ಅಂದು ಸೆಕ್ಯೂರಿಟಿ ಗಾರ್ಡ್‌ ಇಂದು ಕರ್ನಾಟಕದ No1 ಕಾಮಿಡಿ ಸ್ಟಾರ್ & ಇವರ ತಿಂಗಳ ಆದಾಯ ಲಕ್ಷ ಲಕ್ಷ

ಶಿವಪುತ್ರ ಕರ್ನಾಟಕದ ಕಾಮಿಡಿ ಸ್ಟಾರ್

ನೋಡಿ ಸ್ನೇಹಿತರೇ ಬಡತನ, ಹಸಿವು, ನೋವುಗಳಿಂದ ಮೇಲೆ ಬಂದ ಈಗ ಕಾಮಿಡಿ ಸ್ಟಾರ್‌ ಅಗಿ ಎಲ್ಲರ ಗಮನ ಸೆಳೆದ ಶಿವಪುತ್ರ ಅವರ ಯೂಟೂಬ್ ನಿಂದ ಅವರ ತಿಂಗಳ ಅದಾಯ ಹಾಗೇ ಯೂಟೂಬ್‌ ನಲ್ಲಿ ಹಲವಾರು ಜನ ಅವರ ಜೀವನ ಕಟ್ಟಿಕೊಳ್ಳಲು ಹಾಗೇ ಅವರ ಪ್ರತಿಭೆ ಮುಂದುವರೆಯಲು ಯೂಟೂಬ್‌ ಸಹಾಯವಾಗಿದೆ. ನಿಮಗೆ ಹೀಗೆ ಯೂಟೂಬ್‌ ನಲ್ಲಿ ಸಾಧನೆ ಮಾಡಿದವರ ಬಗ್ಗೆ ನಮ್ಮ Post ನಲ್ಲಿ ತಿಳಿಸುತ್ತೇವೆ.

ಶಿವಪುತ್ರ ಕರ್ನಾಟಕದ ಕಾಮಿಡಿ ಸ್ಟಾರ್ ‌ Shivaputra Yasharadha Information in Kannada
Shivaputra Yasharadha Information in Kannada

ಶಿವಪುತ್ರ ಎಂಬ ಹೆಸರು ಕರ್ನಾಟಕದ ಜನರ ಮನ ಗೆದ್ದ ಹೆಸರು, ನಮಗೆ ಸೋಸಿಯಲ್‌ ಮೀಡಿಯಾದಲ್ಲಿ ಇವರು ಪರಿಚಿತರು. ಬಡತನ ಮತ್ತು ಹಸಿವು ಇದ್ದರು ಒಳ್ಳೆಯ ಮಾರ್ಗದಿಂದ ಮುಂದೆ ಬಂದ ಶಿವಪುತ್ರ.

ಶಿವಪುತ್ರ ಆರಂಭದಲ್ಲಿ ಅನುಭವಿಸಿ ಕಷ್ಟ!

ಹೌದು ಸ್ನೇಹಿತರೇ, ಒಬ್ಬ ವ್ಯಕ್ತಿ ಬೆಳೆದಿದ್ದಾನೆ ಅಂದರೆ ಅವನ ಹಿಂದಿನ ಕಥೆಯು ಅಷ್ಟೇ ಮುಖ್ಯ. ಶಿವಪುತ್ರ ಅವರಿಗೆ ಸಿನಿಮಾ, ನಟನೆ, ಕಾಮಿಡಿ ಈ ತರದ ಮೇಲೆ ಅವರಿಗೆ ಬಹಳ ಅಸಕ್ತಿ ಹೊಂದಿದ್ದರು. ಅವರ ಮನೆಯಲ್ಲಿ ಬಡತನ ಹೆಚ್ಚಿತ್ತು. ಅವರಿಗೆ ೨ ಹೊತ್ತು ಊಟಕ್ಕೆ ಕಷ್ಟವಾದ ಪರಿಸ್ಥಿತಿ.

ಶಿವಪುತ್ರ ಅವರಿಗೆ ಬಡತನ ಮತ್ತು ಹಸಿವು ಇತ್ತು. ಜೊತೆಗೆ ಸಿನಿಮಾ ರಂಗದಲ್ಲಿ ಆಸಕ್ತಿ ಇರುವುದರಿಂದ ಅವರು ನಟನೆಯ ಅವಕಾಶಕ್ಕಾಗಿ ಯಾರ್ಯಾರೋ ಹಿಂದೆ ಅಲೆದಾಡಿದರು. ಅವರ ದುರಾಷ್ಟ ಅನ್ಸುತ್ತೇ ಯಾರು ಅವರಿಗೆ ಅವಕಾಶ ನೀಡಲಿಲ್ಲ. ಚಿಕ್ಕನಿಂದ ಅವರಿಗೆ ನಟನೆಯ ಹುಚ್ಚು ಹಿಡಿದ್ದರಿಂದ ಅವನು ಟಿಕ್-ಟಾಕ್‌ ಮೂಲಕ ತನ್ನ ಪ್ರತಿಭೆಯನ್ನು ಹೊರಹಾಕಲು ಪ್ರಯತ್ನಿಸಿದರು.

ಶಿವಪುತ್ರ ಮೂಲತಃ ವಿಜಯಪುರದವರು!

ಶಿವಪುತ್ರ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದರು, ಅವರಿಗೆ ಅಕ್ಕ ಮತ್ತೆ ತಮ್ಮ ಇದ್ದರು. ಅವರ ತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಮತ್ತು ಅವರ ತಾಯಿ ಹಣ್ಣಿನ ವ್ಯಾಪಾರ ಮಾಡಿ ಅವರ ಜೀವನ ನೆಡೆಸುತ್ತಿದ್ದರು. ಅವರ ಜೀವನ ಬಹಳ ಬಡತನದ ಜೀವನವಾಗಿತ್ತು. ಶಿವಪುತ್ರ ಅವರು ಎರಡನೇ ಮಗನಾಗಿದ್ದರು.

ಶಿವಪುತ್ರ ಅವರ ಸೆಕ್ಯೂರಿಟಿ ಗಾರ್ಡ್‌ಯಾಗಿ ಕೆಲಸ

ಶಿವಪುತ್ರ ಅವರು ನಟನೆಯಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದಿದ್ದ ಕಾರಣ ಅವರನ್ನು ಗುರುತಿಸಿಕೊಳ್ಳಲು ಒಂದು ವೇದಿಕೆ ಬೇಕಿತ್ತು. ಅದಕ್ಕೆ ಅವರಿಗೆ ಮೊದಲು ಮೊಬೈಲ್ ಅವಶ್ಯವಾಗಿತ್ತು. ಮೊಬೈಲ್‌ ತೆಗೆದುಕೊಳ್ಳುವಷ್ಟು ಹಣವಿರಲಿಲ್ಲ, ಅವರು ಅವರ ತಂದೆಯನ್ನು ಕೇಳಿದರು ಆಗ ಸಾಧ್ಯವಿಲ್ಲ ಎಂದರು. ಶಿವಪುತ್ರನಿಗೆ ಬುದ್ದಿ ಹೇಳಿದರು ನಮ್ಮಿಂದ ಅಷ್ಟು ದುಡ್ಡು ಕೊಡಲು ಸಾಧ್ಯವಿಲ್ಲ ನಾವು ಯಾವ ಪರಿಸ್ಥಿಯಲ್ಲಿ ಇರುವು ನಿನಗೆ ತಿಳಿದಿದೆ. ನಿನಗೆ ಅದರ ಅವಶ್ಯಕತೆ ಇದ್ದರೆ ನೀನು ಹಣವನ್ನು ಸಂಪಾನೆ ಮಾಡಿ ಪಡೆದುಕೊ ಅಂದರು. ನಂತರ ಶಿವಪುತ್ರ ವಿಜಯಪುರದಿಂದ ಬೆಂಗಳೂರಿಗೆ ಕೆಲಸ ಹೊಡಿಕೊಂಡು ಬಂದರು. ಅಲ್ಲಿ ಅವರು infosys ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಅಗಿ ಅಲ್ಲಿ ಸೇರಿಕೊಂಡರು. ಮೂರು ತಿಂಗಳು ಕಾಲ ಕೆಲಸ ಮಾಡಿದರು. ನಂತರ ಅವರು ಗಳಿಸಿದ ಹಣವನ್ನು ತೆಗೆದುಕೊಂಡು ಊರಿಗೆ ಮರಳಿದರು. ಶಿವಪುತ್ರ ಅವರು ಮೊಬೈಲ್‌ ತೆಗೆದುಕೊಂಡರು. ಅವರ ಮನೆಯಲ್ಲಿ ಇದಕ್ಕೆ ಒಪ್ಪಿಗೆ ಇರಲಿಲ್ಲ ಬಡತನ ಇರುವುದರಿಂದ ಆ ಹಣದಿಂದ ಸಹಾಯವಾಗುತ್ತಿತ್ತು ಎನ್ನುವುದು ಅವರ ಅಭಿಪ್ರಾಯವಾಗಿತ್ತು.

ಶಿವಪುತ್ರನ ಟಿಕ್ ಟಾಕ್‌ ವೀಡಿಯೋ ಆರಂಭ!

ಬಡತನದಲ್ಲಿಯೂ ಶಿವಪುತ್ರ ಅವನ ಪ್ರತಿಭೆಯನ್ನು ಗುರುತಿಸಲು ಅವನು ಕಂಡುಕೊಂಡ ಮಾರ್ಗವೇ ಟಿಕ್‌ ಟಾಕ್.‌ ಅವನು ಟಿಕ್‌ ಟಾಕ್‌ ನಲ್ಲಿ ಕಾಮಿಡಿ ಮಾಡುತ್ತಿದ್ದ ಹಾಗೇ ಸಿನಿಮಾ ಕಾಮಿಡಿ ಸೇನ್‌ ಗಳಿಗೆ ಡಬ್ ಮಾಡುತ್ತಿದ್ದರು. 1 ಮಿಲಿಯನ್‌ flowers ಅನ್ನು ಹೊಂದಿದ್ದರು. ನಂತರ ಟಿಕ್‌ ಟಾಕ್‌ ಬಾನ್‌ ಮಾಡಿದಾಗ ತುಂಬಾ ಜನರಂತೆ ಶಿವಪುತ್ರ ಅವರಿಗೂ ನೋವು ಅಗಿದೆ. ಮನೆಯಲ್ಲಿ ಬಡತನ ಅದರಲ್ಲೂ ದುಡಿದ ಸಂಪಾದನೆ ಎಲ್ಲವು ಮೊಬೈಲ್‌ ಹಾಕಿದ್ದ. ಶಿವಪುತ್ರ ಟಿಕ್‌ ಟಾಕ್‌ ನಲ್ಲಿ ಫೇಮ್ಸ್‌ ಅಗಿದ್ದರು ಎಲ್ಲರಿಗೂ ಪರಿಚಯವಾಗಿದ್ದರು. ಅವರು ಯೂಟೂಬ್‌, ಫೇಸ್‌ ಬುಕ್‌, ನಲ್ಲಿ ಅವರ ಕಾಮಿಡಿ ಮಾಡಿ ಆಫ್‌ ಲೋಡ್‌ ಮಾಡುತ್ತಿದ್ದರು. ಜನರಿಗೆ ಅವರು ಮುಂಚೆನೇ ಪರಿಚಯವಾಗಿದ್ದರಿಂದ ಅವರ ಕಾಮಿಡಿಯನ್ನು ಹೆಚ್ಚು ಜನ ಇಷ್ಟಪಡುತ್ತಾರೆ ಹಾಗೇ ಅವರ ವೀಡಿಯೋಗಳಿಗೆ ಜನರ ಸಪೋಟ್‌ ಮಾಡುತ್ತಿದ್ದಾರೆ.

ಶಿವಪುತ್ರ ಅವರ ಯೂಟೂಬ್‌ನ ಸಾಧನೆ

shivaputra yasharadha salary per month

ಶಿವಪುತ್ರ ಅವರ ನೋಡಿ ನಾವೆಲ್ಲ ಕಲಿಯುವುದು ಬಹಳ ಇದೆ, ಸೋಸಿಯಲ್‌ ಮೀಡಿಯಾವನ್ನು ಒಳ್ಳೆಯ ಕಾರಣಕ್ಕಾಗಿ ಬಳಸಿಕೊಂಡವರು. ಅವರ ಮನೆಯಲ್ಲಿ ಮೊದಲಿಗೆ ವಿರೋಧ ಮಾಡುತ್ತಿದ್ದ ಅವರ ತಂದೆ-ತಾಯಿ ಅವನ ವೀಡಿಯೊ ನೋಡಿ ಹೆಮ್ಮೆ ಪಡುತ್ತಾರೆ. ಶಿವಪುತ್ರ ಅವರ ಯೂಟೂಬ್‌ ಚಾನಲ್ ಗೆ 2 ವರ್ಷ ಅದಾಗ ಆಗ 10ಲಕ್ಷ subscribe ಅಗಿರುವುದರಿಂದ ಅವರು ಸ್ವಚ್ಛತ ಕಾರ್ಯಕ್ರಮವನ್ನು ಮಾಡಿದ್ದರು ಇದು ಖುಷಿ ಪಡುವ ವಿಚಾರವಾಗಿದೆ.

ಶಿವಪುತ್ರ ಅವರು ಯೂಟೂಬ್ ನಲ್ಲಿ ಕಟ್ಟಪಟ್ಟು ಮೇಲೆ ಬಂದಿದ್ದಾರೆ ಈಗ ಅವರ YouTube ಸಂಬಳ 2 ಲಕ್ಷದಿಂದ 5 ಲಕ್ಷದ ತನಕ ಇನ್ನು ಹೆಚ್ಚಿಗೆ ಹಣವನ್ನು ಸಂಪಾದನೆ ಮಾಡುತ್ತಿದ್ದಾರೆ.

Instagram ನಲ್ಲಿ ಇವರ ಸಾಧನೆ ಮತ್ತು ಅದಾಯ

shivaputra yasharadha instagram salary

Instagram ನಲ್ಲಿ ಇವರು 7 ಲಕ್ಷಕ್ಕಿಂತ ಹೆಚ್ಚಿನ flowers ಅನ್ನು ಹೊಂದಿದ್ದಾರೆ, ಇವರ ಪ್ರತಿಯೊಂದು ವೀಡಿಯೋ 1 ಲಕ್ಷಕ್ಕಿಂತ ಅಧಿಕ ವೀಕ್ಷಣೆಗಳನ್ನು ಪಡೆಯುತ್ತಾವೆ. ಹಾಗೂ ಇವರ ದಿನೇ ದಿನೇ flowers ಹೆಚ್ಚಾಗುತ್ತಿದ್ದಾರೆ, ಹಾಗೇ ಕೆಲವೇ ದಿನಗಳಲ್ಲಿ ಇವರು 1M ಅಂದರೆ 10 ಲಕ್ಷ flowers ಪಡೆಯಲ್ಲಿದ್ದಾರೆ.

Instagram ನಲ್ಲಿ ಪ್ರೇಕ್ಷಕರ ಮುಂದೆ ಬರಲು ಪೋಸ್ಟ್‌ಗಳನ್ನು ಹಾಕುತ್ತಾರೆ, Comedy ವೈರಲ್‌ ಅಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ಜನರು ವೀಕ್ಷಣೆಯನ್ನು ಮಾಡುತ್ತಿದ್ದಾರೆ, ಹಾಗೂ ಇವರ Reels ನೋಡಿ ಇಷ್ಟ ಅದರೆ ಅವರಿಗೆ ಪಾತ್ರಗಳನ್ನು ಮಾಡಲು ಅವಕಾಶ ಸಿಗುತ್ತದೆ. ಮತ್ತು ಕೆಲವು companyಗಳು ಅವರ ಉತ್ಪನ್ನಗಳು ಅಥವಾ ಸರ್ವಿಸ್ ಗಳನ್ನು Promote ಇದರಿಂದ ಅವರಿಗೆ ಅದಾಯ ಸಿಗುತ್ತದೆ. ವೀಡಿಯೋಗಳು ವೈರಲ್‌ಯಾದಂತೆ ಅವಕಾಶಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತದೆ. ಇವರು Instagram ನಿಂದ ತಿಂಗಳಿ ಅಂಗಾಜು 1 ಲಕ್ಷ ರೂಪಾಯಿ ಗಳಿಸುತ್ತಾರೆ.

Facebook ನಲ್ಲಿ ಇವರು 9 ಲಕ್ಷ Followers ಹೊಂದಿದರೆ

shivaputra yasharadha facebook salary

ಫೇಸ್ಬುಕ್ ನಲ್ಲಿ ಇವರು ಫೇಸ್ಬುಕ್ ನಿಂದ ಪ್ರತಿ ತಿಂಗಳು ಹಣವನ್ನು ಗಳಿಸುತ್ತಾರೆ. YouTube ನಿಂದ ಹೇಗೆ ಹಣ ಬರುತ್ತದೆಯೋ ಹಾಗೇ Facebook ನಲ್ಲಿಯು ಹಣ ಬರುತ್ತದೆ. ಒಂದು ಅಂದಾಜಿನ ಪ್ರಕಾರ ಇವರು Facebook ನಲ್ಲಿ ತಿಂಗಳಿಗೆ 2 ರಿಂದ 3 ಲಕ್ಷಕ್ಕಿಂತ ಹೆಚ್ಚು ಹಣವನ್ನು ಸಂಪಾದಿಸುತ್ತಿದ್ದಾರೆ.

FAQ

ಶಿವಪುತ್ರ ಅವರ ಜನ್ಮಸ್ಥಳ ಯಾವುದು?

ಶಿವಪುತ್ರ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಜನಿಸಿದರು.

ಶಿವಪುತ್ರ ಅವರ ಹವ್ಯಾಸ ಏನಾಗಿತ್ತು?

ಒಬ್ಬ ಸಿನಿಮಾ ನಟ ಅಗುವ ಆಸೆ ಇತ್ತು. ಅದಕ್ಕೆ ಅವರು ಕಾಮಿಡಿ, ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದರು.

ಇತರೆ ವಿಷಯಗಳು:

ಯೌಟ್ಯೂಬ್ ನಿಂದ ಹೇಗೆ ಹಣ ಗಳಿಸುವುದು

ತಂತ್ರಜ್ಞಾನದ ಬಗ್ಗೆ ಮಾಹಿತಿ

ಸಾಮಾಜಿಕ ಜಾಲತಾಣ ಪ್ರಬಂಧ

ಸಮೂಹ ಮಾಧ್ಯಮಗಳು ಪ್ರಬಂಧ ಕನ್ನಡ

Leave a Comment