಿಕ ಸಂಕಷ್ಟ ಹಲವು ಬಾರಿ ಅಡ್ಡಿಯಾಗುತ್ತದೆ. ಆದರೆ, ಇನ್ಮುಂದೆ ಹಣದ ಅಭಾವ ನಿಮ್ಮ ಕನಸಿಗೆ ತಡೆಯಾಗುವುದಿಲ್ಲ.

ಕೋಟಕ್ ಶಿಕ್ಷಣ ಫೌಂಡೇಶನ್ (Kotak Education Foundation) ಸಹಯೋಗದೊಂದಿಗೆ ಕೋಟಕ್ ಮಹೀಂದ್ರಾ ಗ್ರೂಪ್ ‘ಕೋಟಕ್ ಕನ್ಯಾ ಸ್ಕಾಲರ್‌ಶಿಪ್ 2026-27’ ಯೋಜನೆಯನ್ನು ಪ್ರಕಟಿಸಿದೆ. ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ನೆರವಾಗುವ ಉದ್ದೇಶದಿಂದ ಪ್ರತಿ ವರ್ಷ ₹1.5 ಲಕ್ಷ ಧನಸಹಾಯ ನೀಡಲಾಗುತ್ತಿದೆ.

ಕೋಟಕ್ ಕನ್ಯಾ ಸ್ಕಾಲರ್‌ಶಿಪ್?

12ನೇ ತರಗತಿ ನಂತರ ಪ್ರಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಪದವಿ ಕೋರ್ಸ್‌ಗಳಿಗೆ ಸೇರ್ಪಡೆಯಾಗುವ ಹೆಣ್ಣುಮಕ್ಕಳಿಗೆ ಈ ಸ್ಕಾಲರ್‌ಶಿಪ್ ಸಿಗಲಿದೆ. ಅಭ್ಯರ್ಥಿಯ ಪದವಿ ಶಿಕ್ಷಣ ಮುಗಿಯುವವರೆಗೆ ಪ್ರತಿ ಶೈಕ್ಷಣಿಕ ವರ್ಷಕ್ಕೆ ₹1.5 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.

ಅರ್ಹತಾ ಮಾನದಂಡಗಳು:

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಅಂಕಗಳ ಮಿತಿ: 12ನೇ ತರಗತಿ ಮಂಡಳಿ ಪರೀಕ್ಷೆಯಲ್ಲಿ ಕನಿಷ್ಠ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು (ಅಥವಾ ತತ್ಸಮಾನ CGPA) ಪಡೆದಿರಬೇಕು.
  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ₹6,00,000 ಗಿಂತ ಹೆಚ್ಚಿರಬಾರದು.
  • ಕೋರ್ಸ್‌ಗಳು: 2026-27ರ ಶೈಕ್ಷಣಿಕ ವರ್ಷದಲ್ಲಿ NIRF/NAAC ಮಾನ್ಯತೆ ಪಡೆದ ಸಂಸ್ಥೆಗಳಲ್ಲಿ (ಉದಾಹರಣೆಗೆ IISER, IISC ಬೆಂಗಳೂರು ಇತ್ಯಾದಿ) ಮೊದಲ ವರ್ಷದ ವೃತ್ತಿಪರ ಪದವಿ ಕೋರ್ಸ್‌ಗಳಾದ ಇಂಜಿನಿಯರಿಂಗ್, MBBS, ಇಂಟಿಗ್ರೇಟೆಡ್ LLB (5 ವರ್ಷ), ಇಂಟಿಗ್ರೇಟೆಡ್ BS-MS/BS-ರಿಸರ್ಚ್, ಡಿಸೈನ್, ಆರ್ಕಿಟೆಕ್ಚರ್ ಮುಂತಾದ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರಬೇಕು.
  • ಲಿಂಗ: ಭಾರತದಾದ್ಯಂತ ಇರುವ ಅರ್ಹ ವಿದ್ಯಾರ್ಥಿನಿಯರು ಮಾತ್ರ ಅರ್ಜಿ ಸಲ್ಲಿಸಬಹುದು.

ಸ್ಕಾಲರ್‌ಶಿಪ್‌ನಿಂದ ಸಿಗುವ ಪ್ರಯೋಜನಗಳೇನು?

  • ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಪದವಿ ಪೂರ್ಣಗೊಳ್ಳುವವರೆಗೆ ಪ್ರತಿ ವರ್ಷ ₹1.5 ಲಕ್ಷ ಧನಸಹಾಯ ನೀಡಲಾಗುತ್ತದೆ.
  • ಈ ಹಣವನ್ನು ಶೈಕ್ಷಣಿಕ ವೆಚ್ಚಗಳಾದ ಟ್ಯೂಷನ್ ಫೀಸ್, ಹಾಸ್ಟೆಲ್ ಫೀಸ್, ಲ್ಯಾಪ್‌ಟಾಪ್, ಪುಸ್ತಕಗಳು, ಸ್ಟೇಷನರಿ, ಸಾರಿಗೆ ವೆಚ್ಚ ಹಾಗೂ ಇಂಟರ್ನೆಟ್ ವೆಚ್ಚಗಳಿಗಾಗಿ ಬಳಸಿಕೊಳ್ಳಬಹುದು.

ಅಗತ್ಯವಿರುವ ಪ್ರಮುಖ ದಾಖಲೆಗಳು

ಅರ್ಜಿ ಸಲ್ಲಿಸುವ ಮುನ್ನ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:

  1. 12ನೇ ತರಗತಿಯ ಅಂಕಪಟ್ಟಿ (ಮಾಸ್ಕ್ ಮಾಡಿದ/ಸುರಕ್ಷಿತವಾದ ಅಂಕಪಟ್ಟಿ)
  2. ಮಾಸ್ಕ್ ಮಾಡಿದ ಆಧಾರ್ ಕಾರ್ಡ್
  3. ಬ್ಯಾಂಕ್ ಪಾಸ್‌ಬುಕ್
  4. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  5. ನಿವಾಸದ (ಮನೆಯ) ಛಾಯಾಚಿತ್ರಗಳು

ಅರ್ಜಿ ಸಲ್ಲಿಸುವುದು ಹೇಗೆ?

  1. Buddy4Study ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
  2. ನಿಮ್ಮ ನೋಂದಾಯಿತ ID ಬಳಸಿ ಲಾಗಿನ್ ಆಗಿ. (ಖಾತೆ ಇಲ್ಲದಿದ್ದರೆ ಇಮೇಲ್/ಮೊಬೈಲ್ ಸಂಖ್ಯೆ ಬಳಸಿ Sign Up ಮಾಡಿ).
  3. ಮುಖಪುಟದಲ್ಲಿ ‘Kotak Kanya Scholarship 2026-27’ ಲಿಂಕ್ ಆಯ್ಕೆ ಮಾಡಿ.
  4. ‘Start Application’ ಬಟನ್ ಮೇಲೆ ಕ್ಲಿಕ್ ಮಾಡುವ ಮೂಲಕ ಅರ್ಜಿ ಪ್ರಕ್ರಿಯೆ ಪ್ರಾರಂಭಿಸಿ.
  5. ಕೇಳಲಾದ ಎಲ್ಲಾ ಅಗತ್ಯ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
  6. ಅಗತ್ಯವಿರುವ ದಾಖಲೆಗಳನ್ನು ಸ್ಪಷ್ಟವಾಗಿ ಅಪ್‌ಲೋಡ್ ಮಾಡಿ.
  7. ನಿಯಮಗಳು ಮತ್ತು ಷರತ್ತುಗಳನ್ನು (Terms and Conditions) ಒಪ್ಪಿಕೊಂಡು ‘Preview’ ನೋಡಿ.
  8. ಎಲ್ಲ ವಿವರಗಳು ಸರಿಯಾಗಿದ್ದರೆ, ‘Submit’ ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಪ್ರಮುಖ ದಿನಾಂಕ

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 20, 2026

ಕೊನೆಯ ಮಾತು

ಹಣಕಾಸಿನ ಕೊರತೆಯಿಂದಾಗಿ ನಿಮ್ಮ ವೃತ್ತಿಪರ ಶಿಕ್ಷಣದ ಕನಸು ಅರ್ಧಕ್ಕೆ ನಿಲ್ಲಬಾರದು. ಸೂಕ್ತ ಅರ್ಹತೆ ಹೊಂದಿರುವ ವಿದ್ಯಾರ್ಥಿನಿಯರು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಿ ಈ ಉತ್ತಮ ಅವಕಾಶದ ಪ್ರಯೋಜನ ಪಡೆದುಕೊಳ್ಳಿ!

Leave a Comment