ದಿಕ್ಕುಗಳು ಕನ್ನಡ, 8 Directions in Kannada, ಕನ್ನಡದಲ್ಲಿ ದಿಕ್ಕುಗಳ ಹೆಸರುಗಳು, dikkugalu in kannada, directions information in kannada

ದಿಕ್ಕುಗಳು ಕನ್ನಡ | 8 Directions in Kannada

dikkugalu in kannada
ದಿಕ್ಕುಗಳು ಕನ್ನಡ 8 Directions in Kannada

ಈ ಲೇಖನಿಯಲ್ಲಿ ದಿಕ್ಕುಗಳ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ನಿಮಗೆ ನೀಡಿದ್ದೇವೆ.

8 Directions in Kannada

ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತದಂತಹ ಸಾಮಾನ್ಯ ವಿಜ್ಞಾನ ವಿಷಯಗಳಲ್ಲಿ ಕನ್ನಡದಲ್ಲಿ ನಿರ್ದೇಶನ ಮತ್ತು ನಿರ್ದೇಶನ ಆಧಾರಿತ ಸಮಸ್ಯೆಗಳು, ಪರಿಕಲ್ಪನೆಗಳು ಮತ್ತು ಸಿದ್ಧಾಂತಗಳು ಸಾಮಾನ್ಯವಾಗಿದೆ. ಆದ್ದರಿಂದ ದಿಕ್ಕನ್ನು ಅರ್ಥಮಾಡಿಕೊಳ್ಳುವುದು ಆ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ದಿಕ್ಕು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು

  • ಮೂಡಣ (ಪೂರ್ವ)
  • ಪಡುವಣ (ಪಶ್ಚಿಮ)
  • ಬಡಗಣ (ಉತ್ತರ)
  • ತೆಂಕಣ (ದಕ್ಷಿಣ)

ಉಪ ದಿಕ್ಕುಗಳು

  • ವಾಯವ್ಯ
  • ನೈರುತ್ಯ
  • ಆಗ್ನೇಯ
  • ಈಶಾನ್ಯ

ಭೂಮಿಯು ಪಶ್ಚಿಮದಿಂದ ಪೂರ್ವದ ಕಡೆಗೆ ದಿಕ್ಕಿನಲ್ಲಿ ತಿರುಗುತ್ತದೆ. ಪೂರ್ವ ಹಾಗು ಪಶ್ಚಿಮ ವನ್ನು ಗುರುತಿಸುವ ಇನ್ನೊಂದು ಸುಲಭ ವಿಧಾನವೆಂದರೆ ಸೂರ್ಯ ಉದಯಿಸುವ ದಿಕ್ಕು ಪೂರ್ವವಾದರೆ ಸೂರ್ಯ ಅಸ್ತಮಿಸುವ ದಿಕ್ಕು ಪಶ್ಚಿಮ ಆಗಿರುತ್ತದೆ.

ಈ ಮೇಲಿನ 4 ದಿಕ್ಕುಗಳ ನಡುವಿನ ದಿಕ್ಕುಗಳನ್ನು ಅಂತರ್ ದಿಕ್ಕು ಗಳೆಂದು ಕರೆಯುತ್ತಾರೆ. ವಾಯುವ್ಯ, ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಇವು ಅಂತರ್ ದಿಕ್ಕು ಗಳಾಗಿವೆ.

ದಿಕ್ಕುಗಳನ್ನು ಕಂಡು ಹಿಡಿಯುವ ಸಾಧನವನ್ನು ಕಂಪಾಸ್ ಎಂದು ಕರೆಯುತ್ತಾರೆ. ಭೂಮಿಯು ದೊಡ್ಡ ಒಂದು ಮ್ಯಾಗ್‌ನೆಟ್ ಅಥವಾ ಚುಂಬಕದಂತೆ ವರ್ತಿಸುತ್ತದೆ. ಇದನ್ನು ಉಪಯೋಗಿಸಿಕೊಂಡು ಕಂಪಾಸ್ ದಿಕ್ಕುಗಳನ್ನು ಸೂಚಿಸುತ್ತದೆ. ಕಂಪಾಸ್ ಮೇಲಿನ ದಿಕ್ಕುಗಳ ಗುರುತನ್ನ ಕೆಳಗಿನ ಚಿತ್ರದಲ್ಲಿ ಕಾಣಬಹುದು.

ಹಿಂದೂ ಧರ್ಮದ ಪ್ರಕಾರ ದಿಕ್ಕುಗಳು 10 ಈ ಪ್ರತಿಯೊಂದುು ದಿಕ್ಕುಗಳಿಗೂ ಒಬ್ಬ ದಿಕ್ ಪಾಲಕರಿದ್ದಾರೆ. ಉತ್ತರಕ್ಕೆ ಕುಬೇರ, ದಕ್ಷಿಣಕ್ಕೆ ಯಮ, ಪೂರ್ವಕ್ಕೆ ಇಂದ್ರ, ಪಶ್ಚಿಮಕ್ಕೆ ವರುಣ, ಉತ್ತರ ಪೂರ್ವ ಈಶನ, ದಕ್ಷಿಣ-ಪೂರ್ವ ಅಗ್ನಿ, ಉತ್ತರ ಪಶ್ಚಿಮ ವಾಯು, ದಕ್ಷಿಣ-ಪಶ್ಚಿಮ ನಿರ್ರ್ತಿ, ಮೇಲೆ ಬ್ರಹ್ಮ, ಕೆಳಗೆ ಪಾತಾಳ ಲೋಕ ವಿಷ್ಣು. ಅಂತರ್ ದಿಕ್ಕುಗಳ ಹೆಸರು ದಿಕ್ಪಾಲಕರ ಹೆಸರಿನಿಂದ ಕರೆಯಲಾಗುತ್ತದೆ. 4 ದಿಕ್ಕುಗಳು ಹಾಗೂ 4 ಅಂತರ್ ದಿಕ್ಕುಗಳನ್ನು ಕೆಳಗಿನ ಚಿತ್ರದಲ್ಲಿ ಕಾಣಬಹುದು.

FAQ

ದಿಕ್ಕುಗಳು ಎಷ್ಟು

8 ದಿಕ್ಕುಗಳು

ದಿಕ್ಕುಗಳು ಯಾವುವು

ಪೂರ್ವ,ಪಶ್ಚಿಮ,ಉತ್ತರ,ದಕ್ಷಿಣ,ವಾಯುವ್ಯ,ನೈರುತ್ಯ,ಆಗ್ನೇಯ,ಮತ್ತು ಈಶಾನ್ಯ

ಇತರೆ ಪ್ರಬಂಧಗಳು:

ಕರ್ನಾಟಕದ ಪ್ರಮುಖ ನದಿ ಯೋಜನೆಗಳು

ಸೂರ್ಯನ ಬಗ್ಗೆ ಪ್ರಬಂಧ

ಶಕ್ತಿ ಸಂರಕ್ಷಣೆ ಪ್ರಬಂಧ

By asakthi

Leave a Reply

Your email address will not be published. Required fields are marked *