ಕನ್ನಡ ನಾಡಿನ ಹಿರಿಮೆ ಪ್ರಬಂಧ Kannada Nadina Hirime Prabandha

ಕನ್ನಡ ನಾಡಿನ ಹಿರಿಮೆ ಕುರಿತು ಪ್ರಬಂಧ Kannada Nadina Hirime Prabandha in Kannada – Kannada Nadina Hirime Essay in Kannada

ಕನ್ನಡ ನಾಡಿನ ಹಿರಿಮೆ ಪ್ರಬಂಧ:

ಈ ಲೇಖನಿಯಲ್ಲಿ ಕನ್ನಡ ನಾಡಿನ ಹಿರಿಮೆಯ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಒದಗಿಸಿದದ್ದೇವೆ. ನಿಮಗೆ ಸಹಾಯವಾಗುವಂತೆ ಮಾಹಿತಿ ಒದಗಿಸಿದ್ದೇವೆ.

ಪೀಠಿಕೆ:

ಕರುನಾಡು ಕಮ್ಮಿತ್ತುನಾಡು ಎಂಬರ್ಥದ ಪದಗಳು ಸೇರಿ ಕರ್ನಾಟಕ ಎಂದಾಗಿದೆ. ಕರುನಾಡು ಎಂದರೆ “ಎತ್ತರದ ಭೂಮಿʼ ಎಂದೂ ʼಕರಿಯ ಮಣ್ಣಿನ ನಾಡುʼ ಎಂದೂ ಹೇಳುತ್ತಾರೆ. ಈ ನಾಡು ಭಾರತದಲ್ಲೇ ಉಜ್ವಲವಾದ ರಾಜಕೀಯ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ ಕ ನಾಡಿಗೆ ಎರಡು ಸಾವಿರ ವರ್ಚಗಳ ಇತಿಹಾಸವಿದೆ.

ವಿಷಯ ವಿವರಣೆ;

ಈ ಹಿಂದೆ ಕರ್ನಾಟಕವನ್ನು ಅನೇಕ ರಾಜ್ಯ ಮನೆತನಗಳು ಸಂಸ್ಥಾನಗಳು ಆಳ್ವಿಕೆ ನಡೆಸಿದೆ. ಕ್ರಿ. ಪೂ. 3ನೇ ಶತಮಾನದಲ್ಲಿದ್ದ ಮೌರ್ಯರ ಅರಸ ಅಶೋಕನ ಅಳ್ವಿಕೆಗೆ ಕರ್ನಾಟಕದ ಬಹುಭಾಗ ಬಳಪಟ್ಟಿದ್ದರೂ ಸ್ವಾತಂತ್ರ್ಯವಾಗಿ ಕರ್ನಾಟಕವನ್ನು ಆಳಿದ ಮೊದಲ ಕನ್ನಡಿಗ ದೂರೆಗಳು ಕದಂಬರು.

ಇವರು ಕ್ರಿ. ಶ. 345 ರಿಂದ ಕ್ರಿ.ಶ 525ರವರೆಗೆ ಆಳಿದರು ಇವರ ನಂತರ ಕ್ರಮವಾಗಿ ಗಂಗರು, ಬಾದಾಮಿ ಚಾಳುಕ್ಯರು, ಯಾದವರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ, ಬಹುಮನಿ ಸುಲ್ತಾನರು, ಅದಿಲ್‌ ಷಾಹಿಗಳು, ಕೆಳದಿ ಅರಸರು, ಮೈಸೂರು ಅರಸರು ಈ ನಾಡನ್ನು ಆಳ್ವಕೆ ಮಾಡಿದ ಪ್ರಮುಖ ರಾಜಮನೆತನಗಳು ಹಾಗೇ ನಮ್ಮ ಕನ್ನಡಿನ ಹಿರಿಮೆ ಹೆಚ್ಚಿಸುವುದಕ್ಕೆ ನಮ್ಮೆಲ್ಲರ ಹೆಮ್ಮೆಯ ದಿನ ನವೆಂಬರ್ ೧, ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತೆವೆ. ಪ್ರತಿ ಬಾರಿ ಕನ್ನಡ ರಾಜ್ಯೋತ್ಸವ ಬಂದಾಗ ನಾವೆಲ್ಲಾ ಎಚ್ಛೆತ್ತುಕೊಂಡು ಕನ್ನಡ ಉಳಿಸಿ ಬೆಳೆಸಿ ಅಂತೆಲ್ಲ ಹೇಳುತ್ತೇವೆ ಆದರೆ ಪ್ರತಿ ಕ್ಷಣವೂ ನಮ್ಮ ನಾಡು-ನುಡಿಗೆ ಜೀವ ತುಂಬಿ , ನಮ್ಮಲ್ಲಿ ಭಾಷಾಭಿಮಾನ ಕಡಿಮೆಯಾಗದಂತೆ ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯ . ಹೀಗೆ ಹೊರದೇಶದಲ್ಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಂಡು ಹೋಗುವುದು ನಮ್ಮ ನಾಡಿನ ಹಿರಿಮೆಯಾಗಿದೆ.

ನಮ್ಮ ಕನ್ನಡ ನಾಡಿನಲ್ಲಿ ರಾಜಮನೆತನಗಳು ಸಾಹಿತ್ಯ, ಕಲೆ, ವಸ್ತುಶಿಲ್ಪ, ಸಂಸ್ಕೃತಿಯನ್ನು ಶ್ರೇಷ್ಠ ಮಟ್ಟದಲ್ಲಿ ಕೊಡುಗೆಯನ್ನು ನೀಡಿ ಈ ನಾಡನ್ನು ಶ್ರೀಮಂತಗೊಳಿಸಿದೆ. ನಂತರದ ಯಕ್ಷಗಾನ, ಭರತನಾಟ್ಯ ಮತ್ತು ಜಾನಪದ ನೃತ್ಯಗಳು ನಮ್ಮ ಕನ್ನಡ ನಾಡಿನ ವಿವಿಧ ಕಲೆಯನ್ನು ನೆನಪಿಸಿತು ಮತ್ತು ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿದಿತ್ತು.

ಕರ್ನಾಟಕವನ್ನು ಹಿಂದೆ ಮೈಸೂರುರಾಜ್ಯ ವೆಂದು ಕರೆಯುತ್ತಿದ್ದರು. 1973 ನವೆಂಬರ್‌ 1 ರಂದು ಮೈಸೂರು ಎನ್ನುವ ಹೆಸರು ಕರ್ನಾಟಕ ಎಂದು ಬದಲಾಯಿಸಲಾಗಿದೆ. ಇಲ್ಲಿಯ ಆಡಳಿತ ಹಾಗೂ ಪ್ರಾದೇಶಿಕ ಭಾಷೆ ಕನ್ನಡ, ಕನ್ನಡ ಭಾಷೆಗೆ ತುಂಬ ಪ್ರಾಚೀನವಾದ ಇತಿಹಾಸವಿದೆ, ಈ ಭಾಷೆಯ ಕೆಲವು ಪದಗಳು ವೇದಗಳಲ್ಲಿಯೂ ಕ್ರಿ.ಶ. ಎರಡನೆ ಶತಮಾನದ ಗ್ರೀಕ್‌ ನಾಟಕದಲ್ಲಿಯೂ ದೊರೆಯುತ್ತದೆ. ಕನ್ನಡದ ಮೊದಲ ಶಾಸನ ʼಹಲ್ಮಡಿ ಶಾಸನʼವಾಗಿದೆ.

ಕರ್ನಾಟಕದಲ್ಲಿ ಅನೇಕ ನದಿಗಳು ಹುಟ್ಟಿ ಹರಿಯುತ್ತವೆ. ಅಲ್ಲದೆ ನೆರೆ ರಾಜ್ಯಗಳಲ್ಲಿ ಹುಟ್ಟಿ ಹರಿಯುತ್ತಿದೆ. ವ್ಯವಸಾಯ ಹಾಗೂ ವಿದ್ಯುತ್‌ ಒದಗಿಸುವಲ್ಲಿ ಸಹಕಾರಿಯಾಗಿದೆ. ಕಾವೇರಿ, ತುಂಗಭದ್ರಾ, ಮಲಪ್ರಭಾ, ಕಬಿನಿ, ಕೃಷ್ಣ ಘಟಪ್ರಭಾ, ಭೀಮಾ, ಹೇಮಾವತಿ ನದಿಗಳು ಪ್ರಮುಖವಾಗಿವೆ.

ರಾಜ್ಯವು ಸಸ್ಯವರ್ಗ ಮತ್ತು ಪ್ರಾಣಿವರ್ಗದ ಸಂಪದ್ದರಿತ ಪರಂಪರೆಯನ್ನೂ ಪಡೆದಿದೆ. ಐದು ರಾಷ್ಟ್ರೀಯ ಉದ್ಯಾನವನಗಳನ್ನು ಸುಮಾರು 20 ಅರಣ್ಯಧಾಮಗಳನ್ನು ಹೊಂದಿದ್ದು. ಪಶ್ಚಿಮ ಘಟ್ಟಗಳ ಬೆಟ್ಟದ ಸಾಲು ನಮ್ಮ ಕನ್ನಡ ನಾಡು.

ಪ್ರವಾಸಿ ತಾಣಗಳು ರಮಣೀಯ ದೃಶ್ಯಗಳಿಂದ ಅದ್ಬುತಾವಾದ ದೇವಾಲಯಗಳು ಹಾಗೂ ಚಾರಿತ್ರಿಕ ಸ್ಮಾರಕಗಳು ಕರ್ನಾಟಕದಲ್ಲಿ ಕಂಗೊಳಿಸುತ್ತದೆ. ಹಾಸನ ಜಿಲ್ಲೆಯಲ್ಲಿ ಇರುವ ಬೇಲೂರು ಹಳೇಬೀಡು ಶಿಲ್ಪ ಕಲೆಗೆ ಖ್ಯಾತಿ ಪಡೆದಿದೆ. ಮಂಗಳೂರು, ಮಡಿಕೇರಿ, ಉಡುಪಿ,ಚಿತ್ರದುರ್ಗ,ಬೀದರ್‌, ಗುಲ್ಬರ್ಗ, ಕೋಲಾರ, ಉತ್ತರ ಕನ್ನಡ, ಬೆಳಗಾಂ, ತುಮಕೂರು ಈ ಎಲ್ಲಡೆಯೂ ಪ್ರಾಕೃತಿಕ, ಐತಿಹಾಸಿಕ, ಸಂಸ್ಕೃತಿಕ ತಾಣಗಳಿದ್ದು ಆಕರ್ಷಣೆಯ ಕೇಂದ್ರಗಳಾಗಿದೆ.

ಒಡೆಯರ ಆಳ್ವಿಕೆಯ ಕೇಂದ್ರವಾಗಿದ್ದ ಮೈಸೂರು ಅರಮನೆಗಳ ಹಾಗೂ ಉದ್ಯಾನಗಳ ಕೇಂದ್ರವಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ, ತುಂಗಭದ್ರಾ ನದಿ ದಂಡೆಯಲ್ಲಿದೆ. ಇದರ ಅವಶೇಷಗಳು ಇವೆ.ಇಲ್ಲಿಯ ವಿರೂಪಾಕ್ಷ ದೇವಾಲಯವಿದೆ. ವಿಜಯನಗರ ಸಾಮ್ರಾಜ್ಯದ ವೈಭವವನ್ನು ಇಲ್ಲಿಯ ಒಂದೂಂದು ಕಲ್ಲಿನ ಕಟ್ಟಡಗಳು ಪ್ರತಿಬಿಂಬಿಸುತ್ತವೆ.

ಬಾಗಲಕೋಟೆ ಜಿಲ್ಲೆಯ ಬಾದಮಿ ಐಹೊಳೆ, ಪಟ್ಟದಕಲ್ಲು, ಕೂಡಲ ಸಂಗಮ ಇಲ್ಲಿಯ ಪ್ರಮುಖ ಸ್ಥಳಗಳು ಇವೆ.

ಉಪಸಂಹಾರ:

ನಮ್ಮ ಕನ್ನಡ ನಾಡಿನ ಹಿರಿಮೆಯನ್ನು ಜಗತ್ತಿಗೇ ತಿಳಿಸಬೇಕು. ನಮ್ಮ ಜನರಲ್ಲಿ ನಮ್ಮ ನಾಡಿನ ಬಗ್ಗೆ ಗೌರವ ಮುಡಿಸುವುದು. ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಮೂಲಕ ಅವರಿಗೆ ನಮ್ಮ ನಾಡಿ ಬಗ್ಗೆ ಅರಿವು ನೀಡುವುದು, ಹಾಗೇ ಜನಸಾಮಾನ್ಯರಲ್ಲಿ ಇದರ ಬಗ್ಗೆ ಅರಿವು ಮುಡಿಸುವುದು.

FAQ

ಕನ್ನಡ ನಾಡಿನ ಮೊದಲ ರಾಜವಂಶ ಯಾವುದು ?

ಕದಂಬ.

ಕನ್ನಡ ನಾಡಿನ ಮೊದಲ ದೊರೆ ಯಾರು ?

ಮರ್ಯೂರ ವರ್ಮ.

ಇತರೆ ಪ್ರಬಂಧಗಳು:

ಭಾರತೀಯ ಸಂಸ್ಕೃತಿ ಬಗ್ಗೆ ಪ್ರಬಂಧ

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ

ಕನ್ನಡ ಭಾಷೆಯ ನುಡಿಮುತ್ತುಗಳು

Leave a Comment