ಸ್ನೇಕ್‌ ಶ್ಯಾಮ್‌ ಬಗ್ಗೆ ಮಾಹಿತಿ | Snake Shyam Information in Kannada

ಸ್ನೇಕ್‌ ಶ್ಯಾಮ್‌ ಬಗ್ಗೆ ಮಾಹಿತಿ

ಸ್ನೇಕ್‌ ಶ್ಯಾಮ್‌ ಬಗ್ಗೆ ಮಾಹಿತಿ, Snake Shyam Information in Kannada, snake shyam biography and snake shyam life story in kannada, snake shyam monthly income

ಸ್ನೇಕ್‌ ಶ್ಯಾಮ್‌ ಹಾವುಗಳೊಂದಿಗೆ ರೋಮಾಂಚಕ Story

ಸ್ನೇಹಿತರೇ ಸ್ನೇಕ್‌ ಶ್ಯಾಮ್‌ ಅವರು ಚಿಕ್ಕ ವಯಸ್ಸಿನಲ್ಲಿ ಹವ್ಯಾಸಕ್ಕಾಗಿ ಮಾಡಿದ್ದು ಇದು ಅವರಿಗೆ ಜೀವನಕ್ಕೆ ದಾರಿದೀಪವಾಗಿದೆ, ಅವರು ಹಾವನ್ನು ಮೂರನೇ ತಾಯಿ ಎಂದು ಹೇಳುವುದಕ್ಕೆ ಇಷ್ಟಪಡುತ್ತಾರೆ, ಅವರಿಗೆ ಹೆಸರು, ಕೀರ್ತಿಯನ್ನು ತಂದಿದೆ. ಹೀಗೆ ನಿಮಗೆ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ನಮ್ಮ Post ನಲ್ಲಿ ತಿಳಿಸಿದ್ದೇವೆ.

ಸ್ನೇಕ್‌ ಶ್ಯಾಮ್‌ ಹಾವುಗಳೊಂದಿಗೆ ರೋಮಾಂಚಕ Story

ಸ್ನೇಕ್‌ ಶ್ಯಾಮ್‌ ಒಬ್ಬ ಕುತೂಹಲ ಹಾಗೂ ಪ್ರಾಣಿ ಸಂರಕ್ಷಣ ವ್ಯಕ್ತಿ. ಬಡತನದಿಂದಲೇ ತನ್ನ ಜೀವನವನ್ನು ಮುಂದೆ ಸಾಧಿಸಿದ ಸಾಹಸಿ, ಅವರ ಪ್ರಕಾರ ಜೀವನ ಸತ್ಯಗಳು ತುಂಬಾ ಇದೆ, ಶಿಕ್ಷಣದಲ್ಲಿ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಬೇಕು, ಜೀವನಕ್ಕೆ ದಾರಿ ಸಾಗುವ ಶಿಕ್ಷಣವನ್ನು ನೀಡಬೇಕು. ಬದುಕಿಗೆ ಮುಖ್ಯವಾದ ಮೌಲ್ಯವನ್ನು ರೂಪಿಸಬೇಕು. ಹಾರ, ಸನ್ಮಾನದಿಂದ ಹೊಟ್ಟೆ ತುಂಬುವುದಿಲ್ಲ ಸ್ವಲ್ಪ ಆಹಾರವನ್ನು ನೀಡಿ.

ಸ್ನೇಕ್‌ ಶ್ಯಾಮ್‌ ನಿಜವಾದ ಹೆಸರು ಬಾಲಸುಬ್ರಮಣ್ಯ

ಹೌದು, ಸ್ನೇಕ್‌ ಶ್ಯಾಮ್‌ ನಿಜವಾದ ಹೆಸರು ಬಾಲಸುಬ್ರಮಣ್ಯ ಅವರ ಜನನ 17-05-1967 ರಂದು ಮೈಸೂರಿನಲ್ಲಿ ಬ್ರಾಣ್ಮಣ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಸುಬ್ಬರಾವ್‌ Public school ಟೀಚರ್‌ ಅಗಿದ್ದರು. ಅವರ ತಾಯಿ ನಾಗಲಕ್ಷ್ಮಿ Primary school ಟೀಚರ್‌ ಅಗಿದ್ದರು. ಸ್ನೇಕ್‌ ಶ್ಯಾಮ್‌ ಅವರಿಗೆ ಮೊದಲು ಶ್ಯಾಮ್‌ ಅಂತ ಅವರ ಅಜ್ಜಿ ಇಟ್ಟ ಹೆಸರು. ಶ್ಯಾಮ್‌ ಅಂದರೆ ಕೃಷ್ಣ ಎಂದು ಅದರ ಅರ್ಥ. ಅವರು 1 ರಿಂದ 5ನೇ ತರಗತಿ ತನಕ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದರು, ಅದು ಅವರಿಗೆ ಅರ್ಥವಾಗುತ್ತಿರಲ್ಲಿ ಅದಕ್ಕಾಗಿ ಅವರು ಕನ್ನಡ ಮಾಧ್ಯಮದಲ್ಲಿ ನಂತರದ ವಿಧ್ಯಾಭ್ಯಾಸವನ್ನು ಮಾಡಿದರು PUC ಮತ್ತು ITI ಕೂಡ ಮುಗಿಸಿದರು.

ಸ್ನೇಕ್‌ ಶ್ಯಾಮ್‌ ಕೆಲಸದ ಆರಂಭ

ವಿಧ್ಯಾಭ್ಯಾಸ ಮುಗಿಸಿ ನಂತರ ಕಾರ್ಖನೆಯಲ್ಲಿ ಕೆಲಸಕ್ಕೆ ಸೇರಿದರು ಅಲ್ಲಿ ಸಂಬಳ ಆಗ 4 ರಿಂದ 6 ರೂಪಾಯಿಗಳು ಅವರಿಗೆ ಆ ಕೆಲಸ ಇಷ್ಟವಾಗಲಿಲ್ಲ ಅದನ್ನು ಬಿಟ್ಟರು. ಅವರು ಮೂಲೆ ಕಟ್ಟೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವರು, ಅಲ್ಲಿ ಪೈನ್‌ ಗೇಸ್ಟ್‌ ಇತ್ತು ಪ್ರಕಾಶ್‌ ಎಂಬುವರು ಇದ್ದರು. ಅವರ ಮನೆಗೆ ಯಾವಾಗಲೂ ಹಾವು ಬರುತ್ತಿತ್ತು ಅದನ್ನು ಶ್ಯಾಮ್‌ ಅವರು ಹಿಡಿದು ಅದನ್ನು ರಕ್ಷಣೆ ಮಾಡುತ್ತಿದ್ದರು.

ಸ್ನೇಕ್‌ ಶ್ಯಾಮ್‌ ಹಾವು ಹಿಡಿದಿದ್ದು ಎಲ್ಲಿ

ಶ್ಯಾಮ್‌ ಅವರು ಮೊದಲಿನಿಂದಲ್ಲೂ ಪ್ರಾಣಿ ಸಂರಕ್ಷಣೆ ಮಾಡುತ್ತಿದ್ದರು. ಅವರು ಒಂದು ನಾಯಿಯನ್ನು ತಂದು ಹಾಕಿದ್ದರು, ಅದು ಮಳೆಯಲ್ಲಿ ನೆಂದು ಹೋಗಿತ್ತು ಹೆಣ್ಣು ನಾಯಿ ಮರಿ. ಅದು ದೊಡ್ಡವಾಗಿ ಮರಿಯನ್ನು ಹಾಕಿತು. ಹಾಗೇ ಹಲಾವರು ನಾಯಿಗಳು ಬಂದವು. ಶ್ಯಾಮ್‌ ಅವನ ಊಟದಲ್ಲೆ ನಾಯಿಗೆ ಆಹಾರ ಹಾಕುತ್ತಿದ್ದರು. ಅವರನ್ನು ನಾಯಿ ಶ್ಯಾಮ್‌ ಎಂದು ಕರೆಯುತ್ತದ್ದರು. ಒಂದು ದಿನ ಪ್ರೀತ ಮನೆಯಲ್ಲಿ ಹಾವು ಬಂದಿತ್ತು ಶ್ಯಾಮ್ ಗೆ ಹೇಳಿದಳು. ಶ್ಯಾಮ್‌ ನನ್ನು ಪ್ರೀತ ಯಾವಾಗಲೂ ಕಪಿತ ಎಂದು ಕರೆಯುತ್ತಿದ್ದಳು. ಮೊದಲ ಬಾರಿಗೆ ಅಲ್ಲಿ ಹಾವು ಹಿಡಿದರು. ಪ್ರೀತ ಎಲ್ಲ ಕಡೆ ಹೇಳಿದಳು ಅದೇ ಸುದ್ದಿ ಅಗಿತು, ನಂತರ ಯಾರ ಮನೇಲಿ ಹಾವು ಬಂದರು ಶ್ಯಾಮ್‌ ನ್ನು ಕರೆಯುತ್ತಿದ್ದರು.

ಸ್ನೇಕ್‌ ಶ್ಯಾಮ್‌ ಅವರಗೆ ಮೂರು ಜನ ಅಮ್ಮಂದಿರು

ಹೌದು ಅವರಿಗೆ ಮೂರು ಜನ ಅಮ್ಮಂದಿರು ಮೊದಲನೇ ತಾಯಿ ಹೆತ್ತವಳು, ಎರಡನೇ ತಾಯಿ ಅವರ ಆಟೋ, ಮೂರನೇ ತಾಯಿ ಹಾವು, ಒಬ್ಬಳು ಜನ್ಮವನ್ನು ನೀಡಿ ಪ್ರಪಂಚಕ್ಕೆ ಅವರನ್ನು ತಂದವರು, ಎರಡನೇ ತಾಯಿ ಅವರ ಹಸಿವಿಗೆ ನೇರವಾದ ತಾಯಿ, ಮೂರನೇ ತಾಯಿ ಅವರಿಗೆ ಹೆಸರು ತಂದ ತಾಯಿ ಈಗ ಸ್ನೇಕ್‌ ಶ್ಯಾಮ್‌ ಎಂದು ಪ್ರಸಿದ್ಧಿ ಪಡೆಯಲು ಕಾರಣವಾದ ತಾಯಿ.

ಸ್ನೇಕ್‌ ಶ್ಯಾಮ್‌ ಅವರ ಸಾಧನೆ

ಸ್ನೇಕ್‌ ಶ್ಯಾಮ್‌ ಸಾಧನೆಗೆ ಮೊದಲು ಆಟೋ, ಆಟೋದಲ್ಲಿ ಮೊದಲು ಮೂರು ಜನ ನಂತರ ಆರು ಆಮೇಲೆ ಇಪ್ಪತ್ತು ಜನ, ಎಲ್ಲರೂ ಶ್ಯಾಮ್‌ ಆಟೋವನ್ನು ಹುಡುಕಿಕೊಂಡು ಬರುವಂತೆ ಅವರು ಸಾಧನೆ ಮಾಡಿದರು. ಅವರು ಅದರ ಜೊತೆಗೆ ಹಾವು ಹಿಡಿಯುತ್ತ ಇದ್ದರು, ಅವರಿಗೆ ಬೇಡಿಕೆ ಹೇಗಿತ್ತು ಎಂದರೆ ಮನೆಗೆ ಬಂದು Car, ಬೈಕ್, ಸೈಕಲ್‌, ಅಗಿನ ಎಲ್ಲಾ ಕಾರ್‌ ಗಳಲ್ಲಿ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಹಾಗೆ ಮತ್ತೆ ಮನೆಗೆ ಬಿಡುತ್ತಿದ್ದರು. ಅವರು ಯಾವುದೇ ಪೋಟ್‌, ಮೊಬೈಲ್‌, ಬ್ಯಾನರ್‌ ಗಳಿಂದ ಮೇಲೆ ಬಂದವರಲ್ಲ ಬಾಯಿಂದ ಬಾಯಿಗೆ ಮಾತನಾಡುವ ಮೂಲಕ ಮೇಲೆ ಬಂದ ವ್ಯಕ್ತಿ. ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಅರ್ಯಭಟ ಪ್ರಶಸ್ತಿ, ಕರ್ಣ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ.

ಸ್ನೇಕ್‌ ಶ್ಯಾಮ್‌ 4 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ

ಸ್ನೇಕ್‌ ಶ್ಯಾಮ್‌ 4 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಹಾವುಗಳ ಬಗ್ಗೆ ಆಸಕ್ತಿಯನ್ನು ಪ್ರದರ್ಶಿಸಿದ ಅವರು, ನೆರೆಹೊರೆಯವರ ಮನೆಗೆ ಹಾವು ನುಗ್ಗಿದಾಗ, ಹಾವನ್ನು ಕೊಲ್ಲದಂತೆ

ಸುತ್ತಮುತ್ತಲಿನವರಿಗೆ ಮನವರಿಕೆ ಮಾಡಿಕೊಟ್ಟ ನಂತರ, ಅದನ್ನು ಹಿಡಿದು ತೋಟಕ್ಕೆ ಬಿಟ್ಟರು, ಈ ಘಟನೆಯಿಂದ ಅವರು ತಮ್ಮ ಅಡ್ಡಹೆಸರನ್ನು ಪಡೆದರು. ಶ್ಯಾಮ್ ಅವರ ರಕ್ಷಣಾ ಕಾರ್ಯದಲ್ಲಿ ಕೇವಲ ನಾಲ್ಕು ಬಾರಿ ಕಚ್ಚಿದ್ದರೂ, ಅವರು ಆಂಟಿವೆನಿನ್‌ಗೆ ಅಲರ್ಜಿಯನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ಹಾವುಗಳನ್ನು ನಿರ್ವಹಿಸುವಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸುವ ಅಗತ್ಯವಿದೆ.

ಯಾರೇ ಯಾಗಲಿ ಹಾವು ಹಿಡಿಯಲು ಬಂದಾಗ ಅವರಿಗೆ ಅಕಸ್ಮಿಕವಾಗಿ ಹಾವು ಕಚ್ಚಿದರೆ ತಕ್ಷಣವೇ ಅವರನ್ನು ಅಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೂಡಿಸಿ. ಎಂದು ಸ್ನೇಕ್‌ ಶ್ಯಾಮ್‌ ಹೇಳಿದರು ಯಾಕೆಂದರೇ ಅವರಿಗೆ ಒಂದು ಈ ತರದ ಘಟನೆಯಾಗಿತ್ತು. ಹಾವು ಹಿಡಿಯಲು ಹೋದಾಗ ಹಾವು ಕಚ್ಚಿತ್ತು ಆಗ ಆ ಮನೆಯವರು ಅವರ ಜೋಬಿಗೆ 100 ರೂಪಾಯಿ ಹಾಕಿ ಹೊರಟು ಹೋದರು. ಮಾನವಿಯತೇಯನ್ನು ಮರೆತು ವರ್ತನೆ ಮಾಡಿದರು.

FAQ

ಸ್ನೇಕ್‌ ಶ್ಯಾಮ್‌ ನಿಜವಾದ ಹೆಸರೇನು?

ಸ್ನೇಕ್‌ ಶ್ಯಾಮ್‌ ನಿಜವಾದ ಹೆಸರು ಬಾಲಸುಬ್ರಮಣ್ಯ.

ಸ್ನೇಕ್‌ ಶ್ಯಾಮ್‌ ತಂದೆ-ತಾಯಿ ಹೆಸರೇನು?

ತಂದೆ-ಸುಬ್ಬರಾವ್‌ ತಾಯಿ-ನಾಗಲಕ್ಷ್ಮಿ

ಇತರೆ ವಿಷಯಗಳು:

Dr Bro ಜಗತ್ತನ್ನೇ ಸುತ್ತುವ ಹುಡುಗ

ಯೌಟ್ಯೂಬ್ ನಿಂದ ಹೇಗೆ ಹಣ ಗಳಿಸುವುದು

ಹಣವನ್ನು ಉಳಿಸುವ ಮಾರ್ಗಗಳು ಪ್ರಬಂಧ

ಕನ್ನಡದಲ್ಲಿ ಡೆಬಿಟ್ ಕಾರ್ಡ್ ಮಾಹಿತಿ

Leave a Comment