SSLC ಹಾಗೂ ಪಿಯುಸಿ ಮುಗಿಸಿ ಮುಂದಿನ ಓದಿನ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಒಂದು ಅತ್ಯುತ್ತಮ ಅವಕಾಶ! ಆರ್ಥಿಕ ಸಂಕಷ್ಟದಿಂದಾಗಿ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಶೈಕ್ಷಣಿಕ ಪಯಣ ಅರ್ಧಕ್ಕೇ ನಿಲ್ಲಬಾರದು ಎಂಬ ಆಶಯದೊಂದಿಗೆ ‘ಡಾ. ರಾಜೇಂದ್ರ ಪ್ರಸಾದ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2026-27’ ಅನ್ನು ಪ್ರಾರಂಭಿಸಲಾಗಿದೆ. ಭಾರತದ ಪ್ರಥಮ ರಾಷ್ಟ್ರಪತಿಗಳ ಸ್ಮರಣಾರ್ಥ ನೀಡಲಾಗುತ್ತಿರುವ ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ₹30,000 ವರೆಗೆ ಧನಸಹಾಯ ಸಿಗಲಿದೆ.

ಈ ಸ್ಕಾಲರ್‌ಶಿಪ್‌ನ ಸಂಪೂರ್ಣ ವಿವರ, ಅರ್ಹತೆ ಮತ್ತು ಅರ್ಜಿ ಸಲ್ಲಿಸುವ ಸರಳ ಹಂತಗಳು ಕೆಳಗಿನಂತಿವೆ.
ವಿದ್ಯಾರ್ಥಿವೇತನದ ಮೊತ್ತ ಮತ್ತು ಪ್ರಯೋಜನಗಳು
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಶಾಲಾ ಅಥವಾ ಕಾಲೇಜು ಶುಲ್ಕದ ಆಧಾರದ ಮೇಲೆ ₹30,000 ವರೆಗೆ ಏಕಕಾಲಿಕ (One-time) ಆರ್ಥಿಕ ನೆರವು ಸಿಗಲಿದೆ. ಈ ಹಣವನ್ನು ಬೋಧನಾ ಶುಲ್ಕ (Tuition fees), ಪಠ್ಯಪುಸ್ತಕಗಳು, ಕಲಿಕಾ ಸಾಮಗ್ರಿಗಳು, ವಸತಿ ನಿಲಯ (Hostel) ಹಾಗೂ ಇತರೆ ಶೈಕ್ಷಣಿಕ ವೆಚ್ಚಗಳಿಗೆ ಬಳಸಿಕೊಳ್ಳಬಹುದು.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು
- 10ನೇ ತರಗತಿ (SSLC) ವಿದ್ಯಾರ್ಥಿಗಳು: 2026ರಲ್ಲಿ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕನಿಷ್ಠ 65% ಅಂಕ ಗಳಿಸಿರಬೇಕು.
- 12ನೇ ತರಗತಿ (PUC) ವಿದ್ಯಾರ್ಥಿಗಳು: 2025 ಅಥವಾ 2026ರಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಕನಿಷ್ಠ 65% ಅಂಕ ಪಡೆದಿರಬೇಕು.
- ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ₹8 ಲಕ್ಷ ಮೀರಬಾರದು.
- ವಿಶೇಷ ಆದ್ಯತೆ: ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ವಿಕಲಚೇತನರು (PwD) ಹಾಗೂ ಈಶಾನ್ಯ ರಾಜ್ಯ ಮತ್ತು ಆಕಾಂಕ್ಷಿ ಜಿಲ್ಲೆಗಳ (Aspirational Districts) ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅಗತ್ಯವಿರುವ ಪ್ರಮುಖ ದಾಖಲೆಗಳು
ಅರ್ಜಿ ಭರ್ತಿ ಮಾಡುವಾಗ ಈ ಕೆಳಗಿನ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಸಿದ್ಧವಿಟ್ಟುಕೊಳ್ಳಿ:
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
- ಆಧಾರ್ ಕಾರ್ಡ್ ಅಥವಾ ಯಾವುದೇ ಸರ್ಕಾರಿ ಗುರುತಿನ ಚೀಟಿ
- 10ನೇ / 12ನೇ ತರಗತಿಯ ಅಂಕಪಟ್ಟಿ
- ಪ್ರಸ್ತುತ ವರ್ಷದ ಪ್ರವೇಶಾತಿ ಪುರಾವೆ (School/College ID Card ಅಥವಾ Admission Letter)
- ಕಾಲೇಜು ಫೀಸ್ ರಸೀದಿ ಅಥವಾ ಫೀಸ್ ಸ್ಟ್ರಕ್ಚರ್
- ಸಕ್ಷಮ ಪ್ರಾಧಿಕಾರದಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣಪತ್ರ
- ಬ್ಯಾಂಕ್ ಖಾತೆ ವಿವರ (ವಿದ್ಯಾರ್ಥಿ/ಪೋಷಕರ ಪಾಸ್‌ಬುಕ್ ಅಥವಾ ಕ್ಯಾನ್ಸಲ್ಡ್ ಚೆಕ್)
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?
ಈ ಸ್ಕಾಲರ್‌ಶಿಪ್‌ಗೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು:
- Buddy4Study ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- “Dr. Rajendra Prasad Scholarship Program 2026-27” ಪುಟವನ್ನು ಹುಡುಕಿ, ‘Apply Now’ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆ ಅಥವಾ Google ಖಾತೆ ಬಳಸಿ ಉಚಿತವಾಗಿ ಸೈನ್ ಅಪ್ / ಲಾಗಿನ್ ಆಗಿ.
- ‘Start Application’ ಬಟನ್ ಕ್ಲಿಕ್ ಮಾಡಿ, ನಿಮ್ಮ ವೈಯಕ್ತಿಕ, ಶೈಕ್ಷಣಿಕ ವಿವರಗಳನ್ನು ಸರಿಯಾಗಿ ನಮೂದಿಸಿ.
- ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಪಷ್ಟವಾಗಿ ಅಪ್‌ಲೋಡ್ ಮಾಡಿ.
- ‘Preview’ ಮೂಲಕ ನಮೂದಿಸಿದ ವಿವರಗಳನ್ನು ಪರಿಶೀಲಿಸಿ, ‘Submit’ ಕ್ಲಿಕ್ ಮಾಡುವ ಮೂಲಕ ಅರ್ಜಿಯನ್ನು ಅಂತಿಮಗೊಳಿಸಿ.
ಪ್ರಮುಖ ದಿನಾಂಕ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 2026ರ ಆಗಸ್ಟ್ 31 ಕೊನೆಯ ದಿನವಾಗಿದೆ.
ಹಣಕಾಸಿನ ತೊಂದರೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗುವ ಸನ್ನಿವೇಶವನ್ನು ತಪ್ಪಿಸಲು ಈ ಯೋಜನೆ ಸಹಕಾರಿ. ನಿಮ್ಮ ಮನೆಯಲ್ಲಿ ಅಥವಾ ಪರಿಚಿತರಲ್ಲಿ ಅರ್ಹ ವಿದ್ಯಾರ್ಥಿಗಳಿದ್ದರೆ, ಕೊನೆಯ ಕ್ಷಣದವರೆಗೆ ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ.