ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ:

ಈ ಲೇಖನಿಯ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಅದರ ಮಹತ್ವವನ್ನು ಸಂಪೂರ್ಣವಾಗಿ ಎಲ್ಲರಿಗೂ ಮಾಹಿತಿಯನ್ನು ನೀಡಿದೆ. ಇದರಲ್ಲಿ ಸಂಗ್ರಹಿಸಲಾದ ಮಾಹಿತಿಯು ಎಲ್ಲರಗೂ ಸಹಾಯವಾಗುತ್ತದೆ.

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ
ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪೀಠಿಕೆ:

ಪ್ರಪಂಚದ ಅತೀ ದೊಡ್ಡ ಸಫಲ ಜನತಂತ್ರ ಸಂವಿಧಾನವೆಂಬ ಅಭಿಧಾನ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆತ್ಮವೇ ಪ್ರಜೆಗಳು.ಅವರ ಅಭಿಪ್ರಾಯ ಬಲದಿಂದ ರೂಪುಗೊಂಡ ಪಕ್ಷಗಳೇ ದೇಶದ ಭವಿಷ್ಯ ರೊಪಿಸುವುದು.ದೇಶದ ಹಿತದೃಷ್ಟಿಯಿಂದ ಚುನಾವಣಾ ಅಯೋಗವು ಕೂಡ ಹಲವು ವಿನೂತನ ಕಾರ್ಯಗಳನ್ನು ಯೋಜಿಸಿಕೊಂಡು ಮತದಾರರನ್ನು ಮತಗಟ್ಟೆಗೆ ಸೆಳೆಯಲು ಪ್ರಯತ್ನಿಸುತ್ತಿದೆ.ಮತದಾನ ಮಾಡಿದ ನಂತರದ ಭಾವನೆಯು ಜವಾಬ್ದಾರಿಯುತ ನಾಗರಿಕ ಎಂಬ ಹೆಮ್ಮೆಯ ಭಾವವನ್ನು ತುಂಬುತ್ತದೆ.

ಪ್ರಜಾಪ್ರಭುತ್ವದಲ್ಲಿ ಮತದಾರನ ಪಾತ್ರ:

೧.ಜನರನ್ನು ಮತ ಚಲಾಯಿಸುವಂತೆ ಪ್ರೇರೇಪಿಸಬೇಕಾದ ದಿನಗಳು ಹೋಗಿವೆ.ಸಾರ್ವಜನಿಕ ಚುನಾವಣೆಯ ಮತ ಹಂಚಿಕೆಯು ಹಿಂದಿನ ಚುನಾವಣೆಗಿಂತ ಹೆಚ್ಚಾಗಿದೆ.

೨.ಮತದಾನ ಮಾಡಿದ ನಂತರ ಭಾವನೆಯು ಜವಾಬ್ದಾರಿಯುತ ನಾಗರಿಕ ಎಂಬ ಹೆಮ್ಮಯ ಭಾವವನ್ನು ತುಂಬುತ್ತದೆ.

೩.ಭಾರತದ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ನಾವು ಗೌರವಿಸಬೇಕು.ಯುವಕರು 18 ವರ್ಷ ತುಂಬಿದ ಕೂಡಲೇ ತಮ್ಮ ಮತದಾನದ ಹಕ್ಕನ್ನ ಚಲಾಯಿಸಲು ಉತ್ಸುಕರಾಗಿದ್ದಾರೆ.

೪.ಲೋಕಸಭೆ ಚುನಾವಣೆ ಮತದಾನವಾಗಿದೆ.ಮತದಾರರ ಜಾಗೃತಿ ಕಾರ್ಯಕ್ರಮವು ತನ್ನ ಧ್ಯೇಯದಲ್ಲಿ ಯಶಸ್ವಿಯಾಗಿದೆ.

೫.ಹಲವು ರಾಷ್ಟ್ರಗಳ ಪ್ರಜ್ಞಾವಂತ ಕಾತುರದಿಂದ ನಮ್ಮಷ್ಟೇ ಕುತೂಹಲದಿಂದ ಕಾಯುತ್ತಿರುವ ಕಾರಣ ಹಿಂದಿನ ಚುನಾವಣೆಯಲ್ಲಿ ಮತದಾನ ತನ್ನ ಕೈ ಬೆರಳ ತುದಿಯಿಂದ ಇತಿಹಾಸ ಬದಲಿಸಿ ಪ್ರಜೆಗಳೇ ಪ್ರಭುಗಳು ಅನ್ನೋದನ್ನ ಸಾಬೀತು ಪಡಿಸಿದ್ದೆ ಸಾಕ್ಷಿ

ಪ್ರಜಾಪ್ರಭುತ್ವದಲ್ಲಿ ಮತದಾರನ ಪ್ರಾಮುಖ್ಯತೆ:

೧.ಸಾಮಾನ್ಯ ಜನರು ಸರ್ಕಾರದ ಕಾರ್ಯನಿರ್ವಹಣೆಯ ಮೇಲೆ ಪರೋಕ್ಷ ನಿಯಂತ್ರಣವನ್ನು ಹೊಂದಿರುತ್ತಾರೆ.

೨.ಇದು ಸಾಮಾನ್ಯ ಜನರಿಗೆ ತಮ್ಮ ಆಡಳಿತಗಾರರನ್ನು ಆಯ್ಕೆ ಮಾಡಲು ಅಧಿಕಾರ ನೀಡುತ್ತದೆ.

೩.ದಬ್ಬಾಳಿಕೆಯ ಸರ್ಕಾರಕ್ಕೆ ಅವಕಾಶವಿಲ್ಲ.ಸರ್ಕಾರದ ಸಾಧನೆಯಿಂದ ತೃಪ್ತರಾಗದಿದ್ದರೆ ಮುಂಬರುವ ಚುನಾವಣೆಯಲ್ಲಿ ಸರ್ಕಾರವನ್ನು ಬದಲಾಯಿಸುವ ಅಧಿಕಾರ ಸಾಮಾನ್ಯರಿಗೆ ಇದೆ.

೪.ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಮತವನ್ನು ಸಮಾನವೆಂದು ಪರಿಗಣಿಸಲಾಗುತ್ತದೆ.

೫.ನಮಗೆ ತಿಳಿದಿರುವ ಬ್ಯಾಲೆಟ್‌ ಪೇಪರ್‌ ಕೇವಲ ಕಾಗದವಲ್ಲ.ಇದು ಅತ್ಯಂತ ಶಕ್ತಿಶಾಲಿ ಆಯುಧವಾಗಿದೆ.

೬.ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತುವ ಮತ್ತು ಸಮಾಜವಾಗಿ ಒಗ್ಗೂಡುವ ಶಕ್ತಿ ಜನರಿಗಿದೆ.

೭.ಒಂದರ್ಥದಲ್ಲಿ ಚುನಾವಣೆ ಒಂದು ರೀತಿಯ ಪರೀಕ್ಷೆ,ಉತ್ತಮ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳಿಗೆ ಕಠಿಣ ತಯಾರಿ ನಡೆಸುತ್ತಾರೆ.ಕಷ್ಟಪಟ್ಟು ಕೆಲಸ ಮಾಡುವವರು ಉತ್ತಮ ಅಂಕಗಳನ್ನು ಪಡೆಯುತ್ತಾರೆ. ಆದರೆ ತಮ್ಮ ಪುಸ್ತಕಗಳನ್ನು ಎಂದಿಗೂ ಕಾಳಜಿ ವಹಿಸದವರು ವಿಫಲರಗುತ್ತಾರೆ.ಚುನಾವಣೆಯ ವಿಷಯದಲ್ಲೂ ಇದು ನಿಜ.

೮.ಒಳ್ಳೆಯ ಮತ್ತು ಪ್ರಾಮಾಣಿಕ ನಾಯಕರಿದ್ದಾರೆ.ಅವರು ಜನರ ಕಲ್ಯಾಣಕ್ಕಾಗಿ ಕಾಳಜಿ ವಹಿಸುತ್ತಾರೆ.ಅವರು ತಮ್ಮ ಮತದಾರರನ್ನು ಎಂದಿಗೂ ಮರೆಯುವುದಿಲ್ಲ.ಅದ್ದರಿಂದ ಅವರು ಹೆಚ್ಚು ಕಷ್ಟವಿಲ್ಲದೆ ಆಯ್ಕೆಯಾಗುತ್ತಾರೆ.

ಪ್ರಜಾಪ್ರಭುತ್ವದಲ್ಲಿ ಮತದಾರರ ಮಹತ್ವ:

ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಹಾಗೂ ಮುಕ್ತ ಆಡಳಿತ ನಡೆಸುವಂತಾಗಲು ಮತದಾರರ ನೀಡುವ ಒಂದೊಂದು ಮತಗಳು ಅವಶ್ಯವಾಗಿವೆ ಎಂದು ಗ್ರಾಮ ಲೆಕ್ಕಾಧಿಕಾರಿ ವೀರೇಶ ಎತ್ತಿನಮನಿ ಹೇಳಿದರು.ಈ ಮೂಲಕ ಸಾರ್ವಜನಿಕರಲ್ಲಿ ರಾಷ್ಟ್ರೀಯ ಪ್ರಜ್ಞೆ, ಮತದಾನದ ಪಾವಿತ್ರ್ಯತೆ, ಉತ್ತಮ ಅಭ್ಯರ್ಥಿಗಳ ಆಯ್ಕೆ ಮಾಡುವ ವಿವೇಚನೆ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಯಾರದೋ ಮಾತಿಗೆ ಕಟ್ಟುಬಿದ್ದು ಮತವನ್ನು ಮೀಸಲಿಡದೇ ಸ್ವಂತ ವಿವೇಚನೆಯಿಂದ ಮತ ಚಲಾಯಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುವಲ್ಲಿ ಸಾರ್ವಜನಿಕರಿಗೆ ಮತದಾನ ಒಂದು ಅಸ್ತ್ರವಿದ್ದಂತೆ ಎಂದು ಹೇಳಿದರು ದೇಶದ ಹಿತದೃಷ್ಟಿಯಿಂದ ಚುನಾವಣಾ ಅಯೋಗವು ಕೂಡ ಹಲವು ವಿನೂತನ ಕಾರ್ಯಗಳನ್ನು ಯೋಜಿಸಿಕೊಂಡು ಮತದಾರರನ್ನು ಮತಗಟ್ಟೆಗೆ ಸೆಳೆಯಲು ಪಯತ್ನಿಸುತ್ತಿದೆ. ಮುಖ್ಯ ಚುನಾವಣಾಧಿಕಾರಿ ಯಾಗಿದ್ದ ಟಿ. ಎನ್.ಶೇಷನ್‌ ರವರು ಮಾಡಿಹೋದ ಬದಲಾವಣೆಯು ಇಂದಿಗೂ ಕೂಡ ಜನಹಿತಕ್ಕಾಗಿ ರೂಪಿಸಿದ್ದು ನೆನೆಯಲೇಬೇಕಿದೆ.ಮತದಾನ ನಮ್ಮ ಪ್ರಥಮ ಕರ್ತವ್ಯವಾಗಿದ್ದು ಬದ್ದತೆಯಿಂದ ಆ ಕಾರ್ಯದಲ್ಲಿ ಭಾಗಿಯಾಗೋದು ನಮ್ಮ ಪ್ರಥಮ ಆದ್ಯತೆಯಾಗಬೇಕು.

ಉಪಸಂಹಾರ:

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಚುನಾವಣಾ ಸಂದರ್ಭದಲ್ಲಿ ಮತ ಚುನಾವಣೆ ಅಗುತ್ತದೆ.ಪ್ರತಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಚುನಾವಣೆಗಳು ನೆಡೆಯುತ್ತದೆ.ಹದಿನೆಂಟು ವರ್ಷ ತುಂಬಿದ ಎಲ್ಲರಿಗೂ ಮತದಾನದ ಹಕ್ಕಿದೆ.ಪ್ರಜಾಪ್ರಭುತ್ವದ ಪಾತ್ರ, ಪ್ರಜಾಪ್ರಭುತ್ವದ ಪ್ರಾಮುಖ್ಯತೆಗಳನ್ನು ನೋಡಬಹುದು.ಭಾರತದ ಜನರು ತಮ್ಮ ಪ್ರತಿನಿಧಿಗಳನ್ನು ಸರ್ಕಾರವನ್ನು ರಚಿಸುತ್ತಾರೆ.ಆದ್ದರಿಂದ,ಚುನಾವಣೆಯು ಅತ್ಯಂತ ಮಹತ್ವದ್ದಾಗಿದೆ.

ಇತರ ಪ್ರಬಂಧಗಳು:

ಪುಸ್ತಕಗಳ ಮಹತ್ವ ಪ್ರಬಂಧ

ಪರಿಸರ ಸಂರಕ್ಷಣೆ ಪ್ರಬಂಧ

ಸ್ವಚ್ಛ ಭಾರತ ಅಭಿಯಾನ ಪ್ರಬಂಧ

Leave a Comment