BPL Card: ಸ್ವಂತ ಜಮೀನಿನ ಕನಸಿಗೆ ಸರ್ಕಾರ ನೀಡುತ್ತೆ ಉಚಿತ ₹12.5 ಲಕ್ಷ! ಈ ತಪ್ಪು ಮಾಡಿದ್ರೆ ಹಣ ಬರಲ್ಲ!

“ನಮಗೂ ಒಂದು ತುಂಡು ಭೂಮಿ ಇರಬಾರದಾ? ನಮ್ಮ ಹೊಲದಲ್ಲೇ ನಾವು ಸ್ವಾಭಿಮಾನದಿಂದ ದುಡಿಬಾರದಾ?” ಎಂಬುದು ಹಳ್ಳಿಯಲ್ಲಿ ಕೂಲಿ ಮಾಡಿ ಬದುಕುವ ಪ್ರತಿಯೊಬ್ಬ ಮಹಿಳೆಯ ಕನಸು. ಆದರೆ ಕೈಯಲ್ಲಿ ಕಾಸಿಲ್ಲದೆ ಈ ಕನಸು ಕಮರಿ ಹೋಗಿರುತ್ತದೆ.

Land Ownership Scheme

ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ನಿಮ್ಮ ಈ ಕನಸು ನನಸಾಗುವ ಸಮಯ ಬಂದಿದೆ. ಇನ್ಮುಂದೆ ನೀವು ಬೇರೆಯವರ ಹೊಲದಲ್ಲಿ ಕೂಲಿಗಳಲ್ಲ, ನಿಮ್ಮದೇ ಜಮೀನಿನ ‘ಒಡತಿ’ಯಾಗಬಹುದು. ಹೌದು, ಕರ್ನಾಟಕ ಸರ್ಕಾರ ಅಂತಹದೊಂದು ಅದ್ಭುತ ಅವಕಾಶವನ್ನು ನಮ್ಮ ರೈತ ಮಹಿಳೆಯರಿಗೆ ನೀಡಿದೆ.

ಏನಿದು ಬಂಪರ್ ಆಫರ್?

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಭೂ ಒಡೆತನ ಯೋಜನೆ’ (Land Ownership Scheme) ಅಡಿಯಲ್ಲಿ, ಸ್ವಂತ ಭೂಮಿ ಇಲ್ಲದ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಮಹಿಳೆಯರಿಗೆ ಕೃಷಿ ಜಮೀನು ಖರೀದಿಸಲು ಬರೋಬ್ಬರಿ ₹12.5 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡಲಾಗುತ್ತಿದೆ.

ಗಮನಿಸಿ: ಇದು ಸಾಲ ಅಲ್ಲ, ಸರ್ಕಾರ ನೀಡುವ ಸಹಾಯಧನ (Subsidy). ಅಂದರೆ, ಈ ಹಣವನ್ನು ನೀವು ಸರ್ಕಾರಕ್ಕೆ ವಾಪಸ್ ಕಟ್ಟುವ ಅಗತ್ಯವಿಲ್ಲ.

ಮಹಿಳೆಯರಿಗೆ ಸರ್ಕಾರದ ಬಂಪರ್ ಗಿಫ್ಟ್! ಉಚಿತವಾಗಿ ಪಡೆಯಿರಿ Tailoring ಮತ್ತೆ Embrodry Machine: ಇಂದೇ ಅರ್ಜಿ ಸಲ್ಲಿಸಿ!

ಯಾರಿಗೆ ಸಿಗುತ್ತೆ ಈ ಭಾಗ್ಯ? (ಅರ್ಹತೆಗಳು)

ಈ ಯೋಜನೆ ಇರುವುದು ನಿಜವಾಗಿಯೂ ಕಷ್ಟದಲ್ಲಿರುವವರಿಗಾಗಿ. ಹಾಗಾಗಿ ಈ ನಿಯಮಗಳು ಕಡ್ಡಾಯ:

  • ನೀವು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು ಮತ್ತು SC ಅಥವಾ ST ಸಮುದಾಯದ ಮಹಿಳೆಯಾಗಿರಬೇಕು.
  • ಮುಖ್ಯವಾಗಿ: ನಿಮ್ಮ ಅಥವಾ ನಿಮ್ಮ ಕುಟುಂಬದವರ ಹೆಸರಿನಲ್ಲಿ ಈಗ ಯಾವುದೇ ಕೃಷಿ ಭೂಮಿ ಇರಬಾರದು (ನೀವು ಭೂ ರಹಿತರಾಗಿರಬೇಕು).
  • ನಿಮ್ಮ ಕುಟುಂಬದ ಮುಖ್ಯ ಆದಾಯ ಕೃಷಿ ಕೂಲಿಯಿಂದಲೇ ಬರುತ್ತಿರಬೇಕು.

ಈ ತಪ್ಪು ಮಾಡಿದರೆ ಅರ್ಜಿ ರಿಜೆಕ್ಟ್

ಅರ್ಜಿ ಹಾಕಿದರೆ ಸಾಲದು, ಈ ಎರಡು ವಿಷಯಗಳಲ್ಲಿ ಯಾಮಾರಿದರೆ ನಿಮ್ಮ ಖಾತೆಗೆ ಬಿಡಿಗಾಸು ಬರುವುದಿಲ್ಲ.

  1. ಬ್ಯಾಂಕ್ ಖಾತೆ ಲಿಂಕ್ (ಅತ್ಯಂತ ಮುಖ್ಯ): ನಿಮ್ಮ ಆಧಾರ್ ಕಾರ್ಡ್‌ಗೆ ಪ್ರಸ್ತುತ ಚಾಲ್ತಿಯಲ್ಲಿರುವ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಅದಕ್ಕಿಂತ ಮುಖ್ಯವಾಗಿ, ನಿಮ್ಮ ಬ್ಯಾಂಕ್ ಖಾತೆಗೆ KYC ಮತ್ತು NPCI (DBT) ಸೀಡಿಂಗ್ ಆಗಿದೆಯೇ ಎಂದು ಬ್ಯಾಂಕ್‌ಗೆ ಹೋಗಿ ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಸರ್ಕಾರ ಹಣ ಬಿಟ್ಟರೂ ನಿಮ್ಮ ಖಾತೆಗೆ ಜಮಾ ಆಗುವುದಿಲ್ಲ.
  2. ಭೂಮಿಯ ತಕರಾರು: ನೀವು ಖರೀದಿಸಲು ನೋಡುತ್ತಿರುವ ಜಮೀನಿನ ಪಹಣಿ, ಖಾತೆ ಎಲ್ಲವೂ ಸರಿಯಿದೆಯೇ? ಯಾವುದೇ ಕೋರ್ಟ್ ಕೇಸ್, ತಕರಾರು ಇಲ್ಲದ ಭೂಮಿಯನ್ನೇ ಆಯ್ಕೆ ಮಾಡಿಕೊಳ್ಳಿ. ವಿವಾದವಿದ್ದರೆ ನಿಗಮಗಳು ಹಣ ಬಿಡುಗಡೆ ಮಾಡುವುದಿಲ್ಲ.

ಅರ್ಜಿ ಸಲ್ಲಿಸುವುದು ಹೇಗೆ?

ಇದು ಸಂಪೂರ್ಣ ಆನ್‌ಲೈನ್ ಪ್ರಕ್ರಿಯೆ. ನಿಮ್ಮ ಹತ್ತಿರದ ಗ್ರಾಮ ಒನ್ (Grama One) ಅಥವಾ ಕರ್ನಾಟಕ ಒನ್ ಕೇಂದ್ರಕ್ಕೆ ಹೋಗಿ, ಅಗತ್ಯ ದಾಖಲೆಗಳನ್ನು (ಜಾತಿ, ಆದಾಯ ಪತ್ರ, ಆಧಾರ್, ರೇಷನ್ ಕಾರ್ಡ್, ಕೃಷಿ ಕಾರ್ಮಿಕ ದೃಢೀಕರಣ ಪತ್ರ) ನೀಡಿ, ಸಂಬಂಧಪಟ್ಟ ನಿಗಮಗಳ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಿ.

(ಸಲಹೆ: ಸರ್ವರ್ ಬಿಸಿ ಇರುವುದರಿಂದ ಬೆಳಿಗ್ಗೆ ಅಥವಾ ಸಂಜೆ ವೇಳೆ ಪ್ರಯತ್ನಿಸಿ).

ಇದು ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸುವ ಅವಕಾಶ. ಅರ್ಹರಿರುವ ಪ್ರತಿಯೊಬ್ಬ ಅಕ್ಕ-ತಂಗಿಯರು ಇದರ ಲಾಭ ಪಡೆಯಿರಿ. ಈ ಮಾಹಿತಿಯನ್ನು ಈಗಲೇ ನಿಮ್ಮವರಿಗೂ ಶೇರ್ ಮಾಡಿ.

Leave a Comment