BESCOM ನಿಂದ ನಿರುದ್ಯೋಗಿಗಳಿಗೆ ಬಂಪರ್ ಆಫರ್: 520 ಹುದ್ದೆಗಳು, ಪರೀಕ್ಷೆ ಇಲ್ಲದೆ ನೇರ ಆಯ್ಕೆ!

ಬೆಂಗಳೂರಿನಲ್ಲಿ ನೆಲೆಸಿ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸದ ಅನುಭವ ಪಡೆಯಬೇಕೆಂಬ ಹಂಬಲ ನಿಮಗಿದೆಯೇ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) 2026ನೇ ಸಾಲಿನ ಅಪ್ರೆಂಟಿಸ್ ತರಬೇತಿಗಾಗಿ ಬರೋಬ್ಬರಿ 520 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ, ಇಲ್ಲಿ ಯಾವುದೇ ಲಿಖಿತ ಪರೀಕ್ಷೆಯ ಕಿರಿಕಿರಿ ಇರುವುದಿಲ್ಲ.

ವಿದ್ಯಾರ್ಹತೆ ವಿವರ

ಬೆಸ್ಕಾಂ ಈ ಬಾರಿ ಕೇವಲ ಇಂಜಿನಿಯರಿಂಗ್ ಓದಿದವರಿಗೆ ಮಾತ್ರವಲ್ಲದೆ, ಸಾಮಾನ್ಯ ಪದವೀಧರರಿಗೂ ಬಂಪರ್ ಅವಕಾಶ ನೀಡಿದೆ.

  • ಇಂಜಿನಿಯರಿಂಗ್ ಪದವೀಧರರು (E&E): 130 ಹುದ್ದೆಗಳು.
  • ಸಾಮಾನ್ಯ ಪದವೀಧರರು (BA, BSc, BCom, BBA, BCA, BBM): 315 ಹುದ್ದೆಗಳು.
  • ಡಿಪ್ಲೊಮಾ ಅಭ್ಯರ್ಥಿಗಳು: 75 ಹುದ್ದೆಗಳು.

ಗಮನಿಸಿ: ಈ ಸುವರ್ಣಾವಕಾಶ ಕೇವಲ 2021, 2022, 2023, 2024 ಮತ್ತು 2025ರಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಮಾತ್ರ ಲಭ್ಯವಿದೆ.

ಮಾಸಿಕ ವೇತನ?

ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಆಕರ್ಷಕ ಗೌರವಧನ ನೀಡಲಾಗುತ್ತದೆ:

  • ಪದವೀಧರರಿಗೆ (Engg & Non-Engg): ₹9,008/-
  • ಡಿಪ್ಲೊಮಾ ಪೂರೈಸಿದವರಿಗೆ: ₹8,000/-

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಇಲ್ಲಿ ಅಭ್ಯರ್ಥಿಗಳನ್ನು ಯಾವುದೇ ಕಠಿಣ ಪರೀಕ್ಷೆಗಳ ಮೂಲಕ ಆಯ್ಕೆ ಮಾಡುವುದಿಲ್ಲ. ಬದಲಾಗಿ, ನೀವು ನಿಮ್ಮ ಪದವಿ ಅಥವಾ ಡಿಪ್ಲೊಮಾದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ. ಶಾರ್ಟ್‌ಲಿಸ್ಟ್ ಆದವರಿಗೆ ಒಂದು ಪುಟ್ಟ ಸಂದರ್ಶನ ನಡೆಸಿ ಅಂತಿಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅಂಕಗಳು ಚೆನ್ನಾಗಿದ್ದರೆ ಸಾಕು, ಸರ್ಕಾರಿ ಕೆಲಸದ ಅನುಭವ ನಿಮ್ಮದಾಗಲಿದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಯುವಜನತೆ ತಡಮಾಡದೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

  1. ಮೊದಲು ಕೇಂದ್ರ ಸರ್ಕಾರದ NATS (National Apprenticeship Training Scheme) ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಿ.
  2. ನಂತರ ಬೆಸ್ಕಾಂ ಅಧಿಕೃತ ವೆಬ್‌ಸೈಟ್ bescom.karnataka.gov.in ಮೂಲಕ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡಿ.

ಪ್ರಮುಖ ಲಿಂಕ್‌ಗಳು:

ಅಪ್ಲೇ ಆನ್ಲೈನ್‌Click Here
ನೋಂದಣಿ ಪೋರ್ಟಲ್‌‌Click Here
ಅಧಿಕೃತ ವೆಬ್‌ಸೈಟ್Click Here

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ12-02-2026
ಅರ್ಜಿ ಸಲ್ಲಿಕೆ ಮುಕ್ತಾಯ02-03-2026

ಕೊನೆಯ ದಿನಗಳಲ್ಲಿ ವೆಬ್‌ಸೈಟ್ ಸರ್ವರ್ ಬಿಜಿಯಾಗಿರುತ್ತದೆ. ಆದ್ದರಿಂದ ರಾತ್ರಿ 9 ಗಂಟೆಯ ನಂತರ ಅರ್ಜಿ ಸಲ್ಲಿಸಲು ಪ್ರಯತ್ನಿಸಿ, ಆಗ ಪ್ರಕ್ರಿಯೆ ಸುಲಭವಾಗಿರುತ್ತದೆ. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಆಧಾರ್ ಮತ್ತು ಅಂಕಪಟ್ಟಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಡಿಗ್ರಿ ಮುಗಿಸಿ ಕೆಲಸದ ಹುಡುಕಾಟದಲ್ಲಿರುವವರಿಗೆ, ಪ್ರಾಯೋಗಿಕ ಅನುಭವದ ಜೊತೆಗೆ ಕೈತುಂಬಾ ಸ್ಟೈಫಂಡ್ ಪಡೆಯಲು ಇದೊಂದು ಅತ್ಯುತ್ತಮ ವೇದಿಕೆ. ಇಂದೇ ಅರ್ಜಿ ಸಲ್ಲಿಸಿ ನಿಮ್ಮ ಭವಿಷ್ಯಕ್ಕೆ ಅಡಿಪಾಯ ಹಾಕಿ.

Leave a Comment