CSB ನೇಮಕಾತಿ 2026: ಪರೀಕ್ಷೆ ಇಲ್ಲದೆಯೇ ಸರ್ಕಾರಿ ಕೆಲಸ! ಕರ್ನಾಟಕದಲ್ಲೇ 38 ಹುದ್ದೆಗಳು – ತಿಂಗಳಿಗೆ ₹21,000+ ಸಂಬಳ.

ಬೆಂಗಳೂರು: ಕೇಂದ್ರ ಸರ್ಕಾರಿ ಹುದ್ದೆಯ ಕನಸು ಕಾಣುತ್ತಿರುವ ಯುವಕ/ಯುವತಿಯರಿಗೆ ಇಲ್ಲಿದೆ ಒಂದು ಭರ್ಜರಿ ಸಿಹಿ ಸುದ್ದಿ. ಭಾರತ ಸರ್ಕಾರದ ಜವಳಿ ಸಚಿವಾಲಯದ ಅಡಿಯಲ್ಲಿ ಬರುವ ಪ್ರತಿಷ್ಠಿತ ‘ಕೇಂದ್ರ ರೇಷ್ಮೆ ಮಂಡಳಿ’ (Central Silk Board – CSB) ಒಟ್ಟು 80 ‘ಸೆರಿಕಲ್ಚರ್ ಅಸಿಸ್ಟೆಂಟ್’ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ವಿಶೇಷ ಮತ್ತು ಖುಷಿಯ ವಿಚಾರ ಏನೆಂದರೆ, ದೇಶಾದ್ಯಂತ ನಡೆಯುವ ಈ ನೇಮಕಾತಿಯಲ್ಲಿ ಅತಿ ಹೆಚ್ಚು ಅಂದರೆ 38 ಹುದ್ದೆಗಳು ನಮ್ಮ ಕರ್ನಾಟಕದ ಅಭ್ಯರ್ಥಿಗಳಿಗಾಗಿಯೇ ಮೀಸಲಾಗಿವೆ. ಹೌದು, ನೀವು ಆಯ್ಕೆಯಾದರೆ ಬೆಂಗಳೂರು ಅಥವಾ ರಾಮನಗರದಲ್ಲಿ ಕೆಲಸ ಮಾಡುವ ಸುವರ್ಣಾವಕಾಶ ನಿಮಗಿದೆ. ಇದು 1 ವರ್ಷದ ಒಪ್ಪಂದದ (Contract) ಆಧಾರದ ಮೇಲಿನ ನೇಮಕಾತಿಯಾಗಿದೆ.

ಯಾವುದೇ ಲಿಖಿತ ಪರೀಕ್ಷೆ ಇಲ್ಲದೆಯೇ, ಕೇವಲ ಸಂದರ್ಶನದ ಮೂಲಕ ಈ ಹುದ್ದೆಗಳಿಗೆ ಆಯ್ಕೆ ನಡೆಯಲಿದೆ. ಈ ಅದ್ಭುತ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಸಂಪೂರ್ಣ ಮಾಹಿತಿ ಇಲ್ಲಿದೆ:

ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?

ನೀವು ಈ ಕೆಳಗಿನ ಯಾವುದಾದರೂ ಒಂದು ವಿದ್ಯಾರ್ಹತೆ ಹೊಂದಿದ್ದರೆ ತಕ್ಷಣ ಅರ್ಜಿ ಸಲ್ಲಿಸಿ:

  1. ಟೆಕ್ಸ್‌ಟೈಲ್ಸ್ ಅಥವಾ ಸಿಲ್ಕ್ ಟೆಕ್ನಾಲಜಿಯಲ್ಲಿ 3 ವರ್ಷದ ಡಿಪ್ಲೊಮಾ ಅಥವಾ B.Sc / B.Tech ಓದಿದವರು.
  2. ಸೆರಿಕಲ್ಚರ್‌ನಲ್ಲಿ 3 ಅಥವಾ 4 ವರ್ಷದ ಪದವಿ ಅಥವಾ ಪಿಜಿ ಡಿಪ್ಲೊಮಾ ಮಾಡಿದವರು.
  3. ಕೃಷಿ ವಿಜ್ಞಾನದಲ್ಲಿ (B.Sc Agri) 4 ವರ್ಷದ ಪದವಿ ಪಡೆದವರು.
  4. ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ ಅಥವಾ ಜೀವಶಾಸ್ತ್ರದಲ್ಲಿ ಪದವಿ ಜೊತೆಗೆ 1 ವರ್ಷದ ಅನುಭವ ಅಥವಾ ಪಿಜಿ ಡಿಪ್ಲೊಮಾ ಹೊಂದಿದವರು.

ವಯಸ್ಸು ಮತ್ತು ಸಂಬಳ ಎಷ್ಟಿರುತ್ತೆ?

  • ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಏಪ್ರಿಲ್ 13, 2026 ಕ್ಕೆ ಅನ್ವಯವಾಗುವಂತೆ ಗರಿಷ್ಠ 35 ವರ್ಷ ಮೀರಿರಬಾರದು. ಸರ್ಕಾರದ ನಿಯಮದಂತೆ ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
  • ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹21,000 ಏಕೀಕೃತ ಗೌರವಧನ (Consolidated Pay) ಸಿಗಲಿದೆ. ಇದರ ಜೊತೆಗೆ ಸರ್ಕಾರಿ ನಿಯಮದಂತೆ ಮನೆ ಬಾಡಿಗೆ ಭತ್ಯೆ (HRA) ಕೂಡ ದೊರೆಯುತ್ತದೆ.

ಅರ್ಜಿ ಶುಲ್ಕ ಮತ್ತು ಪ್ರಮುಖ ದಿನಾಂಕಗಳು

  • ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇಲ್ಲ, ಸಂಪೂರ್ಣ ಉಚಿತ
  • ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 12-03-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-04-2026
  • ಅರ್ಜಿ ಸಲ್ಲಿಸುವ ಅಧಿಕೃತ ವೆಬ್‌ಸೈಟ್: csb-hiring.in

ನಮ್ಮ ವಿಶೇಷ ಸಲಹೆ :

ಈ ಹುದ್ದೆಗಳಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ನಿಮ್ಮ ಅಪ್ಲಿಕೇಶನ್ ಮತ್ತು ರೆಸ್ಯೂಮ್ (Resume) ಆಧಾರದ ಮೇಲೆ ನಿಮ್ಮನ್ನು ಶಾರ್ಟ್‌ಲಿಸ್ಟ್ ಮಾಡಿ ನೇರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಆದ್ದರಿಂದ, ನಿಮ್ಮ ರೆಸ್ಯೂಮ್ ಅನ್ನು ಬಹಳ ಅಚ್ಚುಕಟ್ಟಾಗಿ ಅಪ್‌ಲೋಡ್ ಮಾಡಿ.

ಆನ್‌ಲೈನ್‌ನಲ್ಲಿ ಅರ್ಜಿ ಹಾಕುವಾಗ ನಿಮಗೆ ಕೆಲಸ ಮಾಡಲು ಅನುಕೂಲವಾಗುವ 3 ಸ್ಥಳಗಳನ್ನು ಆಯ್ಕೆ ಮಾಡುವ ಅವಕಾಶವಿರುತ್ತದೆ. ಒಂದು ವೇಳೆ ನೀವು ನಮ್ಮ ರಾಜ್ಯದಲ್ಲೇ ಪೋಸ್ಟಿಂಗ್ ಬೇಕು ಎಂದು ಬಯಸಿದರೆ, ಮೊದಲ ಆದ್ಯತೆಯಾಗಿ ‘ಬೆಂಗಳೂರು’ ಅಥವಾ ‘ರಾಮನಗರ’ವನ್ನು ಆರಿಸಿಕೊಳ್ಳಿ. ಇದರಿಂದ ನಿಮಗೆ ಕರ್ನಾಟಕದಲ್ಲೇ ಕೆಲಸ ಸಿಗುವ ಸಾಧ್ಯತೆ ಶೇ. 100 ರಷ್ಟು ಹೆಚ್ಚಿರುತ್ತದೆ.

ಅರ್ಹತೆ ಮತ್ತು ಆಸಕ್ತಿ ಇರುವ ಅಭ್ಯರ್ಥಿಗಳು ತಡ ಮಾಡದೆ ತಕ್ಷಣ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ, ಅವರಿಗೂ ಸಹಾಯ ಮಾಡಿ.

Leave a Comment