BCM ಉಚಿತ ಹಾಸ್ಟೆಲ್ ಅಪ್ಲಿಕೇಶನ್ ಡೇಟ್ ಚೇಂಜ್! ಇಂದೇ ಮೊಬೈಲ್‌ನಲ್ಲಿ ಹೀಗೆ ಅಪ್ಲೈ ಮಾಡಿ.

ಗ್ರಾಮೀಣ ಭಾಗದಿಂದ ಬಂದು ಪಟ್ಟಣಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ! 2026-27ನೇ ಶೈಕ್ಷಣಿಕ ಸಾಲಿನ ಮೆಟ್ರಿಕ್ ನಂತರದ BCM ಬಾಲಕರ ಹಾಗೂ ಬಾಲಕಿಯರ ಉಚಿತ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಆನ್‌ಲೈನ್ ಅರ್ಜಿ ಸಲ್ಲಿಸಲು ಈಗ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

ವಿಶೇಷ ಏನೆಂದರೆ, ಈ ಬಾರಿ ಕೇವಲ ಪಿಯುಸಿ ಅಷ್ಟೇ ಅಲ್ಲದೆ ಪದವಿ (Degree) ವಿದ್ಯಾರ್ಥಿಗಳಿಗೂ ಈ ಉಚಿತ ಹಾಸ್ಟೆಲ್ ಸೌಲಭ್ಯವನ್ನು ವಿಸ್ತರಿಸಲಾಗಿದೆ! ಹಾಗಾದರೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ? ಯಾರೆಲ್ಲಾ ಅರ್ಹರು? ಮೊಬೈಲ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ, ಕೊನೆ ತನಕ ಓದಿ.

bcm hostel application extended

ಯಾವೆಲ್ಲಾ ಕೋರ್ಸ್‌ನ ವಿದ್ಯಾರ್ಥಿಗಳಿಗೆ ಅವಕಾಶ?

ಈ ಹಿಂದೆ ಕೇವಲ ಪಿಯುಸಿ, ಐಟಿಐ ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸೌಲಭ್ಯವನ್ನು ಈಗ ಸಾಮಾನ್ಯ ಪದವಿ ಕೋರ್ಸ್‌ಗಳಾದ ಬಿ.ಎ (BA), ಬಿ.ಎಸ್ಸಿ (BSc), ಬಿ.ಕಾಂ (BCom), ಬಿ.ಬಿ.ಎ (BBA), ಮತ್ತು ಬಿ.ಸಿ.ಎ (BCA) ಓದುತ್ತಿರುವ ವಿದ್ಯಾರ್ಥಿಗಳಿಗೂ ಕಲ್ಪಿಸಲಾಗಿದೆ.

ಕೊನೆಯ ದಿನಾಂಕ ಯಾವಾಗ?

ಹೊಸ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ 30 ರಿಂದಲೇ ಚಾಲನೆ ಸಿಕ್ಕಿದ್ದು, ಈಗ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು ೨೦-೦೭-೨೦೨೬ (ಜುಲೈ 20, 2026) ರವರೆಗೆ ವಿಸ್ತರಿಸಲಾಗಿದೆ. ಕೊನೆ ಕ್ಷಣದ ಸರ್ವರ್ ಬ್ಯುಸಿ ತೊಂದರೆ ತಪ್ಪಿಸಲು ಇಂದೇ ಅರ್ಜಿ ಹಾಕಿ!

ಅರ್ಹತೆಗಳು ಮತ್ತು ಆದಾಯದ ಮಿತಿ ಏನು?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಈ ಹಾಸ್ಟೆಲ್‌ಗಳಿಗೆ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟಂಗಡದ (ST) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಪೋಷಕರ ವಾರ್ಷಿಕ ಆದಾಯ ಈ ಕೆಳಗಿನಂತಿರಬೇಕು:

  • ಪ್ರವರ್ಗ-1, SC ಮತ್ತು ST ವಿದ್ಯಾರ್ಥಿಗಳಿಗೆ: ವಾರ್ಷಿಕ ಆದಾಯ ರೂ. 2.50 ಲಕ್ಷ ಮೀರಬಾರದು.
  • ಪ್ರವರ್ಗ-2ಎ, 2ಬಿ, 3ಎ, 3ಬಿ ವಿದ್ಯಾರ್ಥಿಗಳಿಗೆ: ವಾರ್ಷಿಕ ಆದಾಯ ರೂ. 1.00 ಲಕ್ಷದ ಒಳಗಿರಬೇಕು.

ಮೊಬೈಲ್ ಅಥವಾ ಸಿಸ್ಟಮ್‌ನಲ್ಲಿ ಅರ್ಜಿ ಸಲ್ಲಿಸುವ 4 ಸರಳ ಹಂತಗಳು!

ಅರ್ಹ ವಿದ್ಯಾರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ https://shp.karnataka.gov.in/bcwd ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ನೆನಪಿಡಿ: ನಿಮ್ಮ ಬಳಿ ಈಗಾಗಲೇ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ (SSP ID) ಖಾತೆ ಇದ್ದರೆ “YES” ಒತ್ತಿ ನೇರವಾಗಿ ಲಾಗಿನ್ ಆಗಬಹುದು (ಏಕೆಂದರೆ SSP ಮತ್ತು SHP ಐಡಿ ಒಂದೇ ಆಗಿರುತ್ತದೆ). ಇಲ್ಲದಿದ್ದರೆ “NO” ಕ್ಲಿಕ್ ಮಾಡಿ ಹೊಸ ಖಾತೆ ತೆರೆಯಿರಿ.

ಹಂತ ೧: ವೈಯಕ್ತಿಕ ಮತ್ತು ಜಾತಿ/ಆದಾಯ ವಿವರ ದಾಖಲಿಸುವುದು

  • ಮುಖಪುಟದಲ್ಲಿ “Post Matric – Apply” ಕ್ಲಿಕ್ ಮಾಡಿ.
  • SSLC ವಿವರ: ನಿಮ್ಮ 10ನೇ ತರಗತಿಯ ಬೋರ್ಡ್, ರಿಜಿಸ್ಟರ್ ನಂಬರ್ ಮತ್ತು ಪಾಸ್ ಆದ ವರ್ಷ ಹಾಕಿ “GET DATA” ಕೊಟ್ಟು, ವಿವರ ಸರಿಯಾಗಿದ್ದರೆ “SAVE SSLC DETAILS” ಒತ್ತಿ.
  • ಜಾತಿ ಮತ್ತು ಆದಾಯ: ನಿಮ್ಮ ಧರ್ಮ, ಕ್ಯಾಟಗರಿ ಆಯ್ಕೆ ಮಾಡಿ, ಕಂದಾಯ ಇಲಾಖೆಯ 15-ಅಂಕಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರದ RD ಸಂಖ್ಯೆ ನಮೂದಿಸಿ “CHECK” ಮಾಡಿ “SAVE DETAILS” ಕ್ಲಿಕ್ ಮಾಡಿ.
  • ವೈಯಕ್ತಿಕ ವಿವರ: ವಿಳಾಸ, ವಿಧಾನಸಭಾ ಕ್ಷೇತ್ರ, ಪಿನ್ ಕೋಡ್ ಮತ್ತು ಪೋಷಕರ ಮೊಬೈಲ್ ಸಂಖ್ಯೆ ನೀಡಿ ಒಟಿಪಿ (OTP) ಮೂಲಕ ವೆರಿಫೈ ಮಾಡಿ. ನಂತರ 1MB ಒಳಗಿನ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ (JPEG ಫಾರ್ಮ್ಯಾಟ್) ಅಪ್‌ಲೋಡ್ ಮಾಡಿ ಸೇವ್ ಮಾಡಿ.

ಹಂತ ೨: ಶೈಕ್ಷಣಿಕ ವಿವರಗಳು (Academic Details)

  • ನೀವು ಪ್ರಸ್ತುತ ಓದುತ್ತಿರುವ ವಿಶ್ವವಿದ್ಯಾಲಯ/ಮಂಡಳಿ, ಕೋರ್ಸ್ (PUC/Diploma/ITI/UG/PG) ಮತ್ತು ಕಾಲೇಜು ಇರುವ ಜಿಲ್ಲೆ, ತಾಲೂಕನ್ನು ಆಯ್ಕೆ ಮಾಡಿ.
  • ಯೂನಿವರ್ಸಿಟಿ ರಿಜಿಸ್ಟರ್ ನಂಬರ್ ಹಾಕಿ “GET DATA” ಒತ್ತಿ (ವಿವರ ಸಿಗದಿದ್ದರೆ ಮ್ಯಾನುಯಲ್ ಆಗಿ ತುಂಬಬಹುದು).
  • ಡಿಗ್ರಿ ಓದುತ್ತಿದ್ದರೆ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಅಂಕಗಳನ್ನು, ಪಿಯುಸಿ ಓದುತ್ತಿದ್ದರೆ ಎಸ್‌ಎಸ್‌ಎಲ್‌ಸಿ ಅಂಕಗಳನ್ನು ಕಡ್ಡಾಯವಾಗಿ ನಮೂದಿಸಿ “Save College Details” ಕ್ಲಿಕ್ ಮಾಡಿ.

ಹಂತ ೩: ಹಾಸ್ಟೆಲ್‌ಗಳ ಆದ್ಯತೆ ಆಯ್ಕೆ (Hostel Preference)

  • ನಿಮ್ಮ ಕಾಲೇಜಿನ ಆಧಾರದ ಮೇಲೆ ತಾಲೂಕಿನಲ್ಲಿ ಲಭ್ಯವಿರುವ BCM ಹಾಸ್ಟೆಲ್‌ಗಳ ಪಟ್ಟಿ ಕಾಣಿಸಲು “GET HOSTELS” ಕ್ಲಿಕ್ ಮಾಡಿ.
  • ನಿಮಗೆ ಮೊದಲಿಗೆ ಯಾವ ಹಾಸ್ಟೆಲ್ ಬೇಕೋ ಅದಕ್ಕೆ ಡ್ರಾಪ್-ಡೌನ್ ಮೂಲಕ Priority (1, 2, 3…) ನೀಡಿ. ಕೌನ್ಸೆಲ್ಲಿಂಗ್‌ನಲ್ಲಿ ಇದರ ಆಧಾರದ ಮೇಲೆಯೇ ಸೀಟು ಸಿಗುತ್ತದೆ. ನಂತರ “SAVE HOSTEL PRIORITY” ಒತ್ತಿ.

ಹಂತ ೪: ಪ್ರಿವ್ಯೂ ಮತ್ತು ಫೈನಲ್ ಸಬ್ಮಿಟ್

  • ಕೊನೆಯದಾಗಿ ನೀವು ಭರ್ತಿ ಮಾಡಿದ ಎಲ್ಲಾ ವಿವರಗಳು ಪರದೆಯ ಮೇಲೆ ಕಾಣಿಸುತ್ತವೆ. ಎಲ್ಲವನ್ನೂ ಸರಿಯಾಗಿ ಪರಿಶೀಲಿಸಿ, ತಪ್ಪುಗಳಿಲ್ಲದಿದ್ದರೆ “Final Submit” ಬಟನ್ ಒತ್ತುವ ಮೂಲಕ ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ.

ತಾಂತ್ರಿಕ ತೊಂದರೆ ಇದೆಯೇ? ಅರ್ಜಿ ಸಲ್ಲಿಸುವಾಗ ಯಾವುದೇ ಗೊಂದಲ ಅಥವಾ ತಾಂತ್ರಿಕ ತೊಂದರೆ ಎದುರಾದರೆ ತಕ್ಷಣ ಇಲಾಖೆಯ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಬಹುದು ಅಥವಾ bcwdhelpline@gmail.com ಗೆ ಇಮೇಲ್ ಮೂಲಕ ದೂರು ಸಲ್ಲಿಸಬಹುದು.

Leave a Comment