ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು, ಅರ್ಥ ವಿವರಣೆ,

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು, ಅರ್ಥ ವಿವರಣೆ, tumbida koda tulukuvudilla gade vistarane in kannada

ತುಂಬಿದ ಕೊಡ ತುಳುಕುವುದಿಲ್ಲ

ಈ ಲೇಖನಿಯಲ್ಲಿ ತುಂಬಿದ ಕೊಡ ತುಳುಕುವುದಿಲ್ಲ ಎಂಬ ಗಾದೆಯನ್ನು ವಿವರಿಸಿದ್ದೇನೆ. ಇದರ ಸಹಾಯವನ್ನು ಪಡೆದುಕೊಳ್ಳಿ.

ಇದು ಒಂದು ಅ‍ರ್ಥಪೂರ್ಣವಾದ ಗಾದೆ ಮಾತಾಗಿದೆ. ಇರುವ ಒಂದೇ ಜೀವನದಲ್ಲಿ ಒಳ್ಳೇಯದಷ್ಟೆ ಮಾಡುವುದು ಕಾಯಕವಾಗಿರಬೇಕು. ಪ್ರಪಂಚದಲ್ಲಿ ಅರಿತವನು ಕ್ಷಮೆ, ಸದ್ಗುಣಗಳನ್ನು ಕಲಿತು ನೆಮ್ಮದಿಯಿಂದ ಬಾಳಲು ಪ್ರಯತ್ನಿಸುತ್ತಾನೆ. ಅರೆಬರೆ ಜ್ಷಾನವು ತುಂಬಾ ಅಪಾಯಕಾರಿಯಾದದು. ಪೂರ್ತಿ ಜ್ಞಾನವನ್ನು ಪಡೆವನು ತನ್ನನ್ನು ಬಣ್ಣಿಸದೆ ಪರರಿಗೆ ಉಪಕಾರಿಯಾಗಿ ಬದುಕುತ್ತಾನೆ. ಈ ಗಾದೆಮಾತಿನ ಅರ್ಥವು ಯಾವುದೇ ಒಬ್ಬ ಮನುಷ್ಯರಿಗೆ ಅನ್ವಯಿಸಿದರೆ ಯಾವುದೇ ವಿಚಾರ ಪೂರ್ತಿ ತಿಳಿದುಕೊಂಡಿರುವವರು ತುಂಬಿದ ಕೊಡದಂತೆ ತುಳುಕದೆ ಶಬ್ದ ಮಾಡದೇ ಸಮಾಧಾನದಿಂದ ವಿಷಯವನ್ನು ತಿಳಿಸುತ್ತಾನೆ. ಪೂರ್ಣ ಪಾಂಡಿತ್ಯವನ್ನು ಹೊಂದಿರುವವನು ನಿಜವಾದ ವಿದ್ಯಾವಂತರಾದವರು (ನೀತಿವಂತ ಪ್ರಾಜ್ಞರಿಗೆ) ಅಹಂಕಾರ , ಗರ್ವ, ಸೊಕ್ಕು ಇರುವುದಿಲ್ಲ. ಯಾರು ಏನೇ ಕೇಳಿದರೂ ಸಮಾಧಾನದಿಂದ ಉತ್ತರ ಕೊಡುತ್ತಾರೆ. ಅರ್ಧ ತುಂಬಿದ ಕೊಡ ಸೊಕ್ಕನ್ನು ಬಿಂಬಿಸಿದರೆ, ತುಂಬಿದ ಕೊಡ ಪೂರ್ಣ ಪಾಂಡಿತ್ಯ ಮತ್ತು ಔದಾರ್ಯತನವನ್ನು ಹೊಂದಿರುವ ವ್ಯಕ್ತಿತ್ವನ್ನು ಬಿಂಬಿಸುತ್ತದೆ. ಅಗತ್ಯ ಬಿದ್ದಾಗ ಮಾತ್ರ ನಮ್ಮ ವಿದ್ಯೆಯನ್ನು, ಮಾತನ್ನು ಪ್ರದರ್ಶಿಸಬೇಕು ಎಂಬುದೇ ಈ ಗಾದೆ ಮಾತಿನ ಒಳ ಅರ್ಥವಾಗಿದೆ.

ಇತರೆ ಪ್ರಬಂಧಗಳು:

100+ ಕನ್ನಡ ಪ್ರಬಂಧಗಳು

ಕೈ ಕೆಸರಾದರೆ ಬಾಯಿ ಮೊಸರು ಗಾದೆ ಮಾತು ವಿವರಣೆ

ಆರೋಗ್ಯವೇ ಭಾಗ್ಯ ಗಾದೆ ಮಾತಿನ ವಿಸ್ತರಣೆ

Leave a Comment