ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ, Kai kesaradare bai mosaru kannada vivarane, kai kesaradare bai mosaru information in kannada
ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ
ಈ ಲೇಖನಿಯಲ್ಲಿ ಸ್ನೇಹಿತರೇ ನಿಮಗೆ ಗಾದೆಯ ವಿವರಣೆಯ ಸಂಪೂರ್ಣವಾದ ಮಾಹಿತಿ ನಿಮಗೆ ನೀಡಿದ್ದೇವೆ. ಅದರ ಅನುಕೂಲವನ್ನು ಪಡೆದುಕೊಳ್ಳಿ.
ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಇದು ಹಿರಿಯರ ಜೀವನದ ಅನುಭವದ ಸಾರವಾಗಿದೆ.
ಜೀವನದಲ್ಲಿ ಕಷ್ಟಪಟ್ಟರೆ ಮಾತ್ರ ಸುಖವಾಗಿ ಬಾಳ್ವೆ ಮಾಡಲು ಸಾಧ್ಯ ಎಂಬುದನ್ನು ಮೇಲಿನ ಗಾದೆಮಾತು ತಿಳಿಸುತ್ತದೆ. ಕಷ್ಟಪಟ್ಟು ಓದಿದರೆ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಬಹುದು. ಒಳ್ಳೆಯ ಅಂಕ ಪಡೆದರೆ ಮುಂದೆ ಜೀವನದಲ್ಲಿ ಉತ್ತಮ ಉದ್ಯೋಗವನ್ನು ಹೊಂದಬಹುದು. ನೆಮ್ಮದಿಯಿಂದ ಜೀವನವನ್ನು ಸಾಗಿಸಬಹುದು.
ನಾವು ಯಾವುದೇ ಕೆಲಸ ಫಲ ಕೊಡಬೇಕೆಂದರೆ ಕಷ್ಟಪಟ್ಟು ಕೆಲಸ ಮಾಡಬೇಕು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಹೇಗೆ ಒಬ್ಬ ಶಿಲ್ಪಿ ತನ್ನ ಪರಿಶ್ರಮದಿಂದ ಒಂದು ಬಂಡೆಗಲ್ಲನ್ನು ಕೆತ್ತಿ ಸುಂದರ ಶಿಲ್ಪ ಕಲಾಕೃತಿಯನ್ನಾಗಿ ಮಾಡುವನೋ ಹಾಗೆಯೇ ನಮ್ಮ ಕೆಲಸವನ್ನು ಗಮನವಿಟ್ಟು ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ವಿದ್ಯಾರ್ಥಿಗಳಿಗೂ ಈ ಮಾತು ಅನ್ವಯಿಸುತ್ತದೆ. ಶಿಕ್ಷಕರು ಮಾಡಿದ ಪಾಠಗಳನ್ನು ಗಮನ ಇಟ್ಟು ಓದಿದರೆ ಒಂದು ಒಳ್ಳೆಯ ಗುರಿ ಸಾಧಿಸಬಹುದು. ಆಲಸಿಗಳಾಗದೆ ಶ್ರಮದಿಂದ ತಮ್ಮ ತಮ್ಮ ಕೆಲಸಗಳನ್ನು ಮಾಡಿಕೊಂಡರೆ ಗಮನೀಯ ಸಾಧನೆಗೆ ನಾಂದಿಯಾಗುತ್ತದೆ. ಜೊತೆಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ಇತರೆ ಪ್ರಬಂಧಗಳು: