ಕನ್ನಡ ನಾಡು ನುಡಿ ಪ್ರಬಂಧ | Kannada Nadu Nudi Prabandha in Kannada

ಕನ್ನಡ ನಾಡು ನುಡಿ ಪ್ರಬಂಧ, Kannada Nadu Nudi Prabandha in Kannada, Kannada Nadu Nudi Essay in Kannada, essay about kannada nadu nudi

ಕನ್ನಡ ನಾಡು ನುಡಿ ಪ್ರಬಂಧ

ಕನ್ನಡ ನಾಡು ನುಡಿ ಪ್ರಬಂಧ Kannada Nadu Nudi Prabandha in Kannada

ಈ ಲೇಖನಿಯಲ್ಲಿ ಕನ್ನಡ ನಾಡು ನುಡಿ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ. ಇದರ ಸಹಾಯವನ್ನು ಎಲ್ಲರೂ ಪಡೆದುಕೊಳ್ಳಿ.

ಪೀಠಿಕೆ:

ಭಾಷೆ ಸಂವಾಹನದ ವಾಹಕ. ಅದು ಇಲ್ಲದೆ ಯಾವುದೇ ಒಂದು ಪ್ರಾಣಿ ಸಂವಾಹಿಸಲು ಸಾಧ್ಯವಿಲ್ಲ.ಮಾನವ ಇತರೆ ಪ್ರಾಣಿಗಳಿಗಿಂತ ಭಿನ್ನರೀತಿಯ ಸಂವಾಹನದ ಮೂಲಕ ಮತ್ತೊಬ್ಬ ಮಾನವನೊಡನೆ ಸಂವಾಹಿಸಲು ವಿಶಿಷ್ಟವಾದ ಭಾಷೆಗಳನ್ನು ರೂಪಿಸಿಕೊಂಡಿದ್ದಾನೆ.
ಭಾಷೆ ಎಂಬುವುದು ಕೇವಲ ಸಂವಾಹನಕ್ಕೆ ಅವಶ್ಯವಾದ ಮಾಧ್ಯಮವೆ ಆದರೂ, ವ್ಯಕ್ತಿ ಭಾವನೆಗಳು ಹೊರ ಹೊಮ್ಮಲು ಇರುವ ವಾಹಕವೂ ಸಹ ಆಗಿದೆ. ಪ್ರಪಂಚದಲ್ಲಿ, ಅನೇಕ ಜನರು ನಿರ್ದಿಷ್ಟವಾದ ಪ್ರದೇಶದೊಳಗೆ ಒಂದು ನಿರ್ದಿಷ್ಟವಾದ ಭಾಷೆಯ ಮೂಲಕ ದೈನಂದಿನ ಚಟುವಟಿಕೆಗಳಿಗಾಗಿ ಮಾತು, ಬರಹಗಳ ಮೂಲಕ ವ್ಯವಹರಿಸುತ್ತಿದ್ದಾರೆ. ಇಂತಹ ಭಾಷೆಗಳಲ್ಲಿ ಕನ್ನಡವೂ ಸಹ ಒಂದು

ವಿಷಯ ವಿವರಣೆ

ನಮ್ಮ ಮಾತೃ ಭಾಷೆ ಯಾವುದೇ ಇರಲಿ ವಿದ್ಯಾರ್ಥಿಗಳು ಕಾಲೇಜು, ಶಾಲಾ ಅವರಣದೊಳಗೆ ಪ್ರವೇಶಿಸುತ್ತಿದ್ದಂತೆ ಕನ್ನಡ ಭಾಷೆ ಬಳಸುವ ಮೂಲಕ ಭಾಷೆಯ ಉಳಿವಿಗಾಗಿ ಪ್ರೌಢಮಟ್ಟದಲ್ಲಿಯೆ ಪಣತೊಡಬೇಕು. ಸಾಹಿತಿಗಳು ನೀಡಿದ ಸಾಹಿತ್ಯ ಕೊಡುಗೆ ಭಾಷೆಯನ್ನು ಮತ್ತಷ್ಟು ಭದ್ರತೆಗೊಳಿಸಿದೆ. ಅಲ್ಲದೆ ಎರಡು ಸಾವಿರ ವರ್ಷಕ್ಕಿಂತಲೂ ಹೆಚ್ಚು ಇತಿಹಾಸ ಹೊಂದಿರುವ ಕನ್ನಡದ ಹಿರಿಮೆಯನ್ನು ಇಂದಿಗೂ ಕಾಪಾಡಿಕೊಂಡು ಬಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಆಚಾರ, ವಿಚಾರ, ಕನ್ನಡದ ಉಚ್ಚಾರಣೆ, ಉಡುಗೆ, ತೂಡುಗೆ, ಸಂಸ್ಕೃತಿ ಕರ್ನಾಟಕವನ್ನು ಇಂದಿಗೂ ಜೀವಂತವಾಗಿ ಕಾಣ ಬಹುದಾಗಿದೆ.

ಕನ್ನಡ, ಕರುನಾಡು ಇತ್ತೀಚಿನದೆ? ಕನ್ನಡ ನುಡಿಯನ್ನು ಆಡುಮಾತಾಗಿ ೨೫೦೦ ವರ್ಷಗಳಿಂದ ಬಳಸಲಾಗುತ್ತಿದೆ. ಕನ್ನಡ ಲಿಪಿ ಮತ್ತು ಬರೆಯುವ ಪದ್ಧತಿ ಸುಮಾರು ೧೯೦೦ ವರ್ಷಗಳ ಹಿಂದೆಯೇ ಇದ್ದಿತು. ಇನ್ನು ಕರುನಾಡು ಯಾವಾಗಿನಿಂದ ಇದೆ ನೀವೆ ಊಹಿಸಿಕೊಳ್ಳಿ.

ಹಳೆಯ ಇಂಗ್ಲೀಷ್ ಭಾಷೆ ಸುಮಾರು ಕ್ರಿ.ಶ. ೧೦೦೦ ರಲ್ಲಿ ಜನರಿಂದ ಬಳಸಲ್ಪಡುತ್ತಿತ್ತು. ಬರಹದಲ್ಲಿ ಇಂಗ್ಲೀಷ್ ಪ್ರಭುದ್ಧಮಾನಕ್ಕೆ ಬಂದಿದ್ದು ಎಷ್ಟೋ ವರ್ಷಗಳು ಕಳೆದ ಬಳಿಕ. ನಡು ಇಂಗ್ಲೀಷ್ ಕ್ರಿ.ಶ. 1400 ರಲ್ಲಿ ಆಡು ಮತ್ತು ಬರಹದ ರೂಪದಲ್ಲಿ ಬಳಸಲ್ಪಟ್ಟಿತು.

ಕನ್ನಡ ನಾಡು ನುಡಿ

ಕನ್ನಡದ ಬಗ್ಗೆ ಹೇಳುವುದಾದರೆ, ಕನ್ನಡವು ದಕ್ಷಿಣ ಭಾರತದ ಭಾಷೆಗಳ ಮೂಲವೆಂದು ಗುರುತಿಸಲ್ಪಟ್ಟಿರುವ ಮೂಲದ್ರಾವಿಡದಿಂದ ಯಾವಾಗ ಆಡುಭಾಷೆಯಾಗಿ ಪರಿವರ್ತಿತವಾಯಿತೆಂದು ಖಚಿತವಾಗಿ ಹೇಳಲು ಅಸಾಧ್ಯ. ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವು ಕೂಡ ಆಡುಭಾಷೆಯಾಗಿ ಬೇರ್ಪಟ್ಟಿತೆಂದು ಹೇಳಲಾಗುತ್ತದೆ.

ಈ ಭಾಷೆಯ ಲಿಪಿಯು ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಳೆಯದು. ಐದನೆಯ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಕನ್ನಡವು ಸಾಕಷ್ಟು ಅಭಿವೃದ್ಧಿ ಹೊಂದಿತು. ಲಿಪಿಯ ಉಗಮದ ಇತಿಹಾಸವನ್ನು ಗಮನಿಸಿದರೆ, ತಮಿಳಿಗಿಂತಲೂ ಕನ್ನಡದ ಲಿಪಿಯೇ ಮೊದಮೊದಲಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬಂದಂತೆ ಕಾಣಿಸುತ್ತದೆ. ಕುಮುದೇಂದು ಮುನಿ ರಚಿಸಿದ ‘ಸಿರಿಭೂವಲಯ’ ಗ್ರಂಥದಲ್ಲಿ ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆ ಎಂದು ಸಾಭೀತುಪಡಿಸಿದ್ದಾರೆ. ಆದರೆ, ಅವರ ಗ್ರಂಥವನ್ನು ಜನ ಸಾಮಾನ್ಯರಿಗೆ ದೊರಕುವ ಹಾಗೆ ಸರ್ಕಾರ ಗಮನಹರಿಸಿಲ್ಲ. ಕನ್ನಡ ವೇದಗಳ ಕಾಲದಿಂದಲೂ ಬಳಕೆಯಲ್ಲಿದ್ದಿತು ಹಾಗೂ ಅದು ನಾಡ ರಕ್ಷಣೆಯ ಸಲುವಾಗಿ ಗುಪ್ತ ಭಾಷೆಯಾಗಿ ಬಳಕೆಯಾಗಿತ್ತೆಂದು ಕೆಲವು
ಶಾಸನಗಳಲ್ಲಿ ಉಲ್ಲೇಖವಾಗಿದೆ.

ನವೆಂಬರ್‌ 1, ಕನ್ನಡಿಗರಿಗೆಲ್ಲ ಸಂಭ್ರಮ ಮತ್ತು ಸಡಗರದ ದಿನ. ಹಾಗೆಯೇ ಕನ್ನಡ ನಾಡು-ನುಡಿಯ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ದಿನವೂ ಆಗಿದೆ.

ಸರಿಸುಮಾರು ಎರಡೂವರೆ ಸಾವಿರ ವರ್ಷಗಳ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ ಈ ಕನ್ನಡ ನಾಡನ್ನು ಶಾತವಾಹನ, ಗಂಗ, ಕದಂಬ, ಚಾಲುಕ್ಯ,

ರಾಷ್ಟ್ರಕೂಟ ಹೊಯ್ಸಳ ಮುಂತಾದ ರಾಜವಂಶದವರು ಆಳುವುದಲ್ಲದೆ ರಾಷ್ಟ್ರದ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ.

ಉಪಸಂಹಾರ

ಕನ್ನಡ ನಾಡು ನುಡಿ ಉಳಿಸುವಲ್ಲಿ ಕನ್ನಡಿಗರ ಪಾತ್ರ ಬಹಳ ಮುಖ್ಯ. ನಾವು ಕನ್ನಡಿಗರು ನಮ್ಮ ಭಾಷೆಯನ್ನು ಮರೆಯಬಾರದು. ನಮ್ಮ ಕನ್ನಡ ತನವನ್ನು ಬಿಡಬಾರದು, ಕನ್ನಡಿಗರಾದ ನಾವು ನಾಡು ನುಡಿ ಬಗ್ಗೆ ಗೌರವ ಇರಬೇಕು. ಹಾಗೆ ನಮ್ಮ ಕನ್ನಡ ನಾಡು ನುಡಿ ಉಳಿಸಿ-ಬೆಳೆಸಬೇಕು. ಇದು ನಮ್ಮ ಕನ್ನಡಿಗರ ಕರ್ತವ್ಯ.

ಇತರೆ ಪ್ರಬಂಧಗಳು:

100+ ಕನ್ನಡ ಪ್ರಬಂಧಗಳು

ಕನ್ನಡ ಭಾಷೆಯ ಬಗ್ಗೆ ಪ್ರಬಂಧ

ಕನ್ನಡ ಭಾಷೆಯನ್ನು ಉಳಿಸುವಲ್ಲಿ ಕನ್ನಡಿಗರ ಪಾತ್ರ ಪ್ರಬಂಧ

ಕನ್ನಡ ರಾಜ್ಯೋತ್ಸವ ಮೇಲೆ ಕನ್ನಡ ಪ್ರಬಂಧ

ಇನ್ನೂ ಹೆಚ್ಚಿನ ಪ್ರಬಂಧಗಳಿಗಾಗಿ ಕನ್ನಡ ಪ್ರಬಂಧ ಅಪ್ ಡೌನ್ಲೋಡ್ ಮಾಡಿ : Kannada Prabandha App

Leave a Comment