Nursing ಓದಿದ್ದೀರಾ? ಹಾಗಾದ್ರೆ ಈ ಸುವರ್ಣಾವಕಾಶ ಮಿಸ್ ಮಾಡ್ಕೋಬೇಡಿ; ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಬೃಹತ್ ನೇಮಕಾತಿ!

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯು (AIIMS) ಬಹುನಿರೀಕ್ಷಿತ ‘ನರ್ಸಿಂಗ್ ಅಧಿಕಾರಿ ನೇಮಕಾತಿ ಸಾಮಾನ್ಯ ಅರ್ಹತಾ ಪರೀಕ್ಷೆ’ (NORCET-10) ಅಧಿಸೂಚನೆಯನ್ನು ಹೊರಡಿಸಿದೆ. ದೇಶಾದ್ಯಂತ ಇರುವ ವಿವಿಧ ಏಮ್ಸ್ (AIIMS) ಸಂಸ್ಥೆಗಳು ಹಾಗೂ ದೆಹಲಿಯ ಪ್ರತಿಷ್ಠಿತ ಸಫ್ದರ್‌ಜಂಗ್ (SJH) ಮತ್ತು ಇಎಸ್‌ಐಸಿ (ESIC) ಆಸ್ಪತ್ರೆಗಳಲ್ಲಿ ಬರೋಬ್ಬರಿ 2551 ನರ್ಸಿಂಗ್ ಅಧಿಕಾರಿ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಬೃಹತ್ ನೇಮಕಾತಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಕೊನೆಯ ನಿಮಿಷದ ಗಡಿಬಿಡಿಯನ್ನು ತಪ್ಪಿಸಲು ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸುವುದು ಉತ್ತಮ. ಈ ನೇಮಕಾತಿಯ ಸಂಪೂರ್ಣ ವಿವರ, ಅರ್ಹತೆ ಮತ್ತು ಪರೀಕ್ಷೆಯ ವಿಧಾನ ಇಲ್ಲಿದೆ.

ವಿದ್ಯಾರ್ಹತೆ ಮತ್ತು ವಯೋಮಿತಿ ಎಷ್ಟು?

  • ಶಿಕ್ಷಣ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ BSc ನರ್ಸಿಂಗ್, ಪೋಸ್ಟ್ ಬೇಸಿಕ್ BSc ನರ್ಸಿಂಗ್ ಪದವಿ ಪಡೆದಿರಬೇಕು. ಅಥವಾ ಜನರಲ್ ನರ್ಸಿಂಗ್ ಮಿಡ್‌ವೈಫರಿಯಲ್ಲಿ (GNM) ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
  • ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 30 ವರ್ಷಗಳ ಒಳಗಿರಬೇಕು (ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರಲಿದೆ).

ಪರೀಕ್ಷಾ ವಿಧಾನ ಹೇಗಿರಲಿದೆ? ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಎರಡು ಹಂತಗಳಲ್ಲಿ ನಡೆಯಲಿದೆ:

  1. ಪ್ರಾಥಮಿಕ ಪರೀಕ್ಷೆ (Prelims): 100 ಅಂಕಗಳ ಬಹು-ಆಯ್ಕೆಯ ಪ್ರಶ್ನೆಗಳನ್ನು (MCQ) ಒಳಗೊಂಡಿರುತ್ತದೆ. ಪರೀಕ್ಷಾ ಅವಧಿ 90 ನಿಮಿಷಗಳು.
  2. ಮುಖ್ಯ ಪರೀಕ್ಷೆ (Mains): ಪ್ರಾಥಮಿಕ ಹಂತದಲ್ಲಿ ತೇರ್ಗಡೆಯಾದವರಿಗೆ ಮಾತ್ರ.

ನೆನಪಿರಲಿ (Negative Marking): ಪ್ರಾಥಮಿಕ ಪರೀಕ್ಷೆಯಲ್ಲಿ ಋಣಾತ್ಮಕ ಅಂಕದ ವ್ಯವಸ್ಥೆ ಇರಲಿದೆ. ನೀವು ನೀಡುವ ಪ್ರತಿ ತಪ್ಪು ಉತ್ತರಕ್ಕೂ 1/3 ಅಂಕಗಳನ್ನು ಕಳೆಯಲಾಗುತ್ತದೆ. ಹಾಗಾಗಿ ಉತ್ತರಗಳನ್ನು ಆಯ್ಕೆ ಮಾಡುವಾಗ ಎಚ್ಚರವಿರಲಿ.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 16, 2026
  • ಪ್ರಾಥಮಿಕ ಪರೀಕ್ಷೆ ದಿನಾಂಕ: ಏಪ್ರಿಲ್ 11, 2026
  • ಮುಖ್ಯ ಪರೀಕ್ಷೆ ದಿನಾಂಕ: ಏಪ್ರಿಲ್ 30, 2026

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು AIIMS ನ ಅಧಿಕೃತ ವೆಬ್‌ಸೈಟ್ ಆದ aiimsexams.ac.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ನಲ್ಲಿರುವ ಅಧಿಕೃತ ಅಧಿಸೂಚನೆಯನ್ನು (Notification) ಸಂಪೂರ್ಣವಾಗಿ ಓದಿ.

ಪ್ರಮುಖ ಲಿಂಕ್‌ಗಳು:

ಅಪ್ಲೇ ಲಿಂಕ್‌ ಇಲ್ಲಿ ಕ್ಲಿಕ್‌ ಮಾಡಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಲ್ಲಿ ಯಾರಾದರೂ ನರ್ಸಿಂಗ್ ಓದಿದ್ದರೆ, ಅವರಿಗೆ ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ.

Leave a Comment