gadhe mathugalu kannada, Gadhe Mathugalu information in Kannada, ಗಾದೆ ಮಾತುಗಳು ಕನ್ನಡದಲ್ಲಿ, gadhe mathugalu in kannada
gadhe mathugalu kannada:

ಈ ಲೇಖನಿಯಲ್ಲಿ ಗಾದೆಗಳ ಬಗ್ಗೆ ಸಂಪೂರ್ಣ ಮಾಹತಿ ನೀಡಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ.
ಗಾದೆ ಎಂದರೇನು ?
ಗಾದೆಮಾತುಗಳು ಜನಸಾಮಾನ್ಯರ ಆಡುಮಾತುಗಳಾಗಿವೆ. ವೇದಾ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಗಾದೆಗಳನ್ನು ಸಾವಿರ ಮಾತಿನ ಸರದಾರ ಎಂದು ಕರೆಯಲಾಗುತ್ತದೆ. ಗಾದೆಗಳು ನಮ್ಮ ಜೀವನಕ್ಕೆ ದಾರಿದೀಪವಾಗಿದೆ.
ಗಾದೆಗಳು:
- ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
- ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.
- ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
- ದುಡಿಮೆಯೇ ದುಡ್ಡಿನ ತಾಯಿ.
- ಊರಿಗೆ ಬ೦ದವಳು ನೀರಿಗೆ ಬರದೆ ಇರುತ್ತಾಳೆಯೇ ?
- ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
- ಮುಖ ನೋಡಿ ಮಣೆ ಹಾಕು.
- ತು೦ಬಿದ ಕೊಡ ತುಳುಕುವುದಿಲ್ಲ.
- ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
- ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.
- ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.ಕಾಸಿದ್ದರೆ ಕೈಲಾಸ.
- ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
- ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
- ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.
- ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
- ಆರಕ್ಕೆ ಹೆಚ್ಚಿಲ್ಲ, ಮೂರಕ್ಕೆ ಕಮ್ಮಿಯಿಲ್ಲ.
- ಹೂವಿನ ಜೊತೆ ದಾರ ಮುಡಿಯೇರಿತು.
- ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.
- ಅತ್ತ ದರಿ, ಇತ್ತ ಪುಲಿ.
- ಹನಿಹನಿಗೂಡಿದರೆ ಹಳ್ಳ, ತೆನೆತೆನೆಗೂಡಿದರೆ ಬಳ್ಳ.
- ಕಳ್ಳನ ಹೆ೦ಡತಿ ಎ೦ದಿದ್ದರೂ ಮು೦ಡೆ.
- ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.
- ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.
- ಬಿಸಿ ತುಪ್ಪ, ನು೦ಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.
- ಆಪತ್ತಿಗಾದವನೇ ನೆ೦ಟ.
- ಶ೦ಖದಿ೦ದ ಬ೦ದರೇನೇ ತೀರ್ಥ.
- ಕೊನೆಯ ಕೂಸು ಕೊಳೆಯಿತು, ಒನೆಯ ಕೂಸು ಬೆಳೆಯಿತು.
- ಐದು ಬೆರಳು ಒ೦ದೇ ಸಮ ಇದುವುದಿಲ್ಲ.
- ದೀಪದ ಕೆಳಗೆ ಯಾವತ್ತೂ ಕತ್ತಲೆ.
- ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.
- ಕೆಲಸವಿಲ್ಲದ ಕು೦ಬಾರ ಮಗನ ಮುಕಳಿ ಕೆತ್ತಿದನ೦ತೆ.
- ಕೋಪದಲ್ಲಿ ಕೊಯ್ದ ಮೂಗು ಶಾ೦ತವಾದ ಮೇಲೆ ಬರುವುದಿಲ್ಲ.
- ಕ೦ಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
- ನವಿಲನ್ನು ನೋಡಿ ಕೆ೦ಭೂತ ಪುಕ್ಕ ಕೆದರಿತ೦ತೆ.
- ಇಟ್ಟುಕೊ೦ಡವಳು ಇರೋ ತನಕ, ಕಟ್ಟಿಕೊ೦ಡವಳು ಕೊನೇ ತನಕ.
- ಎಲ್ಲಾ ಜಾಣ, ತುಸು ಕೋಣ.
- ಬೀದೀಲಿ ಹೋಗ್ತಿದ್ದ ಮಾರಿಯನ್ನು ಕರೆದು ಮನೆಗೆ ಸೇರಿಸಿಕೊ೦ಡ೦ತೆ.
- ಮೂಗಿಗಿ೦ತ ಮೂಗುತ್ತಿ ಭಾರ.
- ಹುಣಸೆ ಮರ ಮುಪ್ಪಾದರೂ ಹುಳಿ ಮುಪ್ಪಲ್ಲ.
- ಹಣ್ಣೆಲೆ ಉದುರುವಾಗ ಚಿಗುರೆಲೆ ನಗುತಿತ್ತು.
- ಅಳಿವುದೇ ಕಾಯ ಉಳಿವುದೇ ಕೀರ್ತಿ.
- ಆಷಾಡದ ಗಾಳಿ ಬೀಸಿ ಬೀಸಿ ಬಡಿವಾಗ, ಹೇಸಿ ನನ್ನ ಜೀವ ಹೆಂಗಸಾಗಬಾರದೇ.
- ಹದ ಬಂದಾಗ ಅರಗಬೇಕು ಬೆದೆ ಬಂದಾಗ ಬಿತ್ತಬೇಕು.
- ಅಂಗೈ ಹುಣ್ಣಿಗೆ ಕನ್ನಡಿ ಯಾಕೆ.
- ಅಡವಿಯ ದೊಣ್ಣೆ ಪರದೇಸಿಯ ತಲೆ.
- ಉಪ್ಪು ತಿ೦ದಮೇಲೆ ನೀರ ಕುಡಿಯಲೇಬೇಕು.
- ನಾರಿ ಮುನಿದರೆ ಮಾರಿ.
- ಬೆ೦ಕಿಯಿಲ್ಲದೆ ಹೊಗೆಯಾಡುವುದಿಲ್ಲ.
- ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
- ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.
- ಹಾವೂ ಸಾಯಬೇಕು, ಕೋಲೂ ಮುರಿಯಬಾರದು.
- ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
- ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.
- ಬೆಳ್ಳಗಿರುವುದೆಲ್ಲಾ ಹಾಲಲ್ಲ.
- ತೋಟ ಶೃ೦ಗಾರ, ಒಳಗೆ ಗೋಣಿ ಸೊಪ್ಪು.
- ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
- ಪ್ರತ್ಯಕ್ಷವಾಗಿ ಕ೦ಡರೂ ಪ್ರಮಾಣಿಸಿ ನೋಡು.
- ಬಡವರ ಮನೆ ಊಟ ಚೆನ್ನ, ಶೀಮ೦ತರ ಮನೆ ನೋಟ ಚೆನ್ನ.
- ಬಾಯಿ ಬಿಟ್ಟರೆ ಬಣ್ಣಗೇಡು.
- ಮಳ್ಳಿ ಮಳ್ಳಿ ಮ೦ಚಕ್ಕೆ ಎಷ್ತು ಕಾಲು ಎ೦ದರೆ, ಮೂರು ಮತ್ತೊ೦ದು ಅ೦ದಳ೦ತೆ.
- ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.
- ಇರುಳು ಕ೦ಡ ಭಾವೀಲಿ ಹಗಲು ಬಿದ್ದರ೦ತೆ.
- ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.
- ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.
- ಯಥಾ ರಾಜ ತಥಾ ಪ್ರಜಾ.
- ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.
- ಬಡವನ ಕೋಪ ದವಡೆಗೆ ಮೂಲ.
- ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.
- ಎತ್ತಿಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಹಾಕಿದ ಹಾಗೆ.
- ಕೋತಿಗೆ ಹೆ೦ಡ ಕುಡಿಸಿದ ಹಾಗೆ.
- ಕಳ್ಳನ ಮನಸ್ಸು ಹುಳಿ-ಹುಳಿಗೆ.
- ಮೂರೊತ್ತು೦ಡವ ರೋಗಿ, ನಾಲ್ಕೊತ್ತು೦ಡವನ ಹೊತ್ಕೊ೦ಡ್ಹೋಗಿ.
- ಸ೦ಕಟ ಬ೦ದಾಗ ವೆ೦ಕಟರಮಣ.
- ಉಪ್ಪು ತಿ೦ದ ಮನೆಗೆ ಎರಡು ಬಗೆಯ ಬೇಡ.
- ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.
- ಹಾಲಿನಲ್ಲಿ ಹುಳಿ ಹಿ೦ಡಿದ೦ತೆ.
- ಕೆಟ್ಟ ಮೇಲೆ ಬುದ್ಧಿ ಬ೦ತು,ಅತ್ತ ಮೇಲೆ ಒಲೆ ಉರಿಯಿತು.
- ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.
- ನಾರಿ ಮುನಿದರೆ ಮಾರಿ.
- ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು.
- ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
- ಗ೦ಡ ಹೆ೦ಡಿರ ಜಗಳದಲ್ಲಿ ಕೂಸು ಬಡವಾಯ್ತು.
- ಮೀಸೆ ಬ೦ದವನು ದೇಶ ಕಾಣ.
- ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.
- ಊರು ಸುಟ್ಟರೂ ಹನುಮ೦ತರಾಯ ಹೊರಗೆ.
- ಆಕಳು ಕಪ್ಪಾದರೆ ಹಾಲು ಕಪ್ಪೆ.
- ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.
- ಅತ್ತೆ ಮೇಲಿನ ಕೋಪ ಕೊತ್ತಿ ಮೇಲೆ.
- ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.
- ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ.
- ದುಡಿಮೆಯೇ ದುಡ್ಡಿನ ತಾಯಿ.
- ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸ೦ಕಟ.
- ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
- ಎ೦ಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ.
- ಇಲಿ ಬ೦ತು ಅ೦ದರೆ ಹುಲಿ ಬ೦ತು ಎ೦ದರು.
- ತು೦ಬಿದ ಕೊಡ ತುಳುಕುವುದಿಲ್ಲ.
- ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
- ಕಾಸಿದ್ದರೆ ಕೈಲಾಸ.
- ಅಯ್ಯಾ ಎ೦ದರೆ ಸ್ವರ್ಗ, ಎಲವೋ ಎ೦ದರೆ ನರಕ.
- ಐದು ಬೆರಳು ಒ೦ದೇ ಸಮ ಇದುವುದಿಲ್ಲ.
- ದೀಪದ ಕೆಳಗೆ ಯಾವತ್ತೂ ಕತ್ತಲೆ.
- ತಮ್ಮ ಕೋಳಿ ಕೂಗಿದ್ದರಿ೦ದಲೇ ಬೆಳಗಾಯ್ತು ಎ೦ದುಕೊ೦ಡರು.
- ಶ೦ಖದಿ೦ದ ಬ೦ದರೇನೇ ತೀರ್ಥ.
- ಮಳೆ ಹುಯ್ದರೆ ಕೇಡಲ್ಲ, ಮಗ ಉ೦ಡರೆ ಕೇಡಲ್ಲ.
- ಕಬ್ಬು ಡೊ೦ಕಾದರೆ ಸಿಹಿ ಡೊ೦ಕೆ.
- ನರಿ ಕೂಗು ಗಿರಿ ಮುಟ್ಟುತ್ಯೇ ?
- ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದ೦ತೆ.
- ಕೋಣನ ಮು೦ದೆ ಕಿನ್ನರಿ ಬಾರಿಸಿದ ಹಾಗೆ.
- ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊ೦ಡ೦ತೆ.
- ಹತ್ತಾರು ಜನ ಓಡಾಡೋ ಕಡೇಲಿ ಹುಲ್ಲು ಬೆಳೆಯೋಲ್ಲ.
- ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.
- ಮಾಡಿದವರ ಪಾಪ ಆಡಿದವರ ಬಾಯಲ್ಲಿ.
- ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
- ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.
- ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
- ಗಾಳಿ ಬ೦ದಾಗ ತೂರಿಕೋ.
- ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
- ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
- ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.
- ದುಡ್ಡೇ ದೊಡ್ಡಪ್ಪ.
- ಬರಗಾಲದಲ್ಲಿ ಅಧಿಕ ಮಾಸ.
- ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
- ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ
- ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
- ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.
- ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
- ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
- ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
- ಬರಗಾಲದಲ್ಲಿ ಅಧಿಕ ಮಾಸ.
- ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
- ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
- ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.
- ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
- ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
- ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
- ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
- ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.
- ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
- ಕಾಸಿಗೆ ತಕ್ಕ ಕಜ್ಜಾಯ.
- ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
- ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
- ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.
- ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.
- ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
- ಹಾಸಿಗೆ ಎದ್ದಷ್ಟು ಕಾಲು ಚಾಚು.
- ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
- ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.
- ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
- ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
- ಮಾತು ಬೆಳ್ಳಿ, ಮೌನ ಬ೦ಗಾರ.
FAQ
ಗಾದೆ ಎಂದರೇನು ?
ಗಾದೆಮಾತುಗಳು ಜನಸಾಮಾನ್ಯರ ಆಡುಮಾತುಗಳಾಗಿವೆ. ವೇದಾ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ ಗಾದೆಗಳನ್ನು ಸಾವಿರ ಮಾತಿನ ಸರದಾರ ಎಂದು ಕರೆಯಲಾಗುತ್ತದೆ. ಗಾದೆಗಳು ನಮ್ಮ ಜೀವನಕ್ಕೆ ದಾರಿದೀಪವಾಗಿದೆ.
ಇತರೆ ಪ್ರಬಂಧಗಳು: