ಕರಬೂಜ ಹಣ್ಣಿನ ಉಪಯೋಗಗಳು | Muskmelon in Kannada

Muskmelon in Kannada, Muskmelon Information in Kannada, muskmelon benefits in kannada, ಕರಬೂಜ ಹಣ್ಣಿನ ಉಪಯೋಗಗಳು

muskmelon in kannada

muskmelon in kannada

ಈ ಲೇಖನಿಯಲ್ಲಿ ಕರ್ಬೂಜ ಹಣ್ಣಿನ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

ಕರ್ಬೂಜ ಹಣ್ಣಿನಲ್ಲಿ ಶೇ.95% ರಷ್ಟು ನೀರಿನಂಶವನ್ನು ಹೊಂದಿದ್ದು, ವಿಟಮಿನ್ ಮತ್ತು ಖನಿಜಾಂಶಗಳನ್ನು ಯಥೇಚ್ಛವಾಗಿ ಹೊಂದಿರುತ್ತದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಲಾಭ ಎಂದು ಬೇರೆ ಹೇಳಬೇಕಿಲ್ಲ. ನೀರಿನಂಶದ ಜೊತೆಗೆ ಕರ್ಬೂಜ ಹಣ್ಣು ತಂಪು ಮತ್ತು ಶಮನಕಾರಿ ಗುಣವನ್ನು ಹೊಂದಿದೆ. ಇದು ಎದೆ ಉರಿಯನ್ನು ಶಮನ ಮಾಡುತ್ತದೆ ಮತ್ತು ಮೂತ್ರಕೋಶಗಳಲ್ಲಿ ಇರುವ ಕಶ್ಮಲಗಳನ್ನು ಸ್ವಚ್ಛಗೊಳಿಸುತ್ತದೆ. ಈ ಹಣ್ಣಿನಲ್ಲಿ ಸಕ್ಕರೆಯಂಶ ಅಥವಾ ಕ್ಯಾಲೋರಿಗಳು ಅಧಿಕ ಪ್ರಮಾಣದಲ್ಲಿ ಇಲ್ಲ.

ಹೊರಗಿನಿಂದ ಬೂದು-ಹಸಿರುಮಿಶ್ರಿತ ಸಿಪ್ಪೆ ಹೊಂದಿದ್ದರೂ ಒಳಗಣ ತಿರುಳು ಕೇಸರಿ ಅಥವಾ ಕಿತ್ತಳೆ ಬಣ್ಣ ಹೊಂದಿರುವ ಕೇಸರಿ ಕರಬೂಜ ಬೇಸಿಗೆಯ ಫಲವಾಗಿದ್ದು ಇತರ ಕರಬೂಜ ಹಣ್ಣುಗಳಂತೆಯೇ ಸಿಹಿಯಾದ ಮತ್ತು ಹೆಚ್ಚು ನೀರಿನಂಶವನ್ನು ಹೊಂದಿರುವ ಹಣ್ಣಾಗಿದೆ. ಕಲ್ಲಂಗಡಿಯಂತೆಯೇ ಈ ಹಣ್ಣಿನ ಸೇವನೆಯಿಂದ ವಿಶೇಷವಾಗಿ ಬೇಸಿಗೆಯಲ್ಲಿ ಎದುರಾಗುವ ನಿರ್ಜಲೀಕರಣದಿಂದ ಪಾರಾಗಬಹುದು. ಅಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುವ ಈ ಹಣ್ಣು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರುವವರಿಗೂ ಉತ್ತಮ ಆಯ್ಕೆಯಾಗಿದೆ. ನೀರಿನಂಶ ಮತ್ತು ವಿವಿಧ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ಕೊಬ್ಬು ಹೆಚ್ಚಿಸದೇ ದೇಹಕ್ಕೆ ಶಕ್ತಿ ಒದಗಿಸುವ ಮೂಲಕ ಆರೋಗ್ಯಕರ ಹಣ್ಣುಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುತ್ತದೆ.

ಕರಬೂಜ ಹಣ್ಣಿನ 15 ಆರೋಗ್ಯಕಾರಿ ಲಾಭಗಳು

ತೂಕವಿಳಿಸಲು

ಕರ್ಬೂಜ ಹಣ್ಣು ತೂಕವಿಳಿಸಲು ಆಲೋಚಿಸುತ್ತಿರುವವರಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಏಕೆಂದರೆ ಇದರಲ್ಲಿ ಸೋಡಿಯಂ ಅಂಶ ಮಿತವಾಗಿರುತ್ತದೆ.ಇದು ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ ಹಣ್ಣು ಮತ್ತು ಇದರಲ್ಲಿರುವ ಕ್ಯಾಲೋರಿಗಳು ಸಹ ಕಡಿಮೆ ಇದನ್ನು ತಿಂದರೆ ಇದರಲ್ಲಿರುವ ನೀರಿನಂಶವು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಕರ್ಬೂಜ ಹಣ್ಣಿನಲ್ಲಿ ಇರುವ ಸ್ವಾಭಾವಿಕ ಸಿಹಿತನವು ನಿಮ್ಮ ಬಾಯಿಯನ್ನು ಸಿಹಿಯಾಗಿಸಿ, ನೀವು ಸಿಹಿ ಪದಾರ್ಥಗಳ ಬಗ್ಗೆ ಆಸೆ ಪಡುವುದನ್ನು ನಿಯಂತ್ರಿಸುತ್ತವೆ.

ಕಿಡ್ನಿ ಸಮಸ್ಯೆ ಇರುವವರಿಗೆ

ಕರ್ಬೂಜ ಹಣ್ಣು ಅತ್ಯುತ್ತಮ ಮೂತ್ರವರ್ಧಕ ಶಕ್ತಿಯನ್ನು ಹೊಂದಿದೆ. ಹಾಗಾಗಿ ಇದು ಮೂತ್ರಕೋಶದ ಸಂಬಂಧಿ ಕಾಯಿಲೆ ಮತ್ತು ಇತರ ಅಪಾಯಕಾರಿ ಕಾಯಿಲೆ ಬರದಂತೆ ತಡೆಯುತ್ತವೆ. ಅಲ್ಲದೆ ಕಜ್ಜಿ ಬರುವುದನ್ನು ಸಹ ತಡೆಯುತ್ತವೆ. ನಿಂಬೆಹಣ್ಣಿನ ಜೊತೆಗೆ ಕರ್ಬೂಜ ಹಣ್ಣನ್ನು ಸೇವಿಸುವುದರಿಂದ ಸಂಧಿವಾತವನ್ನು ಸಹ ಗುಣಪಡಿಸಬಹುದು.

ಜೀರ್ಣಶಕ್ತಿಗೆ ಪ್ರಯೋಜನಕಾರಿ

ಕರ್ಬೂಜವು ಜಠರದಲ್ಲಿ ಪಚನ ಕ್ರಿಯೆಯನ್ನು ಉದ್ದೀಪಿಸುತ್ತದೆ. ನಿಮಗೆ ಜೀರ್ಣಕ್ರಿಯೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಕರ್ಬೂಜವನ್ನು ತಿನ್ನಿ. ಆಗ ಜೀರ್ಣಕ್ರಿಯೆ ಸರಾಗವಾಗಿ ಆಗುವುದನ್ನು ನೀವು ಗಮನಿಸುವಿರಿ. ಕರ್ಬೂಜದಲ್ಲಿರುವ ನೀರಿನಂಶವು ಜೀರ್ಣಕ್ರಿಯೆಗೆ ನೆರವು ನೀಡುತ್ತದೆ.

ಗರ್ಭಿಣಿಯರಿಗೂ ಬಹಳ ಒಳ್ಳೆಯದು

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತವೆ

ಈ ಹಣ್ಣುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ ಹಾಗೂ ಅಧಿಕ ರಕ್ತದೊತ್ತಡವನ್ನು ಕಡಿಮೆಯಾಗಿಸಲು ನೆರವಾಗುತ್ತದೆ.

ಮೂತ್ರಪಿಂಡದಲ್ಲಿ ಕಲ್ಲುಗಳಾಗುವುದನ್ನು ತಡೆಯುತ್ತದೆ

ಈ ಹಣ್ಣಿನಲ್ಲಿರುವ ಆಕ್ಸಿಕೈನ್ ಎಂಬ ಪೋಷಕಾಂಶಕ್ಕೆ ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ನಿವಾರಿಸುವ ಶಕ್ತಿ ಇದೆ. ಕೇಸರಿ ಕರಬೂಜ ಹಣ್ಣಿನ ನಿಯಮಿತ ಸೇವನೆಯಿಂದ ಮೂತ್ರಪಿಂಡಗಳಲ್ಲಿರುವ ಕಲ್ಮಶಗಳು ನಿವಾರಣೆಯಾಗುವ ಮೂಲಕ ಇಲ್ಲಿ ಇನ್ನಷ್ಟು ಕಲ್ಲುಗಳಾಗುವುದರಿಂದ ರಕ್ಷಿಸುತ್ತದೆ.

ಇತರೆ ಪ್ರಬಂಧಗಳು

ಆರೋಗ್ಯದ ಬಗ್ಗೆ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

Leave a Comment