ಕನ್ನಡದ ಬಗ್ಗೆ ಪ್ರಬಂಧ | Kannadada Bagge Prabandha in Kannada

ಕನ್ನಡದ ಬಗ್ಗೆ ಪ್ರಬಂಧ, Kannada Bhashe Bagge Prabandha in Kannada, Kannada Bhashe Bagge Essay in Kannada, kannada bhashe essay Kannadada Bagge Prabandha in Kannada

ಕನ್ನಡದ ಬಗ್ಗೆ ಪ್ರಬಂಧ

ಕನ್ನಡದ ಬಗ್ಗೆ ಪ್ರಬಂಧ Kannada Bhashe Bagge Prabandha in Kannada

ಈ ಲೇಖನಿಯಲ್ಲಿ ಕನ್ನಡದ ಬಗ್ಗೆ ನಿಮಗೆ ಸಹಾಯವಾಗುವಂತೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

ಪೀಠಿಕೆ:

ಕನ್ನಡ ಭಾಷೆ ಕೇವಲ ಒಂದು ಭಾಷೆಯಲ್ಲ ಅದು ತನ್ನದೇ ಆದ ಭವ್ಯ ಇತಿಹಾಸ ಪರಂಪರೆಯನ್ನು ಹೊಂದಿದೆ, ಭಾರತ ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯನ್ನು ಕರ್ನಾಟಕದಲ್ಲಿ ಮಾತೃ ಭಾಷೆಯಾಗಿ ಬಳಸುತ್ತಾರೆ, ಮನುಷ್ಯ ಮನುಷ್ಯರ ನಡುವೆ ಭಾವನೆಗಳನ್ನು ಹಂಚಿಕೊಳ್ಳಲು ಇರುವ ಏಕೈಕ ಮಾರ್ಗ ಎಂದರೆ ಭಾಷೆ.

ಕನ್ನಡ ಲಿಪಿಯಿಂದ ವಿಕಸನಗೊಂಡ ಕನ್ನಡ ಸಾಹಿತ್ಯವು 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ, ಇದು ಯಾವುದೇ ದ್ರಾವಿಡ ಭಾಷೆಗೆ ಅತ್ಯುನ್ನತವಾಗಿದೆ ಎಂದು ಪರಿಗಣಿಸಲಾಗಿದೆ.

ವಿಷಯ ವಿವರಣೆ

ನಮ್ಮ ರಾಜ್ಯದ ಭಾಷೆ ಕನ್ನಡ. ಅದು ನಮ್ಮ ಮಾತೃಭಾಷೆ, ಕನ್ನಡ ಬಾಷೆಗೆ ಸಹಸ್ರಾರು ವರ್ಷಗಳ ಇತಿಹಾಸವಿದೆ.

ಕನ್ನದ ಭಾಷೆಯು ತನ್ನ ನೆಲೆ ಕಂಡುಕೊಂಡಿದ್ದು ಕದಂರ ಆಳ್ವಿಕೆಎಯ ಕಾಲದಲ್ಲಿ, ಕನ್ನಡದ ಮೊದಲ ದೊರೆಯೆಂದೇ ಖ್ಯಾತಿ ಪಡೆದ ಮಯೂರ ವರ್ಮನ ಆಳ್ವಿಕೆಯ ಕಾಲದಲ್ಲಿ ಕನ್ನಡ ತನ್ನ ತಲೆ ಎತ್ತಿತು.

ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ.

ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ.

ಈ ನೆಲದ ಮೇಲೆ ಪ್ರಭಾವ ಬೀರಿದ ಪ್ರಾದೇಶಿಕ ವ್ಯತ್ಯಾಸಗಳಿಗೆ ಅನುಗುಣವಾಗಿ ಭಾಷೆಯು ವಿವಿಧ ರೂಪ ಹಾಗೂ ಶೈಲಿಯ ಉಪಭಾಷೆ ಅಥವಾ ಪ್ರಾಂತೇಯ ಭಾಷೆಗಳನ್ನು ಪಡೆದುಕೊಂಡಿದೆ.

ಕರ್ನಾಟಕದಲ್ಲಿ ಬಳಸಲಾಗುವ ಕನ್ನಡ ಭಾಷೆಯನ್ನು ದೇಶದ ಪ್ರಮುಖ ಭಾಷೆಗಳಲ್ಲಿ ಒಂದಾಗಿ ಭಾರತೀಯ ಸಂವಿಧಾನವು ಗುರುತಿಸಿದೆ. ಕರ್ನಾಟಕದ ಬಹುತೇಕ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಗೋವಾ, ಹಾಗೂ ದಮನ್ ಹಾಗೂ ದಿಯುಗಳಲ್ಲಿ ಕನ್ನಡವನ್ನು ಮಾತೃ ಭಾಷೆಯಾಗಿ ಬಳಸುವ ಗಣನೀಯ ಸಂಖ್ಯೆಯ ಜನರಿದ್ದಾರೆ.ಪ್ರಸ್ತುತದಲ್ಲಿ, ಕನಿಷ್ಠ ಮೂರು ಪ್ರಾದೇಶಿಕ ಉಪಭಾಷೆಗಳಾದ, ಮೈಸೂರು ಕನ್ನಡ, ಧಾರವಾಡ-ಕನ್ನಡ ಹಾಗೂ ಮಂಗಳೂರು-ಕನ್ನಡಗಳ ಜನಪ್ರಿಯವಾದ ಭಾಷಾ ಶೈಲಿಗಳನ್ನು, ಕ್ರಮವಾಗಿ ಮೂರು ಸಾಂಸ್ಕೃತಿಕ ಕೇಂದ್ರಗಳಾದ ಮೈಸೂರು, ಧಾರವಾಡ ಹಾಗೂ ಮಂಗಳೂರು ಪ್ರದೇಶಗಳಲ್ಲಿ ಮಾತನಾಡಲಾಗುತ್ತದೆ.

ಕರುನಾಡು ಸ್ವರ್ಗದ ಸೀಮೆ-ಕಾವೇರಿ ಹುಟ್ಟಿದ ನಾಡು. ಕಲ್ಲಲ್ಲಿ ಕಲೆಯನು ಕಂಡ-ಬೇಲೂರ ಶಿಲ್ಪದ ಬೀಡು. ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ ಕನ್ನಡ. ವಿಶ್ವಖ್ಯಾತಿಯ ವಿಶ್ವೇಶ್ವರಯ್ಯ ಜನಿಸಿದ ಈ ನಾಡು. ಇದೆ ನಾಡು- ಇದೆ ಭಾಷೆ ಎಂದೆಂದೂ ನನ್ನದಾಗಿರಲಿ ಎಂಬ ಎಸ್.ಪಿ.ಬಿ ಅವರ ಗಾಯನದಂತೆ ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಎಂಬುದು ನಮ್ಮ ಆಶಯ. ನಾವು ನಮ್ಮ ಕನ್ನಡದ ಸುಗ್ಗಿಯನ್ನು ಕೇವಲ ನವೆಂಬರ್ ಮಾಸದಲ್ಲಿ ಮಾತ್ರವಲ್ಲ ಪ್ರತಿ ದಿನ ಆಚರಿಸಬೇಕು.

ಕನ್ನಡ ಭಾಷೆಯ ಇತಿಹಾಸ

ಕ್ರಿಸ್ತಪೂರ್ವ 3ನೇ ಶತಮಾನದಲ್ಲೂ ಪ್ರಚಲಿತದಲ್ಲಿದ್ದ ಭಾಷೆ ಕನ್ನಡ. ಕನ್ನಡ ಭಾಷೆಯ ಅಸ್ತಿತ್ವದ ಪುರಾವೆಗಳು ಭಾರತದಾದ್ಯಂತ ಮತ್ತು ಕೆಲವೊಮ್ಮೆ ವಿದೇಶಗಳಲ್ಲಿ ಸಾಕಷ್ಟು ಮತ್ತು ಹರಡಿಕೊಂಡಿವೆ.

ಉದಾಹರಣೆಗೆ, ಅಶೋಕನ ಶಾಸನದಲ್ಲಿ ‘ಇಸಿಲ’ ಎಂಬ ಪದವು ಕಂಡುಬಂದಿದೆ, ಅದು ಕನ್ನಡ ಭಾಷೆಯಿಂದ ಬಂದ ಪದ ಎಂದು ನಂತರ ದೃಢಪಡಿಸಲಾಯಿತು. ಈ ಕುತೂಹಲಕಾರಿ ಅಶೋಕನ ಶಾಸನದಲ್ಲಿ ಹಲವಾರು ಕನ್ನಡ ಪದಗಳು ಕಂಡುಬಂದಿವೆ.

ಮುಂದೆ, ಟಾಲೆಮಿಯ ಪುಸ್ತಕ, ಕರ್ನಾಟಕದ ಸ್ಥಳಗಳು ಮತ್ತು ಅವರ ಭಾಷೆಯ ಬಗ್ಗೆ ಮಾತನಾಡುವ ಭೂಗೋಳದಿಂದ ಭಾಷೆಗೆ ಸಂಬಂಧಿಸಿದ ವಿವರಗಳನ್ನು ನಾವು ತಿಳಿದಿದ್ದೇವೆ.

ಉಪಸಂಹಾರ

ಕನ್ನಡಿಗರಾದ ನಾವು ಕನ್ನಡ ಭಾಷೆಯನ್ನು ಬಳಸೋಣ. ಕನ್ನಡ ಭಾಷೆಯನ್ನು ಬೆಳೆಸೋಣ.ಕನ್ನಡಿಗರಾದ ನಾವು ಪ್ರತಿ ಹೆಜ್ಜೆಯಲ್ಲೂ ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಕನ್ನಡ ಎಂದು ಎಂದು ಬರಿ ಬಾಯಿ ಮಾತಿಗೆ ಹೇಳುವ ನಾವು ನಮ್ಮನ್ನು ಪ್ರಶ್ನಿಸಿಕೊಳ್ಳಬೇಕು.

ಕನ್ನಡ ತಾಯಿಯ ಹೆಮ್ಮೆ ಬೆಳಗೋಣ.ʼಸಂಕಲ್ಪದಿಂದ ಸಿದ್ಧಿ ಎಂದು ನಮ್ಮ ಪ್ರಧಾನಿಗಳು ಹೇಳಿದ ಹಾಗೆ ಭಾಷೆಯನ್ನು ಶುದ್ಧವಾಗಿ ಮಾತನಾಡಿ. ಭಾಷೆಯನ್ನು ಗೌರವಿಸೋಣ.

ಇತರೆ ಪ್ರಬಂಧಗಳು

100+ ಕನ್ನಡ ಪ್ರಬಂಧಗಳು

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ

ಕನ್ನಡ ಭಾಷೆಯ ನುಡಿಮುತ್ತುಗಳು

ಇನ್ನೂ ಹೆಚ್ಚಿನ ಪ್ರಬಂಧಗಳಿಗಾಗಿ ಕನ್ನಡ ಪ್ರಬಂಧಗಳು ಅಪ್ ಡೌನ್ಲೋಡ್ ಮಾಡಿ : Kannada Prabandha App

Leave a Comment