ಗ್ರಹಣದ ಬಗ್ಗೆ ಮಾಹಿತಿ 2022 | Chandra Grahana 2022 in Kannada

ಗ್ರಹಣದ ಬಗ್ಗೆ ಮಾಹಿತಿ 2022 Chandra Grahana 2022 8 november date and time sutak time in Kannada

ಗ್ರಹಣದ ಬಗ್ಗೆ ಮಾಹಿತಿ 2022

Chandra Grahana 2022 in Kannada
Chandra Grahana 2022 in Kannada

ಈ ಲೇಖನಿಯಲ್ಲಿ ಚಂದ್ರ ಗ್ರಹಣದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಿದ್ದೇವೆ.

Chandra Grahana 2022 in Kannada

ಚಂದ್ರ ಗ್ರಹಣ 2022 ಭಾರತ ಮತ್ತು ಇತರ ದೇಶಗಳಲ್ಲಿ 8 ನವೆಂಬರ್ 2022 ರಂದು ಗೋಚರಿಸುತ್ತದೆ, ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಮತ್ತು ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದಾಗ ಚಂದ್ರಗ್ರಹಣ ಸಂಭವಿಸುತ್ತದೆ.

ಈ ಚಂದ್ರ ಗ್ರಹಣದ ಸ್ಪರ್ಶ ಕಾಲ ಮಧ್ಯಾಹ್ನ 2.38, ಮಧ್ಯ ಕಾಲ 4.29 ಹಾಗೂ ಮೋಕ್ಷ ಕಾಲ 6.19 ಆಗಿರುತ್ತದೆ. ಆದರೆ ಈ ಅವಧಿಯಲ್ಲಿ, ಅಂದರೆ ಮಧ್ಯಾಹ್ನ ಚಂದ್ರ ದರ್ಶನ ಸಾಧ್ಯವಿಲ್ಲ. ಆದರೆ ಚಂದ್ರೋದಯ ಆಗುವುದು ಸಂಜೆ 5.59ಕ್ಕೆ. ಆ ನಂತರ ಕಾಣಿಸುತ್ತದೆ. ಆದರೆ ಮೋಕ್ಷ ಕಾಲ ಸಂಜೆ 6.19ಕ್ಕೆ ಇರುವುದರಿಂದ 20 ನಿಮಿಷದಲ್ಲಿ ಚಂದ್ರ ಗ್ರಹಣದ ದರ್ಶನ ಸಹಿತ ಇಡೀ ಗ್ರಹಣ ಮುಗಿದು ಹೋಗುತ್ತದೆ.

ಚಂದ್ರ ಗ್ರಹಣ ಕಾಲದಲ್ಲಿ ಮಾಡಬೇಕಾದ ಕೆಲಸಗಳು

ಚಂದ್ರ ಗ್ರಹಣ ಸ್ಪರ್ಶ ಆಗುವ ಮಧ್ಯಾಹ್ನ 2.38ಕ್ಕೆ ಒಂದು ಸ್ನಾನ, ಮಧ್ಯ ಕಾಲವಾದ 4.29 ಹಾಗೂ ಮೋಕ್ಷ ಕಾಲ 6.19ಕ್ಕೆ ಒಮ್ಮೆ ಹೀಗೆ ಮೂರು ಬಾರಿ, ಧರಿಸಿದ ಬಟ್ಟೆಯ ಸಮೇತ ಸ್ನಾನ ಮಾಡುವುದು ಶಾಸ್ತ್ರ ಸಮ್ಮತವಾದದ್ದು. ಚಂದ್ರೋದಯ ಆದ ಮೇಲೆ ಸ್ಪರ್ಶ ಸ್ನಾನ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿದ್ದಲ್ಲಿ ಅದನ್ನು ಬಿಟ್ಟು, ಈ ಮೇಲ್ಕಾಣಿಸಿದ ಸಮಯದಲ್ಲಿ ನಿಯಮ ಅನುಸರಿಸುವುದು ಉತ್ತಮ. ಇನ್ನು ಈ ಗ್ರಹಣ ಸಮಯದಲ್ಲಿ ದೇವರ ಸ್ಮರಣೆಗೆ, ಜಪ- ತಪಗಳಿಗೆ ವಿಶೇಷ ಆದ್ಯತೆ. ಆದ್ದರಿಂದ ಅದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ. ಬೇರೆ ರೀತಿಯಲ್ಲಿ ಸಮಯ ಕಳೆಯುವುದಕ್ಕಿಂತ ದೇವರ ಧ್ಯಾನದಲ್ಲಿ ಮಗ್ನರಾಗಿ.

ಚಂದ್ರ ಗ್ರಹಣ ಕಾಲದಲ್ಲಿ ಏನು ಮಾಡಬಾರದು

  • ಯಾವುದೇ ಧಾರ್ಮಿಕ ಅಥವಾ ಮಂಗಳಕರ ಕಾರ್ಯವನ್ನು ಆಚರಿಸಲು ಅಥವಾ ನಿರ್ವಹಿಸಲು ನಿಷೇಧಿಸಲಾಗಿದೆ.
  • ಚಂದ್ರಗ್ರಹಣದ ಸಮಯದಲ್ಲಿ ದೇವತೆ ಅಥವಾ ಮರಗಳು ಮತ್ತು ಸಸ್ಯಗಳನ್ನು ಸ್ಪರ್ಶಿಸುವುದನ್ನು ನಿಷೇಧಿಸಲಾಗಿದೆ.
  • ಧಾರ್ಮಿಕ ಗುರುಗಳ ಪ್ರಕಾರ, ಚಂದ್ರಗ್ರಹಣದ ಸಂದರ್ಭದಲ್ಲಿ ಪ್ರಯಾಣ ಮಾಡುವುದು ಅಶುಭ.
  • ಚಂದ್ರಗ್ರಹಣದ ಸಮಯದಲ್ಲಿ, ಕತ್ತರಿ, ಚಾಕು, ಸೂಜಿ ಮುಂತಾದ ಯಾವುದೇ ಹರಿತವಾದ ವಸ್ತುಗಳನ್ನು ಬಳಸಬೇಡಿ.

ಗ್ರಹಣದ ಸಂಧರ್ಭದಲ್ಲಿ

ಗ್ರಹಣದ ಸಮಯದಲ್ಲಿ ಯಾವ ದಾನವನ್ನು ನೀಡಿದರೂ ಅದು ಅಮೃತವೆಂದು ಪರಿಗಣಿಸಲಾಗುತ್ತದೆ. ಗ್ರಹಣದ ನಂತರ ಕೆಂಪು ಬಟ್ಟೆ, ತಾಮ್ರದ ಪಾತ್ರೆಗಳು, ಉದ್ದಿನಬೇಳೆ, ಗೋಧಿ ಮತ್ತು ಕೆಂಪು ಹಣ್ಣುಗಳನ್ನು ದಾನ ಮಾಡುವುದು ತುಂಬಾ ಒಳ್ಳೆಯದು.

ವೈದಿಕ ನಾಗರಿಕತೆಯ ಪ್ರಕಾರ, ಗ್ರಹಣದ ನಂತರ ಈ ವಸ್ತುಗಳನ್ನು ದಾನ ಮಾಡುವುದರಿಂದ ಜಾತಕದಲ್ಲಿರುವ ಎಲ್ಲಾ ಗ್ರಹಗಳ ದೋಷಗಳು ನಿವಾರಣೆಯಾಗುತ್ತದೆ ಮತ್ತು ಶುಭ ಫಲಿತಾಂಶಗಳನ್ನು ನೀಡುತ್ತದೆ.

ಇತರೆ ವಿಷಯಗಳು:

ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಬಂಧ

ದೂರದರ್ಶನ ಪ್ರಬಂಧ

ಅಂತರ್ಜಾಲ ಪ್ರಬಂಧ

Leave a Comment