ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ:

ಈ ಲೇಖನಿಯ ಮೂಲಕ ಸ್ನೇಹಿತರೆ ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಎಲ್ಲರಿಗೂ ಅನುಕೂಲವಾಗುವಂತೆ ಉಚಿತವಾಗಿ ನೀಡಿದ್ದೇವೆ.

ಪೀಠಿಕೆ:

ಮಾನವನು ಬಳಸಿ ಬಿಸಾಡಿದ ವಸ್ತುಗಳೇ ತ್ಯಾಜ್ಯಾವಸ್ತುಗಳು, ಕಸದ ಸಂಗ್ರಹಣೆ,ಸಂಸ್ಕರಣೆ ,ಮರುಬಳಕೆ, ಅಥವಾ ವಿಲೇವಾರಿಯನ್ನು ತ್ಯಾಜ್ಯಾವಸ್ತುಗಳ ನಿರ್ವಹಣೆ ಎನುತ್ತೇವೆ. ಹಾಗೆ ತ್ಯಾಜ್ಯಾವಸ್ತುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇದ್ದರೆ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ತ್ಯಾಜ್ಯಾವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ಒಳ್ಳೆಯದು.

ವಿಷಯ ವಿವರಣೆ:

ಮಾನವನು ಬಳಸಿದ ವಸ್ತುಗಳ ಉಳಿದ ಭಾಗವನ್ನು ತ್ಯಾಜ್ಯಾದ ಉಗಮ ಎಂದು ಹೇಳಬಹುದು, ತ್ಯಾಜ್ಯಾವಸ್ತುಗಳು ಪರಿಸರ ಹಾಗೂ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ನಾವು ಕಸಗಳನು ಮೂರು ರೀತಿಯಾಗಿ ವಿಂಗಡಿಸಬಹುದು ಅವುಗಳೆಂದರೆ ಹಸಿಕಸ,ಒಣ ಕಸ,ಅಪಾಯಕಾರಿ ಕಸ,ಎಂದು ಹೇಳಬಹುದು.

ಹಸಿಕಸ ಇದು ಮುಖ್ಯವಾಗಿ ಪ್ರಾಣಿಜನ್ಯ ಮತ್ತು ಸಸ್ಯಜನ್ಯ ಇವು ಹಸಿಕಸಕ್ಕೆ ಸೇರಿದ ಪದ್ದಾರ್ಥಗಳು ಇವುಗಳು ಮಣ್ಣಿನಲ್ಲಿ ಮಣ್ಣಾಗಿ ಹೋಗುವ ಸಾವಯವ ಪದ್ದಾರ್ಥವಾಗಿದೆ, ಹಸಿಕಸಗಳು ನಮ್ಮ ನಿಮ್ಮ ಮನೆಯಲ್ಲಿ ತರಕಾರಿಗಳ ತ್ಯಾಜ್ಯಾವಾದ ವಸ್ತುಗಳಾಗಿವೆ, ಇವುಗಳನ್ನು ನಾವು ಸರಿಯಾಗಿ ವಿಲೇವಾರಿ ಮಾಡಬೇಕು. ಹಸಿಕಸ ಮತ್ತು ಒಣಕಸವನ್ನು ಬೇರೆ-ಬೇರೆ ಮಾಡಬೇಕು

ಮಾನವವನು ಬಳಸಿದ ವಸ್ತು ಉಳಿದ ಭಾಗವನ್ನು ತ್ಯಾಜ್ಯದ ಉಗಮ ಹಾಗೆ ಇದರ ಜೊತೆಯಲ್ಲಿ ಕಸದೊಳಗಿನ ರಸ ತೆಗೆಯಲು ಕೂಡ ಇವು ಸಂಪನ್ಮೂಲಗಳಾಗಿ ಬಹುಮುಖ್ಯ ಪಾತ್ರವಹಿಸಿದೆ, ಅನೇಕ ಪದ್ದತಿಗಳು ಮತ್ತು ವಿವಿಧ ಕ್ಷೇತ್ರಗಳ ಪರಿಣಿತರ ನೆರವಿನೊಂದಿಗೆ ಘನ ತ್ಯಾಜ್ಯ, ದ್ರವರೂಪದ ಪದಾರ್ಥಗಳು, ಅನಿಲ ರೂಪದ ವ್ಯರ್ಥ ವಿಷ-ಕಸ ಅಥವಾ ರೇಡಿಯೊ ಆಕ್ಟಿವ್‌ ಹೊರಸೂಸುವ ವಸ್ತುಗಳ ನಿರ್ವಹಣೆಯನ್ನು ತ್ಯಾಜ್ಯವಸ್ತು ಉಸ್ತುವಾರಿ ಎನ್ನಬಹುದು.

ಜೈವಿಕ ಕಸ ವಿಂಗಡಣೆಯು ಎರಡು ಬಗೆಯಲ್ಲಿ ವಿಭಿಜಿಸಬಹುದು ಅವುಗಳು ಆಮ್ಲಜನಕದಿಂದ ಜೀವಿಸುವ ಅಥವಾ ಆಮ್ಲಜನಕ ರಹಿತ ಜೀವಾಣುಗಳಿಂದ ಉಂಟಾದ ತ್ಯಾಜ್ಯ ವಿಭಜನಾ ಪದ್ದತಿ. ಅದಾಗ್ಯೂ ಎರಡು ತಂತ್ರಗಾರಿಕೆಗಳನ್ನು ಅನುಸರಿಸಲಾಗುತ್ತದೆ. ಮತ್ತು ಕಸದ ವಿಲೇವಾರಿಗೆ ಉತ್ತಮ ಉದಾಹರಣೆ ಎಂದರೆ ಹಸಿರು ತೊಟ್ಟಿ ಯೋಜನೆ.

ತ್ಯಾಜ್ಯಗಳಲ್ಲಿರುವ ಇಂಧನವನ್ನು ನೇರವಾಗಿ ಪಡೆದುಕೊಳ್ಳಬಹುದು, ಅಂದರೆ ಇಡೀಯಾಗಿ ಇಂಧನದಂತೆ ಬಳಸಬಹುದು, ಇಲ್ಲವೇ ಅವುಗಳನ್ನು ಸಂಸ್ಕರಿಸಿ ಬೇರೆ ತರಹದಲ್ಲಿ ಇಂಧನಕ್ಕೆ ಬಳಸಬಹುದು, ಉಷ್ಣತಾ ವಿಧಾನದಿಂದ ಮರುಬಳಕೆ ಮಾಡಿದ ಕಸದಲ್ಲಿರುವ ಇಂಧನವನ್ನು ಅಡುಗೆಗೆ ಇಲ್ಲವೆ ಕಾಯಿಸಲು ಅಥವಾ ಬ್ಲಾಯಿರಗಳಲ್ಲಿ ಬಳಸಿ ಆವಿ ಮತ್ತು ವಿದ್ಯುತ್ ಉತ್ಪಾದನೆಗೆ ಹಬೆ ಯಂತ್ರಗಳಲ್ಲಿ ಉಪಯೋಗಿಸಲಾಗುತ್ತದೆ.

ತ್ಯಾಜ್ಯ ನಿರ್ವಹಣೆಯ ಪ್ರಮುಖ ಉದ್ದೇಶವೇ ಕಸ ಹಾಗೂ ನಿರುಪಯುಕ್ತ ವಸ್ತುಗಳನ್ನು ಅದಷ್ಟು ಕಡಿಮೆ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವುದು ಉತ್ತಮ ವಿಧಾನ, ಇದನ್ನು ತ್ಯಾಜ್ಯ ಬೀಳದಂತೆ ಎಚ್ಚರಿಕೆ ವಹಿಸುವ ಮೂಲಕ ನಿಯಂತ್ರಿಸಬಹುದಾಗಿದೆ.

ಕಸ ಹಾಗು ತ್ಯಾಜ್ಯಗಳ ಸಂಗ್ರಹಣಾ ಪದ್ದತಿಯು ವಿವಿಧ ದೇಶಗಳಲ್ಲಿ ಹಲವು ಪ್ರದೇಶಗಳಲ್ಲಿ ಭಿನ್ನವಾಗಿರುತ್ತದೆ.ಬಹುತೇಕವಾಗಿ ಹಿಂದೂಳಿದ ದೇಶಗಳಲ್ಲಿ ಯಾವುದೇ ಸಾಂಪ್ರದಾಯಿಕ ಪದ್ದತಿಗಳನ್ನು ಕ್ರಮಗಳನ್ನು ಕಸ ಸಂಗ್ರಹಣಾ ವಿಷಯದಲ್ಲಿ ಬಳಸುವುದಿಲ್ಲ, ಅದೇ ನಗರಗಳಲ್ಲಿ ಪ್ರತಿಯೊಂದು ಮನೆಯಲ್ಲಿ ಮೂರು ರೀತಿಯ ಕಸ ಸಂಗ್ರಹ ತೊಟ್ಟಿಗಳು ಕಾಣಬಹುದು

ನಗರಸಭೆಯವರ ಮನವಿಯ ಮೇರೆಗೆ ಹಲವಾರು ಜನ ತ್ಯಾಜ್ಯ ಮಿಶ್ರಣದ ಕಸದ ತೊಟ್ಟಿಗಳು ಕಾಣಬಹುದು, ಸಮಗ್ರ ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ, ತ್ಯಾಜ್ಯ ಸಂಗ್ರಹಣಾ ಕಾರ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ.

ಪೇಪರ್‌, ಪ್ಲಾಸ್ಟಿಕ್‌, ಬಾಟಲುಗಳು, ಸಿಡಿಗಳು, ರಬ್ಬರ್‌, ಬಟ್ಟೆ, ಹಾಲಿನ ಪ್ಯಾಕೆಟ್ ಗಳು ಇನ್ನಿತರ ಯಾವುದೇ ರೀತಿಯ ಮರುಬಳಕೆ ಮಾಡಬಹುದಾದ ಅಥವಾ ಕರಗಿಸಿ ಬೇರೇ ವಸ್ತುವಾಗಿ ತಯಾರಿಸಬಹುದಾದ ವಸ್ತುಗಳು ಒಣಕಸವಾಗಿದೆ ಹಾಗೆ ಅಪಾಯಕಾರಿ ಪದಾರ್ಥಗಳು ಬ್ಲೇಡ್‌, ಒಡೆದ ಗಾಜಿನ ಬಾಟಲಿ, ಸಿರಿಂಜು,ಸ್ಯಾನಿಟರಿ ಪ್ಯಾಡು,ಡಯಾಪರ್‌ ಇತ್ಯಾದಿ. ಇವು ಮಣ್ಣಿನಲ್ಲಿ ಸೇರಿದಲ್ಲಿ ಮಣ್ಣನ್ನು ಕಲುಷಿತವಾಗಿಸುತ್ತವೆ ಹಾಗೂ ಅಪಾಯಕಾರಿ ರಾಸಾಯನಿಕಗಳನ್ನು ಮಣ್ಣಿಗೆ ಬಿಡುತ್ತವೆ.

ಉಪಸಂಹಾರ:

ಹಾನಿಕಾರಕ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಹಾಗೆ ಮನೆಗಳಲ್ಲಿ ಕಸ ವಿಂಗಡನೆ ಬಗ್ಗೆ ಮಾಹಿತಿ ನೀಡುವುದು ಹಾಗೆ ಜಾಗೃತಿ ಮೂಡಿಸುವುದು, ಈ ಮೊದಲಾದ ಕ್ರಮಗಳಿಂದ ಮಾತ್ರ ತ್ಯಾಜ್ಯವಸ್ತು ನಿರ್ವಹಣೆಯನ್ನು ಮಾಡಬಹುದು.

FAQ

ಕಸ ಎಂದರೇನು?

ಕಸ ಎಂದರೆ ಮಾನವರು ಎಸೆಯುವ ಮತ್ತು ಉಪಯುಕ್ತವಾಗಿಲ್ಲ ಎಂದು ಎಸೆಯುವ ತ್ಯಾಜ್ಯ ವಸ್ತು.

ತ್ಯಾಜ್ಯ ವಿಲೇವಾರಿ ಎಂದರೇನು?

ಕಸವನ್ನು ಸಾಮಾನ್ಯವಾಗಿ ವಿಂಗಡಿಸಿ ನಿರ್ದಿಷ್ಟ ಬಗೆಗಳ ವಿಲೇವಾರಿ ಮಾಡುವುದು ತ್ಯಾಜ್ಯ ವಿಲೇವಾರಿ.

ತ್ಯಾಜ್ಯ ನಿರ್ವಹಣೆ ಎಂದರೇನು?

ಕಸ ಸಂಗ್ರಹ, ಸಾಗಣೆ, ಸಂಸ್ಕರಣೆ, ಮರುಬಳಕೆ ಅಥವಾ ವಿಲೆವಾರಿ ಹಾಗೂ ತ್ಯಾಜ್ಯ ವಸ್ತುಗಳ ನಿರ್ವಹಣೆಯನ್ನು ತ್ಯಾಜ್ಯ ನಿರ್ವಹಣೆ ಎನ್ನುತ್ತೇವೆ.

ಇತರೆ ಪ್ರಬಂಧಗಳು:

ಆಹಾರ ಮತ್ತು ಆರೋಗ್ಯ ಪ್ರಬಂಧ

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | ativrushti anavrushti prabandha

ಸಾವಯವ ಕೃಷಿ ಪ್ರಬಂಧ | savayava krishi prabandha in kannada

ನನ್ನ ಕನಸಿನ ಭಾರತ ಪ್ರಬಂಧ

Leave a Comment