ಪುನೀತ್ ರಾಜ್ ಕುಮಾರ್ ಜೀವನ ಚರಿತ್ರೆ | Puneeth Rajkumar in Kannada

ಪುನೀತ್ ರಾಜ್ ಕುಮಾರ್ ಜೀವನ ಚರಿತ್ರೆ, Puneeth Rajkumar Jeevana Charitre in Kannada, Puneeth Rajkumar Information in Kannada Puneeth Rajkumar in Kannada

ಪುನೀತ್ ರಾಜ್ ಕುಮಾರ್ ಜೀವನ ಚರಿತ್ರೆ

ಪುನೀತ್ ರಾಜ್ ಕುಮಾರ್ ಜೀವನ ಚರಿತ್ರೆ Puneeth Rajkumar Information in Kannada

ಈ ಲೇಖನಿಯಲ್ಲಿ ಸ್ನೇಹಿತರೇ ಪುನೀತ್‌ ರಾಜ್‌ ಕುಮಾರ್‌ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೇವೆ. ಈಗಿನ ನಮ್ಮ ರಾಜ್‌ ಕುಮಾರ್ ನನ್ನು ಕಳೆದುಕೊಂಡ ನೋವು ಎಲ್ಲರಿಗೂ ಇದೆ.

ಪುನೀತ್ ರಾಜ್‍ಕುಮಾರ್ ಅವರು, 17 ಮಾರ್ಚ್ 1975ರಂದು ಜನಿಸಿದ್ದರು. ನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರಾಗಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೂ ಕನ್ನಡ ಚಿತ್ರರಂಗದಲ್ಲಿ ತಂದೆ ದಿವಂಗತ ಡಾ.ರಾಜ್ ಕುಮಾರ್ ಜೊತೆಗೆ ನಟರಾಗಿ ತೊಡಗಿಸಿಕೊಂಡಿದ್ದ ಅವರು, ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ.

ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು.

ವೈಯಕ್ತಿಕ ಜೀವನ

ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ 17 ಮಾರ್ಚ್ 1975ರಂದು ಜನಿಸಿದರು. ಇವರು ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್ ಗೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ದ್ರಿತಿ ಮತ್ತು ವಂದಿತಾ. ಇವರ ಮೊದಲ ಹೆಸರು ಮಾ.ಲೋಹಿತ್ ಆಗಿತ್ತು.

ಡಾ. ರಾಜ್‌ ಕುಮಾರ್‌ ಕನಸು:

ಬಾಲ್ಯದಲ್ಲಿ ಹಲವು ಸಿನಿಮಾಗಳಲ್ಲಿ ತಂದೆ ಡಾ. ರಾಜಕುಮಾರ್ ಅವರಿಂದ ಬಾಲನಟನಾಗಿ ನಟಿಸಿ ಸಾಕಷ್ಟು ಪ್ರಖ್ಯಾತಿ ಪಡೆದು ಅತ್ಯುತ್ತಮ ಬಾಲನಟ ಎಂದು ರಾಷ್ಟ್ರ ಪ್ರಶಸ್ತಿಯನ್ನು ಪಡೆದ ಪುನೀತ್ ರಾಜ್ ಕುಮಾರ್ ರವರು ಸುಮಾರು ಹದಿಮೂರು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿಯುತ್ತಾರೆ.

ಪುನೀತ್‌ ರಾಜ್‌ ಕುಮಾರ್ ಅವರಿಗೆ ಬಾಲ್ಯದಲ್ಲಿ ದೊಡ್ಡವನಾಗಿ ಡಾಕ್ಟರ್ ಆಗಬೇಕು ವಿದೇಶದಲ್ಲಿ ನೆಲೆಸಬೇಕು ದುಡ್ಡು ಮಾಡಬೇಕು ಎಂಬ ಆಸೆಯಿತ್ತು. ಆದರೆ ತಂದೆ ಡಾ ರಾಜಕುಮಾರ್ ಅವರಿಗೆ ಪುನೀತ್ ಒಬ್ಬ ನಟನಾಗಿ ಬೆಳೆಯಬೇಕು ಎಂಬ ಹಂಬಲವನ್ನು ತೋರಿದ್ದರು. ಪುನೀತ್ ಮಾತ್ರ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸದೆ ತನ್ನ ಸಣ್ಣ ವಯಸ್ಸಿಗೇ ಬಿಸಿನೆಸ್ ಮಾಡಲು ಮುಂದಾಗುತ್ತಾನೆ.

ಅದೆಷ್ಟೋ ಬೇರೆ ಬೇರೆ ತರಹದ ಬಿಸಿನೆಸ್ ಮಾಡಿದ ಪ್ರಯತ್ನ ಪುನೀತ್ ರಾಜ್ ಕುಮಾರ್ ಯಾವುದರಲ್ಲೂ ಯಶಸ್ಸು ಕಾಣುವುದಿಲ್ಲ. ಪುನೀತ್ ಗೆ ತಂದೆಯ ಸಂಪತ್ತು ಮತ್ತು ಪ್ರಭಾವವನ್ನು ಬಳಸದೆ ತಾನೇ ದುಡಿದು ಮೇಲೆ ಬರಬೇಕು ಎಂಬ ಹಂಬಲದಿಂದ ಹಲವು ಪ್ರಯತ್ನಗಳನ್ನು ಮಾಡುತ್ತಾನೆ. ಆದರೆ ವಿಧಿ ಅವರನ್ನು ಮಾತ್ರ ಸಿನಿಮಾ ರಂಗದಲ್ಲಿಯೇ ಬೆಳೆಸಬೇಕು ಎಂದು ನಿರ್ಧರಿಸಲಾಗಿತ್ತು .

ಅದರಂತೆ ಪುನೀತ್ ರಾಜ್ ಕುಮಾರ್ 2002 ರಂದು ಅಪ್ಪು ಚಿತ್ರದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಾರೆ. ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದ ಈ ಚಿತ್ರ ಸೂಪರ್ ಹಿಟ್ ಆಗುತ್ತದೆ. ಮತ್ತೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಸಾಲು ಸಾಲು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಡುವ ಮೂಲಕ ತನ್ನ ತಂದೆ ಡಾ. ರಾಜ್ ಕುಮಾರ್ ಅವರ ಕನಸಂತೆ ಪುನೀತ್ ಸಿನಿಮಾದಲ್ಲಿ ಶಾಶ್ವತವಾಗಿ ನೆಲೆಯೂರುತ್ತಾರೆ. ಮತ್ತು ಪ್ರಸಿದ್ದಿಯನ್ನು ಗಳಿಸುತ್ತಾರೆ.

ಪುನೀತ್ ರಾಜ್ ಕುಮಾರ್ ಅವರು ಬಾಲ ನಟನಾಗಿ ನಟಿಸಿರುವ ಚಿತ್ರಗಳು

  • ಪ್ರೇಮದ ಕಾಣಿಕೆ
  • ಭಾಗ್ಯವಂತ
  • ಎರಡು ನಕ್ಷತ್ರಗಳು
  • ಬೆಟ್ಟದ ಹೂವು
  • ಚಲಿಸುವ ಮೋಡಗಳು
  • ಶಿವ ಮೆಚ್ಚಿದ ಕಣ್ಣಪ್ಪ
  • ಪರಶುರಾಮ್
  • ಯಾರಿವನು
  • ಭಕ್ತ ಪ್ರಹ್ಲಾದ
  • ವಸಂತ ಗೀತ

ನಾಯಕ ನಟನಾಗಿ ನಟಿಸಿರುವ ಚಿತ್ರಗಳು 

  • ಅಪ್ಪು
  • ಅಭಿ
  • ವೀರ ಕನ್ನಡಿಗ
  • ಮೌರ್ಯ
  • ಆಕಾಶ್
  • ನಮ್ಮ ಬಸವ
  • ಅಜಯ್
  • ಅರಸು
  • ಮಿಲನ
  • ಬಿಂದಾಸ್
  • ವಂಶಿ
  • ರಾಜ್ ದ ಶೋಮ್ಯಾನ್
  • ಪೃಥ್ವಿ
  • ರಾಮ್
  • ಜಾಕಿ
  • ಹುಡುಗರು
  • ಪರಮಾತ್ಮ
  • ಅಣ್ಣ ಬಾಂಡ್
  • ಯಾರೇ ಕೂಗಾಡಲಿ
  • ನಿನ್ನಿಂದಲೇ
  • ಮೈತ್ರಿ
  • ಪವರ್ ಸ್ಟಾರ್
  • ಧೀರ ರಣ ವಿಕ್ರಮ
  • ಚಕ್ರವ್ಯೂಹ
  • ದೊ‍ಡ್ಮನೆ ಹುಡುಗ
  • ರಾಜಕುಮಾರ
  • ಅಂಜನಿ ಪುತ್ರ
  • ನಟಸಾರ್ವಭೌಮ
  • ಯುವರತ್ನ

ಮರಣ

ಅಕ್ಟೋಬರ್ 29 ರಂದು ಬೆಳಗ್ಗೆ ಕನ್ನಡ ಚಿತ್ರರಂಗದ ಖ್ಯಾತ ನಟ ಅಭಿಮಾನಿಗಳ ನೆಚ್ಚಿನ ಅಪ್ಪು ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ತನ್ನ 46 ನೇ ವಯಸ್ಸಿನಲ್ಲಿ ನಿಧನರಾದ ನಂತರವೂ ಮರೆಯಲಾಗದ ನೋವು. ಈ ದೇಶಕ್ಕೆ ವಿದೇಶದಲ್ಲಿರುವ ಅಪಾರ ಅಭಿಮಾನಿಗಳು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಬಹುಷಃ ಪುನೀತ್ ರಾಜ್ ಕುಮಾರ್ ಅವರ ಸಾವಿಗೆ ಮಿಡಿದಷ್ಟು ಮನಗಳು ಇಡೀ ದೇಶದಲ್ಲಿ ಯಾರ ಸಾವಿಗೆ ಮಿಡಿಯಲಿಲ್ಲ. ತನ್ನ ಸ್ವಂತ ಮನೆಯವರನ್ನೇ ಕಳೆದುಕೊಂಡವರಂತೆ ಅಭಿಮಾನಿಗಳು ಶೋಕ ಸಾಗರದಲ್ಲಿ ಮುಳುಗಿ ಹೋಗಿದ್ದಾರೆ. ಪುನೀತ್ ರಾಜ್ ಕುಮಾರ್ ಗತಿಸಿ ಹನ್ನೊಂದು ದಿನಗಳೂ ಕಳೆದರು ಇನ್ನೂ ಸಹ ಅಭಿಮಾನಿಗಳು ಶೋಕದಿಂದ ಹೊರ ಬಂದಿಲ್ಲ.

FAQ

ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ ಯಾವಾಗ?

17 ಮಾರ್ಚ್ 1975.

ಪುನೀತ್ ರಾಜ್‌ಕುಮಾರ್ ವಯಸ್ಸು ಎಷ್ಟು?

ಅವರಿಗೆ 46 ವರ್ಷ.

ಪುನೀತ್ ರಾಜ್ ಕುಮಾರ್ ಒಡಹುಟ್ಟಿದವರು

ಶಿವರಾಜಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಲಕ್ಷ್ಮಿ, ಪೂರ್ಣಿಮಾ.

ಇತರೆ ಪ್ರಬಂಧಗಳು:

ಬಾಲಗಂಗಾಧರ ತಿಲಕ್ ಜೀವನ ಚರಿತ್ರೆ 

ಗುರುನಾನಕ್ ಜೀವನ ಚರಿತ್ರೆ

Leave a Comment